ಆ್ಯಪ್ನಗರ

ಮಳೆ ನೀರು ಕೊಯ್ಲು ಪದ್ಧ್ದತಿ ಕಡ್ಡಾಯ

ಮುಂದೆ ಒದಗಿಬರಲಿರುವ ಭೀಕರ ಬರಗಾಲವನ್ನು ಮೆಟ್ಟಿನಿಲ್ಲುವ ನಿಟ್ಟಿನಲ್ಲಿ ನಮ್ಮ ಮುಂದಿನ ಪೀಳಿಗೆಯ ಹಿತದೃಷ್ಟಿಯಿಂದ ಬೃಹತ್‌ ವಾಣಿಜ್ಯ ಮಳಿಗೆಗಳು, ಕಲ್ಯಾಣ ಮಂಟಪಗಳು,ಬೃಹತ್‌ ಬಹುಮಹಡಿ ಕಟ್ಟಡಗಳು, ಹೊಸದಾಗಿ ನಿರ್ಮಾಣವಾಗುತ್ತಿರುವ ಮನೆಗಳ ಮಾಲೀಕರು ಮಳೆನೀರು ಕೊಯ್ಲು ಪದ್ಧತಿಯನ್ನು ಕಡ್ಡಯವಾಗಿ ಅಳವಡಿಸಿಕೊಳ್ಳಬೇಕು. ಇಲ್ಲದಿದ್ದರೆ, ಅವರಿಗೆ ನೀಡಲಾಗುವ ಮೂಲ ಸೌಕರ‍್ಯಗಳನ್ನು ಸ್ಥಗಿತಗೊಳಿಸಲಾಗುವುದು ಎಂದು ನಗರಸಭೆ ಪೌರಾಯುಕ್ತ ಶ್ರೀಕಾಂತ್‌ ಎಚ್ಚರಿಸಿದರು.

Vijaya Karnataka 27 Jul 2019, 3:25 pm
ಕೆಜಿಎಫ್‌: ಮುಂದೆ ಒದಗಿಬರಲಿರುವ ಭೀಕರ ಬರಗಾಲವನ್ನು ಮೆಟ್ಟಿನಿಲ್ಲುವ ನಿಟ್ಟಿನಲ್ಲಿ ನಮ್ಮ ಮುಂದಿನ ಪೀಳಿಗೆಯ ಹಿತದೃಷ್ಟಿಯಿಂದ ಬೃಹತ್‌ ವಾಣಿಜ್ಯ ಮಳಿಗೆಗಳು, ಕಲ್ಯಾಣ ಮಂಟಪಗಳು,ಬೃಹತ್‌ ಬಹುಮಹಡಿ ಕಟ್ಟಡಗಳು, ಹೊಸದಾಗಿ ನಿರ್ಮಾಣವಾಗುತ್ತಿರುವ ಮನೆಗಳ ಮಾಲೀಕರು ಮಳೆನೀರು ಕೊಯ್ಲು ಪದ್ಧತಿಯನ್ನು ಕಡ್ಡಯವಾಗಿ ಅಳವಡಿಸಿಕೊಳ್ಳಬೇಕು. ಇಲ್ಲದಿದ್ದರೆ, ಅವರಿಗೆ ನೀಡಲಾಗುವ ಮೂಲ ಸೌಕರ‍್ಯಗಳನ್ನು ಸ್ಥಗಿತಗೊಳಿಸಲಾಗುವುದು ಎಂದು ನಗರಸಭೆ ಪೌರಾಯುಕ್ತ ಶ್ರೀಕಾಂತ್‌ ಎಚ್ಚರಿಸಿದರು.
Vijaya Karnataka Web rain water harvesting is compulsory
ಮಳೆ ನೀರು ಕೊಯ್ಲು ಪದ್ಧ್ದತಿ ಕಡ್ಡಾಯ


ಕೋಲಾರ ಜಿಲ್ಲಾಡಳಿತ ನಗರಸಭೆ ಸಹಯೋಗದಲ್ಲಿ ಆಯೋಜಿಸಿದ್ದ ಜಲಶಕ್ತಿ ಅಭಿಯಾನದಲ್ಲಿ ನಾಗರಿಕರನ್ನು ಉದ್ದೇಶಿಸಿ ಮಾತನಾಡಿದರು.

ನೀರಿನÜ ಲಭ್ಯತೆ ಕಡಿಮೆಯಾಗುತ್ತಿದ್ದು, ನಗರದಲ್ಲಿ ನೀರಿನ ಸಮಸ್ಯೆ ತೀವ್ರವಾಗಿ ಕಾಡುತ್ತಿದೆ ಆದ್ದರಿಂದ ಎಲ್ಲರೂ ಕಡ್ಡಾಯವಾಗಿ ಮಳೆ ನೀರು ಕೂಯ್ಲು ಪದ್ಧತಿಯನ್ನು ಅಳವಡಿಸಿಕೊಳ್ಳಿ ಹಾಗೂ ಸಾರ್ವಜನಿಕರು ಸಹ ಅಗತ್ಯ ಸಲಹೆಗಳನ್ನು ನೀಡಬಹುದು ಎಂದು ತಿಳಿಸಿದರು.

ನಿವೃತ್ತ ಬ್ಯಾಂಕ್‌ ಅಧಿಕಾರಿ ಎನ್‌.ಆರ್‌. ಪುರುಷೋತ್ತಮ ಮಾತನಾಡಿ, ನೀರು ಅಂದರೆ ಜೀವ ಜಲವಾಗಿದೆ ಆಹಾರ ವಿಲ್ಲದೆ ಬದುಕ ಬಹುದು.ಆದರೆ, ನೀರಿಲ್ಲದೆ ಬದುಕಲು ಸಾಧ್ಯವಿಲ್ಲ, ಆದ್ದರಿಂದ ಎಲ್ಲರೂ ನೀರಿನ ಮಿತಬಳಕೆ ಬಗ್ಗೆ ಅರಿವು ಮೂಡಿಸಿಕೊಳ್ಳಬೇಕು ಎಂದು ಹೇಳಿದರು.

ಸಭೆಯಲ್ಲಿ ಹಾಜರಿದ್ದ ಸ್ವರ್ಣನಗರ ವಾರ್ಡ್‌ ಮುಖಂಡ ಹರೀಶ್‌ ಮಾತನಾಡಿ, ಹಿಂದಿನ ಕಾಲದಲ್ಲಿ ಹೊರ ದೇಶದಲ್ಲಿ ಕುಡಿವ ನೀರು ಮಾರಾಟವಾಗುತ್ತಿದೆ ಎಂದು ಹೇಳುತ್ತಿದ್ದಾಗ ನಾವು ನೀರನ್ನು ಮಾರಾಟಮಾಡುವರೆ ಎಂದು ಅಚ್ಚರಿ ವ್ಯಕ್ತಪಡಿಸುತ್ತಿದ್ದೆವು ಆದರೆ,ಇದಿಗ ನಮ್ಮಲ್ಲೂ ನೀರನ್ನು ಹಣ ನೀಡಿ ಪಡೆಯಬೇಕಾದ ಅನಿವಾರ‍್ಯ ಪರಿಸ್ಥಿತಿಯಲ್ಲಿ ನಾವಿದ್ದೇವೆ ಆದ್ದರಿಂದ ನಮ್ಮ ಮನೆಗಳಲ್ಲಿ ಸ್ನಾನ ಮಾಡುವ ವೇಳೆ ಶವರ್‌ ಆನ್‌ ಮಾಡುವುದನ್ನು ಕಡಿಮೆ ಮಾಡಿ ಅಗತ್ಯಕ್ಕೆ ತಕ್ಕಂತೆ ಬಳಸಬೇಕು ಹಾಗೂ ನಗರಸಭೆ ಮನೆ ನಿರ್ಮಾಣ ಮಾಡುವವರಿಗೆ ಮಳೆಕೂಯ್ಲು ಪದ್ಧತಿ ಅಳವಡಿಸಕೊಂಡರೆ ಮಾತ್ರ ಪರವಾನಗಿ ನೀಡಲಾಗುವುದು ಎಂದು ಆದೇಶ ನೀಡಿ ಎಂದು ಮನವಿ ಮಾಡಿದರು.

ಜೈನ್‌ ಕಾಲೇಜು ಪ್ರಾಂಶುಪಾಲ ರೇಖಸೇಥಿ ಮಾತನಾಡಿ, ನಮ್ಮ ಕಾಲೇಜಿನಲ್ಲಿ ಮಳೆ ನೀರು ಹಿಂಗುವ ಪದ್ಧತಿಯನ್ನು ಅಳವಡಿಸಿಕೊಳ್ಳಲಾಗಿದೆ ಎಂದರೆ ಇತರೆ ಖಾಸಗಿ ಶಿಕ್ಷ ಣ ಸಂಸ್ಥೆಗಳ ಮುಖ್ಯಸ್ಥರು ಶಾಲೆ ಅವರಣದಲ್ಲಿರುವ ಗಿಡಗಳಿಗೆ ನೀರನ್ನು ಹರಿಸಲಾಗುತ್ತಿದೆ ಎಂದು ಹೇಳಿದರು.

ರೋಟರಿ ರಾಮಕೃಷ್ಣ ಮಾತನಾಡಿ, ನಮ್ಮ ಮನೆಯಲ್ಲಿ ಮಳೆಕೂಯ್ಲು ಪದ್ಧತಿ ಆಳವಡಿಸಿಕೊಳ್ಳಲಾಗಿದ್ದು, ಉತ್ತಮ ನೀರು ಲಭ್ಯವಿದೆ ಎಂದು ಹೇಳಿದರೆ ಕೆಲವರು ಬತ್ತಿ ಹೊಗಿರುವ ಕೊಳವೆಬಾವಿಗಳ ಬಳಿ ಹಳ್ಳ ತೊಡಿ ನೀರು ಹಿಂಗುವಂತೆ ಮಾಡಿ ಎಂಬ ಸಲಹೆ ನೀಡಿದರು.

ಸಭೆಯಲ್ಲಿ ಮೂಡಿ ಬಂದ ಸಲಹೆಗಳನ್ನು ಕ್ರೋಡೀಕರಿಸಿ ನಗರಸಭೆ ಪೌರಾಯುಕ್ತರು ಮುಂದಿನ ಸಭೆಯಲ್ಲಿ ಇನ್ನು ಹೆಚ್ಚಿನ ಸಲಹೆಗಳನ್ನು ಪಡೆಯಬಹುದು ಎಂದು ಹೇಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ