ಆ್ಯಪ್ನಗರ

ಜಿಲ್ಲೆಯ ಹಲವೆಡೆ ಬಿರುಗಾಳಿ ಸಹಿತ ಆಲಿಕಲ್ಲು ಮಳೆ

ನಗರ ಸೇರಿದಂತೆ ಜಿಲ್ಲೆಯ ಹಲವೆಡೆ ಬುಧವಾರ ಗುಡುಗು, ಬಿರುಗಾಳಿ, ಆಲಿಕಲ್ಲು ಸಹಿತ ಮಳೆ ಸುರಿದಿದೆ.

Vijaya Karnataka 16 May 2019, 5:00 am
ಕೋಲಾರ: ನಗರ ಸೇರಿದಂತೆ ಜಿಲ್ಲೆಯ ಹಲವೆಡೆ ಬುಧವಾರ ಗುಡುಗು, ಬಿರುಗಾಳಿ, ಆಲಿಕಲ್ಲು ಸಹಿತ ಮಳೆ ಸುರಿದಿದೆ.
Vijaya Karnataka Web rail in parts of kolar district
ಜಿಲ್ಲೆಯ ಹಲವೆಡೆ ಬಿರುಗಾಳಿ ಸಹಿತ ಆಲಿಕಲ್ಲು ಮಳೆ


ಕೆಲ ದಿನದ ಹಿಂದೆ ಬಿರುಗಾಳಿ, ಆಲಿಕಲ್ಲು ಸಹಿತ ಮಳೆಯಿಂದ ಬೆಳೆ ನಾಶ, ಪಾಲಿಹೌಸ್‌, ನೆಟ್‌ಹೌಸ್‌ಗೂ ಹಾನಿಯಾಗಿತ್ತಲ್ಲದೆ, ಕೆಲವೆಡೆ ಮರ ಧರೆಗುರುಳಿತ್ತು. ಬಳಿಕ ಎರಡು ದಿನದ ಹಿಂದೆ ನಗರದಲ್ಲಿ ಉತ್ತಮ ಮಳೆಯಾಗಿತ್ತು. ಒಂದುದಿನವಷ್ಟೆ ಬಿಡುವು ನೀಡಿದ್ದ ಮಳೆ ಬುಧವಾರ ಮಧ್ಯಾಹ್ನ ಸುರಿಯಿತು.

ಮಧ್ಯಾಹ್ನದ ವೇಳೆಗೆ ಮೋಡ ಕವಿದ ವಾತಾವರಣ ನಿರ್ಮಾಣವಾಗಿ, ಮಳೆ ಸುರಿಯಲಾರಂಭವಾಯಿತು. ಬಿರುಗಾಳಿ, ಗುಡುಗು, ಆಲಿಕಲ್ಲು ಸಹಿತ ಸುಮಾರು 30 ನಿಮಿಷಕ್ಕೂ ಹೆಚ್ಚು ಕಾಲ ಮಳೆ ಸುರಿದಿದ್ದು, ಜನರನ್ನು ಬೆಚ್ಚಿ ಬೀಳಿಸಿತು.

ಬಂಗಾರಪೇಟೆ ಪಟ್ಟಣ ಸೇರಿದಂತೆ ಅನೇಕ ಕಡೆ ಗುಡುಗು ಸಹಿತ ಮಳೆ ಸುರಿದಿದೆ. ಕೋಲಾರ ನಗರ ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿ ಆಲಿಕಲ್ಲು ಸಹಿತ ಮಳೆಯಾಗಿದ್ದು, ನಗರದ ಅನೇಕ ರಸ್ತೆಗಳು ಜಲಾವೃತಗೊಂಡಿದ್ದವು. ಬಿರುಗಾಳಿಗೆ ಮರದ ರೆಂಬೆಗಳು ಕೆಲವೆಡೆ ಮುರಿದು ಬಿದ್ದಿತ್ತು. ಚರಂಡಿ ನೀರು ಮಳೆ ನೀರಿನೊಂದಿಗೆ ರಸ್ತೆ ಆವರಿಸಿತ್ತು. ವಾಹನ ಸವಾರರು ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು. ಚರಂಡಿಯಲ್ಲಿದ್ದ ಕಸವೆಲ್ಲಾ ರಸ್ತೆಗೆ ಬಂದ ಪರಿಣಾಮ ಓಡಾಡಲು ಸಾಧ್ಯವಾಗದಂತಾಗಿತ್ತು. ಮಳೆ ಸುರಿಯಲಾರಂಭವಾಗುತ್ತಿದ್ದಂತೆ ವಿದ್ಯುತ್‌ ಸರಬರಾಜಿನಲ್ಲಿ ಕಡಿತಗೊಳಿಸಲಾಗಿತ್ತು. ಆಲಿಕಲ್ಲನ್ನು ಸಂಗ್ರಹಿಸಿಟ್ಟುಕೊಳ್ಳುತ್ತಿದ್ದ ದೃಶ್ಯ ಕಂಡುಬಂತು.

ಸುಮಾರು ಅರ್ಧಗಂಟೆಗೂ ಹೆಚ್ಚು ಕಾಲ ಮಳೆ ಸುರಿದ ಬಳಿಕವೂ ಮೋಡ ಕವಿದ ವಾತಾವರಣ ಮುಂದುವರಿದಿತ್ತು. ಮಳೆ ಮತ್ತೆ ಪ್ರಾರಂಭವಾಗಬಹುದೆಂಬ ಕಾರಣಕ್ಕೆ ಜನ ಮನೆ ಸೇರಿಕೊಳ್ಳುತ್ತಿದ್ದ ದೃಶ್ಯ ಕಂಡುಬಂತು.

ಜನವರಿಯಿಂದ ಈವರೆಗೆ 97.1ಎಂಎಂ ಮಳೆ: ಪ್ರಸಕ್ತ ಸಾಲಿನ ಜನವರಿಯಿಂದ ಈವರೆಗೆ ಸಾಮಾನ್ಯವಾಗಿ 77.3 ಎಂಎಂ ಮಳೆ ಸುರಿಯಬೇಕಿತ್ತು. ಆದರೆ, 97.1 ಎಂಎಂ ಮಳೆಯಾಗಿರುವುದಾಗಿ ಕೃಷಿ ಇಲಾಖೆ ಮಾಹಿತಿ ನೀಡಿದೆ.

ಜನವರಿಯಿಂದ ಮೇ 15ರವರೆಗೆ ಬಂಗಾರಪೇಟೆ ತಾಲೂಕಿನಲ್ಲಿ ಸಾಮಾನ್ಯವಾಗಿ 87.4 ಎಂಎಂ ಮಳೆಯಾಗಬೇಕಿದ್ದು, ಈವರೆಗೆ 114.1 ಎಂಎಂ ಮಳೆ ಸುರಿದಿದೆ. ಕೋಲಾರ ತಾಲೂಕಿನಲ್ಲಿ 78.9ಎಂಎಂ ಮಳೆಯಾಗಬೇಕಿತ್ತು, ಆದರೆ, 104.4ಎಂಎಂ ಮಳೆಯಾಗಿದೆ. ಮಾಲೂರು ತಾಲೂಕಿನಲ್ಲಿ 83.4 ಎಂಎಂ ಮಳೆಯಾಗಬೇಕಿದ್ದು, 109.8 ಎಂಎಂ ಮಳೆ ಸುರಿದಿರುವುದಾಗಿ ತಿಳಿಸಿದೆ.

ಜನವರಿಯಿಂದ ಮೇ 15ರವರೆಗೆ ಮುಳಬಾಗಿಲು ತಾಲೂಕಿನಲ್ಲಿ 74.4 ಎಂಎಂ ಮಳೆಯಾಗಬೇಕಿದ್ದು, 75.8 ಎಂಎಂ, ಶ್ರೀನಿವಾಸಪುರ ತಾಲೂಕಿನಲ್ಲಿ 62.5 ಎಂಎಂ ಮಳೆ ಸುರಿಯಬೇಕಿದ್ದು, 81.7 ಎಂಎಂ ಮಳೆ ಸರಿದಿರುವುದಾಗಿ ಮಾಹಿತಿ ಒದಗಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ