ಆ್ಯಪ್ನಗರ

ನೀರಿನ ಸಮಸ್ಯೆ ಇರುವೆಡೆ ಟ್ಯಾಂಕರ್‌ ಪೂರೈಕೆ ಮಾಡಿ

ಕುಡಿಯುವ ನೀರಿನ ಕೊರತೆ ಕಂಡು ಬಂದರೆ ಟ್ಯಾಕರ್‌ ಮೂಲಕ ಸಾರ್ವಜನಿಕರಿಗೆ ಸಮರ್ಪಕವಾಗಿ ನೀರು ಒದಗಿಸಿ ಜನರಿಗೆ ಸ್ಪಂದಿಸಬೇಕು. ಬತ್ತಿರುವ ನೆಲದಲ್ಲಿ ಮಳೆ ಬರುವವರೆಗೆ ಹೊಸದಾಗಿ ಕೊಳವೆಬಾವಿ ಕೊರೆದು ಹಣ ಪೋಲು ಮಾಡುವ ಬದಲು ಖಾಸಗಿಯರಿಂದ ನೀರು ಖರೀದಿಸಿ ಸರಬರಾಜು ಮಾಡಿ ಜನರ ದಾಹ ನೀಗಿಸಬೇಕೆಂದು ಜಿಲ್ಲಾ ಪಂಚಾಯಿತಿ ಸಿಇಒ ಜಿ.ಜಗದೀಶ್‌ ಅಧಿಕಾರಿಗಳಿಗೆæ ಸೂಚಿಸಿದರು.

Vijaya Karnataka 23 Apr 2019, 5:00 am
ಶ್ರೀನಿವಾಸಪುರ : ಕುಡಿಯುವ ನೀರಿನ ಕೊರತೆ ಕಂಡು ಬಂದರೆ ಟ್ಯಾಕರ್‌ ಮೂಲಕ ಸಾರ್ವಜನಿಕರಿಗೆ ಸಮರ್ಪಕವಾಗಿ ನೀರು ಒದಗಿಸಿ ಜನರಿಗೆ ಸ್ಪಂದಿಸಬೇಕು. ಬತ್ತಿರುವ ನೆಲದಲ್ಲಿ ಮಳೆ ಬರುವವರೆಗೆ ಹೊಸದಾಗಿ ಕೊಳವೆಬಾವಿ ಕೊರೆದು ಹಣ ಪೋಲು ಮಾಡುವ ಬದಲು ಖಾಸಗಿಯರಿಂದ ನೀರು ಖರೀದಿಸಿ ಸರಬರಾಜು ಮಾಡಿ ಜನರ ದಾಹ ನೀಗಿಸಬೇಕೆಂದು ಜಿಲ್ಲಾ ಪಂಚಾಯಿತಿ ಸಿಇಒ ಜಿ.ಜಗದೀಶ್‌ ಅಧಿಕಾರಿಗಳಿಗೆæ ಸೂಚಿಸಿದರು.
Vijaya Karnataka Web provide a tanker with water problem
ನೀರಿನ ಸಮಸ್ಯೆ ಇರುವೆಡೆ ಟ್ಯಾಂಕರ್‌ ಪೂರೈಕೆ ಮಾಡಿ


ತಾಲೂಕಿನ ಹೊಗಳಗೆರೆ ಮಾವು ಅಭಿವೃದ್ಧಿ ಮತ್ತು ಸಂಶೋಧನಾ ಕೇಂದ್ರದ ಸಭಾಂಗಣದಲ್ಲಿ ಕೋಲಾರ ಜಿಲ್ಲಾ ಪಂಚಾಯಿತಿಯಿಂದ ಆಯೋಜಿಸಿದ್ದ ಕುಡಿಯುವ ನೀರು ಮತ್ತು ಖಾತ್ರಿ ಯೋಜನೆ ಅಭಿವೃದ್ಧಿ ಕುರಿತು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಸಭೆಯ ಅಧ್ಯಕ್ಷ ತೆ ವಹಿಸಿ ಮಾತನಾಡಿದರು.

ಮಳೆ ಇಲ್ಲದೆ ಭೂಮಿ ಬತ್ತಿ ಬರಡಾಗಿದೆ. ಈಗ ಕೊಳವೆಬಾವಿ ಕೊರೆದರೂ ನೀರು ಸಿಗುವುದು ಕಷ್ಟದ ಮಾತು. ಗೊತ್ತಿದ್ದೂ ಬೋರ್‌ ಹಾಕಿಸಿದರೆ ನೀರು ಸಿಗದಿದ್ದರೆ ಸರಕಾರದ ಹಣ ಪೋಲಾಗುತ್ತದೆ. ಆದುದರಿಂದ ಗ್ರಾಮಗಳಿಗೆ ಹಾಕಿಸಿರುವ ಕೊಳವೆಬಾವಿಗಳಲ್ಲಿ ಸಿಗುವ ನೀರು ಸದ್ಬಳಕೆ ಮಾಡಿಕೊಂಡು ಕೊರತೆಯಾದರೆ ಸಮೀಪದ ಖಾಸಗಿಯವರಿಂದ ಟ್ಯಾಂಕರ್‌ ಮೂಲಕ ನೀರು ಖರೀದಿಸಿ ಒದಗಿಸಿ. ಅದು ಬಿಟ್ಟು ಈಗ ನಾವೇನು ಮಾಡಲಾಗದು ಎಂದರು.

ಶ್ರಮ ನನಗೆ ಗೊತ್ತು: ಎ.ಕೊತ್ತೂರು, ಕರಿಪಲ್ಲಿ, ಚೂಲೇಪಲ್ಲಿ, ಬಂತೋನೊ ಕಟವ, ಜಿಂಕಲವಾರಿಪಲ್ಲಿ, ಮಂಚಿನೀಲಕೋಟೆ ಸೇರಿದಂತೆ ಕೋಡಿಪಲ್ಲಿ ಪಂಚಾಯಿತಿ ವ್ಯಾಪ್ತಿಯಲ್ಲಿ 3 ಗ್ರಾಮ, ತಾಡಿಗೋಳು 1 ಗ್ರಾಮ, ನೆಮವಂಕಿ 1 ಊರು, ಪುಲಗೂರಕೋಟೆ, ಸೋಮಯಾಜಲಹಳ್ಳಿ ಸೇರಿದಂತೆ ನಾನಾ ಪಂಚಾಯಿ ಅಭಿವೃದ್ಧಿ ಅಧಿಕಾರಿಗಳಿಂದ ಮಾಹಿತಿ ಪಡೆದು ಪ್ರತಿ ದಿನ ಪಂಚಾಯಿಯಲ್ಲಿದ್ದು ಬೇಸಿಗೆ ಕಳೆಯುವವರೆಗೆ ನೀರು ಮತ್ತು ನಾನಾ ಸಮಸ್ಯೆಗಳಿಗೆ ಸ್ಪಂದಿಸಬೇಕು ಎಂದರು.

ನನಗೆ ಸಾರ್ವಜನಿಕರಿಂದ ನೀರಿನ ಸಮಸ್ಯೆ ಬಗ್ಗೆ ಕರೆ ಬಂದರೆ ನಿಮ್ಮ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುತ್ತೇನೆ. ನನಗೆ ಜನರ ಕಷ್ಟ ಗೊತ್ತಿದೆ. ನಾನು ವ್ಯಾಸಂಗ ಮುಗಿದ ನಂತರ ಕಾಲುವೆಗಳನ್ನು ಅಗೆದು ಕೂಲಿ ಮಾಡಿದ್ದೇನೆ. ಎಸ್ಟಿಡಿ ಬೂತ್‌ನಲ್ಲೂ ಕೆಲಸ ಮಾಡಿರುವ ಅನುಭವ ಇದೆ. ಬೇಸಿಗೆ ಬರದಲ್ಲಿ ತಾಲೂಕಿನಲ್ಲಿರುವ ಕೆರೆಗಳನ್ನು ಗುರುತಿಸಿ ಪ್ರತಿ ಕುಟುಂಬಕ್ಕೆ ದಿನಕ್ಕೆ 500 ರೂ. ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಕೆಲಸ ನೀಡಬೇಕು. ಕೆರೆಗಳಲ್ಲಿ ಹೂಳು ತೆಗೆದರೆ ಮಳೆ ನೀರು ಸಂಗ್ರಹವಾಗಿ ಭೂಮಿಯಲ್ಲಿ ನೀರು ಇಂಗಿ ತಂಪಾಗುತ್ತದೆ ಎಂದು ತಿಳಿಸಿದರು.

ಜಿಪಂ ಉಪ ಕಾರ್ಯದರ್ಶಿ ಲಕ್ಷ್ಮೀನಾರಾಯಣ, ಇಇ ಉಳ್ಳಪ್ಪ, ತಾಪಂ ಇಒ ವಿ.ನಾರಾಯಣಸ್ವಾಮಿ ಹಾಜರಿದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ