ಆ್ಯಪ್ನಗರ

ಜಿಲ್ಲಾ ಕ್ರೀಡಾಂಗಣಕ್ಕೆ ಮೂಲ ಸೌಕರ್ಯ ಕಲ್ಪಿಸಲು ಆಗ್ರಹ

ಸರ್‌.ಎಂ. ವಿಶ್ವೇಶ್ವರಯ್ಯ ಜಿಲ್ಲಾ ಕ್ರೀಡಾಂಗಣಕ್ಕೆ ಮೂಲ ಸೌಕರ್ಯಗಳನ್ನು ಒದಗಿಸುವಂತೆ ಆಗ್ರಹಸಿ ಜೈಭೀಮ್‌ ದಲಿತ ಸೇನೆ ಮುಖಂಡರು, ಕ್ರೀಡಾಪಟುಗಳು ಶುಕ್ರವಾರ ನಗರದ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣ ವೃತ್ತದಲ್ಲಿ ವ್ಯಾಯಾಮ, ವಾಕಿಂಗ್‌, ಕ್ರೀಡಾ ಚಟುವಟಿಕೆ ಮಾಡುವ ಮೂಲಕ ವಿನೂತನವಾಗಿ ಪ್ರತಿಭಟಿಸಿದರು.

Vijaya Karnataka 29 Jun 2019, 2:50 pm
ಕೋಲಾರ: ಸರ್‌.ಎಂ. ವಿಶ್ವೇಶ್ವರಯ್ಯ ಜಿಲ್ಲಾ ಕ್ರೀಡಾಂಗಣಕ್ಕೆ ಮೂಲ ಸೌಕರ್ಯಗಳನ್ನು ಒದಗಿಸುವಂತೆ ಆಗ್ರಹಸಿ ಜೈಭೀಮ್‌ ದಲಿತ ಸೇನೆ ಮುಖಂಡರು, ಕ್ರೀಡಾಪಟುಗಳು ಶುಕ್ರವಾರ ನಗರದ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣ ವೃತ್ತದಲ್ಲಿ ವ್ಯಾಯಾಮ, ವಾಕಿಂಗ್‌, ಕ್ರೀಡಾ ಚಟುವಟಿಕೆ ಮಾಡುವ ಮೂಲಕ ವಿನೂತನವಾಗಿ ಪ್ರತಿಭಟಿಸಿದರು.
Vijaya Karnataka Web provide facility to district stadium
ಜಿಲ್ಲಾ ಕ್ರೀಡಾಂಗಣಕ್ಕೆ ಮೂಲ ಸೌಕರ್ಯ ಕಲ್ಪಿಸಲು ಆಗ್ರಹ


ಈ ವೇಳೆ ಮಾತನಾಡಿದ ಪ್ರತಿಭಟನಾಕಾರರು ಜಿಲ್ಲಾ ಕ್ರೀಡಾಂಗಣದಲ್ಲಿ ಸ್ವಾತಂತ್ರ್ಯ ದಿನಾಚರಣೆ, ಗಣರಾಜ್ಯೋತ್ಸವ ಸೇರಿದಂತೆ ಇತರೆ ಸರಕಾರಿ ಕಾರ್ಯಕ್ರಮಗಳಿಗೆ ಮಾತ್ರವೇ ಸ್ವಚ್ಛತೆ ಮಾಡುವ ಜಿಲ್ಲಾಡಳಿತ, ಕ್ರೀಡಾ ಇಲಾಖೆ ಆನಂತರ ಕ್ರೀಡಾಂಗಣಕ್ಕೆ ಸಂಬಂಧ ಇಲ್ಲದಂತೆ ವರ್ತಿಸುವುದು ಖಂಡನೀಯವಾಗಿದೆ ಎಂದು ದೂರಿದರು.

ಕ್ರೀಡಾಂಗಣಕ್ಕೆ ಪ್ರತಿದಿನವೂ ಸಾಕಷ್ಟು ಮಂದಿ ವೃದ್ಧರು ಆಗಮಿಸುತ್ತಾರೆ. ಇಲ್ಲಿನ ನೆಲ ಅಂಕುಡೊಂಕಾಗಿದ್ದು, ಕೆಲ ಕಡೆ ಕಿತ್ತು ಬಂದಿದೆ, ಅದನ್ನು ಅಧಿಕಾರಿಗಳು ಸರಿಪಡಿಸಿಲ್ಲ. ಕನಿಷ್ಠ ಕುಡಿವ ನೀರಿನ ವ್ಯವಸ್ಥೆಯೂ ಇಲ್ಲದಾಗಿದ್ದು, ಶೌಚಾಲಯದ ಬಾಗಿಲು ತೆರೆಯುವ ಗೋಜಿಗೆ ಹೋಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇನ್ನು ಕ್ರೀಡಾಂಗಣದಲ್ಲಿ ನಿತ್ಯ ಕ್ರೀಡಾಪಟುಗಳು ಅಭ್ಯಾಸಕ್ಕಾಗಿ ಬರುತ್ತಾರೆ. ಇಲ್ಲಿ ಮಾಡಲಾಗಿರುವ ಡಾಂಬರೀಕರಣ ಕಳಪೆಯಾಗಿದ್ದು, ಇಡೀ ಕ್ರೀಡಾಂಗಣಕ್ಕೆ ಕಪ್ಪ್ಪುಚುಕ್ಕೆಯಾದಂತಿದೆ. ಕಿತ್ತು ಬಂದಿರುವ ಆ ಟ್ರಾಕ್‌ನಲ್ಲಿ ಓಡುವ ವೇಳೆ ಅನೇಕರು ಬಿದ್ದು ಈಗಾಗಲೇ ಗಾಯಗೊಂಡಿದ್ದರೂ ಅಧಿಕಾರಿಗಳು ಎಚ್ಚೆತ್ತುಕೊಳ್ಳದಿರುವುದು ಖಂಡನೀಯ ಎಂದು ಕಿಡಿಕಾರಿದರು.

ಮಳೆಗಾಲದಲ್ಲಂತೂ ಕ್ರೀಡಾಂಗಣದ ಪರಿಸ್ಥಿತಿ ಮತ್ತಷ್ಟು ಹಾಳಾಗಿರುತ್ತದೆ. ಕ್ರೀಡಾಂಗಣದ ಒಳಗೆ ನಿರ್ಮಿಸಿರುವ ಮೋರಿಗಳಲ್ಲಿ ಮಣ್ಣು ತುಂಬಿಕೊಂಡು ಕೆಲ ಸಿಮೆಂಟ್‌ ಮೋರಿ ಮುಚ್ಚುವ ಸಿಮೆಂಟ್‌ ಪ್ಲೇಟ್‌ಗಳು ಕಿತ್ತು ಬಂದಿದ್ದರೂ ಅದನ್ನು ಸರಿಪಡಿಸದೆ ಆಗೆಯೇ ಬಿಡಲಾಗಿದೆ. ಇದರಿಂದಾಗಿ ಮಳೆ ನೀರು ಹೊರಗೆ ಹೋಗದೆ ಕ್ರೀಡಾಂಗಣದಲ್ಲೇ ನಿಂತುಕೊಂಡಿರುತ್ತದೆ. ಇದರಿಂದ ಸಾರ್ವಜನಿಕರಿಗೆ ಮತ್ತಷ್ಟು ಕಿರಿಕಿರಿಯಾಗುತ್ತಿದೆ ಎಂದು ದೂರಿದರು.

ಬೇಡಿಕೆಗಳ ಈಡೇರಿಕೆಗೆ ಆಗ್ರಹ: ಕ್ರೀಡಾಂಗಣದಲ್ಲಿ ಪ್ರಥಮ ಚಿಕಿತ್ಸೆ ಕಿಟ್‌ ಅಳವಡಿಸಬೇಕು, ಡಾಂಬರೀಕರಣದ ನಂತರ ಅದರ ಸರಿಯಾದ ನಿರ್ವಹಣೆ ಮಾಡದೆ ಹದಗೆಟ್ಟ ಡಾಂಬರು ರಸ್ತೆ ಸರಿಪಡಿಸಬೇಕು, ಕ್ರೀಡಾಪಟುಗಳಿಗೆ ಅಗತ್ಯವಿರುವ ಕ್ರೀಡಾ ಸಾಮಗ್ರಿಗಳನ್ನು ಒದಗಿಸಿಕೊಡಬೇಕು. ಕುಡಿವ ನೀರು, ಶೌಚಾಲಯ ಸೇರಿದಂತೆ ಮೂಲ ಸೌಕರ್ಯಗಳನ್ನು ಒದಗಿಸಿಕೊಡಬೇಕು.

ಕ್ರೀಡಾಂಗಣದಲ್ಲಿ ಕ್ರೀಡೆಗಳು, ಕ್ರೀಡಾಪಟುಗಳು ಹಾಗೂ ನಾಗರಿಕರಿಗೆ ಸಿಗುವ ಸೌಲಭ್ಯಗಳ ಕುರಿತು ಮಾಹಿತಿ ಫಲಕವನ್ನು ಅಳವಡಿಸಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಜೈ.ಭೀಮ್‌ ದಲಿತ ಸೇನೆ ಸಂಸ್ಥಾಪಕ ಶಿವಕುಮಾರ್‌, ರಾಜ್ಯಾಧ್ಯಕ್ಷ ಜೈ.ಭೀಮ್‌. ಎಲ್‌.ನಿರಂಜನ್‌, ಕಾನೂನು ಸಲಹೆಗಾರ ಎಸ್‌.ಓ ಮಂಜುನಾಥ್‌, ಕ್ರೀಡಾಪಟುಗಳಾದ ಪ್ರವೀಣ್‌, ಗೋವಿಂದರಾಜು, ದೀಪು, ರಾಜೇಶ್‌, ಮುರಳಿ, ಕಿರಣ್‌, ಅರುಣ್‌, ಶಿವು, ಮುಸು, ಸೂರಪ್ಪ, ಅರವಿಂದ್‌ ಕಿಣಿ, ಬಾಬು, ಮಂಜು ಮತ್ತು ಪ್ರತಿದಿನ ಕ್ರೀಡಾಂಗಣದಲ್ಲಿ ವ್ಯಾಯಾಮಕ್ಕೆ ಆಗಮಿಸುವ ಹಿರಿಯ ನಾಗರೀಕರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ