ಆ್ಯಪ್ನಗರ

ಸರಕಾರಿ ಜಾಗ ಒತ್ತುವರಿ ತೆರವಿಗೆ ಆಗ್ರಹಿಸಿ ಪ್ರತಿಭಟನೆ

ತಾಲೂಕು ಮುದಿಗಿರಿ ಮಜರಗಡ್ಡೂರು ಗ್ರಾ.ಪಂ ವ್ಯಾಪ್ತಿಯ ಚಿಕ್ಕಗೊಲ್ಲಹಳ್ಳಿಯಲ್ಲಿ ಅಕ್ರಮವಾಗಿ ಒತ್ತುವರಿಮಾಡಿರುವ ಸರಕಾರಿ ಜಮೀನನ್ನು ಕೂಡಲೇ ತೆರವುಗೊಳಿಸಬೇಕೆಂದು ಒತ್ತಾಯಿಸಿ ಗ್ರಾಮಸ್ಥರು, ಡಿ.ವೈ.ಎಫ್‌.ಐ ಪದಾಧಿಕಾರಿಗಳು ನಗರದ ಮಿನಿ ವಿಧಾನಸೌಧದ ಎದುರು ಪ್ರತಿಭಟಿಸಿದರು.

Vijaya Karnataka 5 Feb 2019, 5:00 am
ಮುಳಬಾಗಲು: ತಾಲೂಕು ಮುದಿಗಿರಿ ಮಜರಗಡ್ಡೂರು ಗ್ರಾ.ಪಂ ವ್ಯಾಪ್ತಿಯ ಚಿಕ್ಕಗೊಲ್ಲಹಳ್ಳಿಯಲ್ಲಿ ಅಕ್ರಮವಾಗಿ ಒತ್ತುವರಿಮಾಡಿರುವ ಸರಕಾರಿ ಜಮೀನನ್ನು ಕೂಡಲೇ ತೆರವುಗೊಳಿಸಬೇಕೆಂದು ಒತ್ತಾಯಿಸಿ ಗ್ರಾಮಸ್ಥರು, ಡಿ.ವೈ.ಎಫ್‌.ಐ ಪದಾಧಿಕಾರಿಗಳು ನಗರದ ಮಿನಿ ವಿಧಾನಸೌಧದ ಎದುರು ಪ್ರತಿಭಟಿಸಿದರು.
Vijaya Karnataka Web protest against government land encroachment
ಸರಕಾರಿ ಜಾಗ ಒತ್ತುವರಿ ತೆರವಿಗೆ ಆಗ್ರಹಿಸಿ ಪ್ರತಿಭಟನೆ


ಚಿಕ್ಕಗೊಲ್ಲಹಳ್ಳಿಯಲ್ಲಿ 1992-93ನೇ ಸಾಲಿನಲ್ಲಿ ಗ್ರಾಮ ವಿಕಾಸಕೇಂದ್ರಕ್ಕೆ ಮೀಸಲಿಟ್ಟಿದ್ದ ಸರಕಾರಿ ಜಮೀನಿದ್ದು, ದಕ್ಷಿಣ - ಉತ್ತರ 100 ಅಡಿ, ಪೂರ್ವ ಪಶ್ಚಿಮ 100 ಅಡಿ ವಿಸ್ತೀರ್ಣ ಇದೆ ಇತ್ತೀಚಿನ ವರ್ಷಗಳಲ್ಲಿ ಗ್ರಾಮ ವಿಕಾಸದ ಚಟುವಟಿಕೆಗಳು ನೀತುಹೋಗಿದ್ದು, ಕೇಲವೆ ಕಟ್ಟಡ ಮಾತ್ರ ಉಳಿದಿದೆ. ಗ್ರಾಮದ ಕೇಲವರು ಈ ಜಾಗವನ್ನು ಅಕ್ರಮವಾಗಿ ಪ್ರವೇಶ ಮಾಡಿ ಬಣವೆ ಹಾಕುವುದು, ಹಸು ಕಟ್ಟುವುದನ್ನು ಮಾಡುತ್ತಿದ್ದರು ನಂತರದ ದಿನಗಳಲ್ಲಿ ಈ ಜಾಗ ತಮಗೆ ಸೇರಿದ್ದು ಎಂದು ಹೇಳುತ್ತಿದ್ದಾರೆ. ಈ ಬಗ್ಗೆ ಗ್ರಾಮಸ್ಥರು ಪಿ.ಡಿ.ಒಗೆ ದೂರುಸಲ್ಲಿಸಿದ್ದರ ಹಿನ್ನೆಲೆಯಲ್ಲಿ ಪಿ.ಡಿ.ಒ ಸ್ಥಳ ಪರಿಶೀಲಿಸಿ ಒತ್ತುವರಿದಾರರಿಗೆ ಕೂಡಲೇ ತೆರವುಗೊಳಿಸಬೇಕೆಂದು ಸೂಚಿಸಿದ್ದರು ತೆರವುಗೊಳಿಸಿಲ್ಲ. ಈ ಜಾಗವನ್ನು ಸರಕಾರಿ ಶಾಲೆಗೆ ಆಟದ ಮೈದಾನ ಅಥವಾ ಅಂಗನವಾಡಿ, ಗ್ರಂಥಾಲಯ, ಸಮುದಾಯ ಭವನ ನಿರ್ಮಾಣಕ್ಕೆ ಉಪಯೋಗಿಸಿದರೆ ಹೆಚ್ಚು ಅನುಕೂಲವಾಗುತ್ತದೆ. ಕಂದಾಯ ಇಲಾಖೆ ಅಧಿಕಾರಿಗಳು ಕೂಡಲೇ ಒತ್ತುವರಿ ಜಾಗ ತೆರವುಗೊಳಿಸಲು ಕ್ರಮ ತೆಗೆದುಕೊಳ್ಳಬೇಕು ಇಲ್ಲದಿದ್ದ ಪಕ್ಷ ದಲ್ಲಿ ಹೋರಾಟ ಮಾಡಲಾಗುವುದೆಂದು ಎಚ್ಚರಿಸಿದರು.

ಮನವಿ ಸ್ವೀಕರಿಸಿದ ಉಪತಹಸೀಲ್ದಾರ್‌ ವೆಂಕಟೇಶಯ್ಯ ಮಾತನಾಡಿ, ಈ ಸಂಬಂಧ ತಹಸೀಲ್ದಾರ್‌ ಅವರ ಗಮನಕ್ಕೆ ತಂದು ಸೂಕ್ತಕ್ರಮಕ್ಕೆ ಮುಂದಾಗುವುದಾಗಿ ತಿಳಿಸಿದರು.

ಡಿ.ವೈ.ಎಫ್‌.ಐ ಜಿಲ್ಲಾ ಕಾರ್ಯದರ್ಶಿ ಕೆ.ವಾಸುದೇವರೆಡ್ಡಿ, ಎಸ್‌.ಎಫ್‌.ಐ ಜಿಲ್ಲಾ ಕಾರ್ಯದರ್ಶಿ ಅಂಬ್ಲಿಕಲ್‌ ಶಿವು ಯುವಕ ಸಂಘದ ಅಧ್ಯಕ್ಷ ಶ್ರೀನಿವಾಸ್‌, ಮುಖಂಡರಾದ ರಾಮಕೃಷ್ಣಪ್ಪ, ಎಸ್‌.ಆರ್‌. ಶ್ರೀನಿವಾಸ್‌, ಉಪೇಂದ್ರ, ಕಿಶೋರ್‌, ವೆಂಕಟೇಶ್‌, ವಿಜಯ್‌ ಕುಮಾರ್‌, ಬಾಸ್ಕರ್‌, ಸುರೇಶ್‌ ಮತ್ತಿತರರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ