ಆ್ಯಪ್ನಗರ

ಬೆಂಬಲ ಬೆಲೆ, ಋುಣಮುಕ್ತ ಕಾಯಿದೆ ಜಾರಿಗೆ ಕೆಪಿಆರ್‌ಎಸ್‌ ಆಗ್ರಹ

ಕೇಂದ್ರ ಸರಕಾರ ದೇಶದ ರೈತರ ಹಾಗೂ ರೈತಾಪಿ ಆಧಾರಿತ ಕೃಷಿಯನ್ನು ಸಂರಕ್ಷಿಸಲು ಸಂಸತ್ತು ಬೆಂಬಲ ಬೆಲೆ ಕಾಯಿದೆ ಮತ್ತು ಋುಣಮುಕ್ತ ಕಾಯಿದೆಗಳ ಖಾಸಗಿ ಬಿಲ್‌ಗಳನ್ನು ಚರ್ಚಿಸಿ ಅಂಗೀಕರಿಸುವಂತೆ ಆಗ್ರಹಿಸಿ ಕರ್ನಾಟಕ ಪ್ರಾಂತ ರೈತಸಂಘ ಹಾಗೂ ಪ್ರಗತಿಪರ ಸಂಘಟನೆಗಳಿಂದ ಜಿಲ್ಲಾಡಳಿತ ಭವನದ ಎದುರು ಪ್ರತಿಭಟನೆ ನಡೆಸಲಾಯಿತು.

Vijaya Karnataka 4 Aug 2019, 5:00 am
ಕೋಲಾರ: ಕೇಂದ್ರ ಸರಕಾರ ದೇಶದ ರೈತರ ಹಾಗೂ ರೈತಾಪಿ ಆಧಾರಿತ ಕೃಷಿಯನ್ನು ಸಂರಕ್ಷಿಸಲು ಸಂಸತ್ತು ಬೆಂಬಲ ಬೆಲೆ ಕಾಯಿದೆ ಮತ್ತು ಋುಣಮುಕ್ತ ಕಾಯಿದೆಗಳ ಖಾಸಗಿ ಬಿಲ್‌ಗಳನ್ನು ಚರ್ಚಿಸಿ ಅಂಗೀಕರಿಸುವಂತೆ ಆಗ್ರಹಿಸಿ ಕರ್ನಾಟಕ ಪ್ರಾಂತ ರೈತಸಂಘ ಹಾಗೂ ಪ್ರಗತಿಪರ ಸಂಘಟನೆಗಳಿಂದ ಜಿಲ್ಲಾಡಳಿತ ಭವನದ ಎದುರು ಪ್ರತಿಭಟನೆ ನಡೆಸಲಾಯಿತು.
Vijaya Karnataka Web raitha sangha urges for support price
ಬೆಂಬಲ ಬೆಲೆ, ಋುಣಮುಕ್ತ ಕಾಯಿದೆ ಜಾರಿಗೆ ಕೆಪಿಆರ್‌ಎಸ್‌ ಆಗ್ರಹ


ಈ ವೇಳೆ ಪ್ರತಿಭಟನೆಯ ನೇತೃತ್ವವಹಿಸಿ ಮಾತನಾಡಿದ ಕರ್ನಾಟಕ ಪ್ರಾಂತ ರೈತಸಂಘದ ರಾಜ್ಯಾಧ್ಯಕ್ಷ ಜಿ.ಸಿ.ಬಯ್ಯಾರೆಡ್ಡಿ, ಕೇಂದ್ರ ಹಾಗೂ ರಾಜ್ಯ ಸರಕಾರಗಳು 30 ವರ್ಷದಿಂದ ನಿರಂತರವಾಗಿ ವಿಶ್ವಬ್ಯಾಂಕ್‌, ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆ ಮತ್ರು ವಿಶ್ವ ವಾಣಿಜ್ಯ ಸಂಘಟನೆಗಳ ತೀವ್ರ ಒತ್ತಡಕ್ಕೆ ಮಣಿದು ದೇಶವನ್ನು ಬಹುರಾಷ್ಟ್ರೀಯ ಸಂಸ್ಥೆಗಳ ವ್ಯಾಪಕ ಲೂಟಿಗೆ ಸಹಕಾರ ನೀಡಿವೆ ಎಂದು ದೂರಿದರು.

ಮಾರುಕಟ್ಟೆಯಲ್ಲಿ ಕೃತಕವಾಗಿ ಬೆಲೆಗಳನ್ನು ಇಳಿಸಿ ಖರೀದಿಸುವ ಪಟ್ಟಭದ್ರ ಮಾರುಕಟ್ಟೆ ಶಕ್ತಿಗಳನ್ನು ಮತ್ತು ದೇಶೀಯ ಮಾರುಕಟ್ಟೆಗೆ ನುಗ್ಗುವ ಅಗ್ಗದ ದರದ ವಿದೇಶಿ ಕೃಷಿ ಉತ್ಪನ್ನಗಳ ಸ್ಪರ್ಧೆಯಿಂದ ರೈತರ ಉತ್ಪನ್ನಗಳಿಗೆ ರಕ್ಷ ಣೆ ಇಲ್ಲವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ದೇಶದ 200ಕ್ಕೂ ಅಧಿಕ ಗ್ರಾಮೀಣ ರೈತರ ಹಾಗೂ ಕೂಲಿಕಾರರ ಸಂಘಗಳು ಒಟ್ಟಾಗಿ, ಅಖಿಲ ಭಾರತ ಕಿಸಾನ್‌ ಸಂಘರ್ಷ ಸಮನ್ವಯ ಸಮಿತಿ ರಚಿಸಿಕೊಂಡು ಪಾರ್ಲಿಮೆಂಟ್‌ನಲ್ಲಿ ದೇಶದ ಗ್ರಾಮೀಣರ ರಕ್ಷ ಣೆಗಾಗಿ ಎರಡು ಖಾಸಗಿ ಬಿಲ್‌ಗಳನ್ನು ಮಂಡಿಸಿವೆ. ಕೇಂದ್ರ ಸರಕಾರ ಇವುಗಳನ್ನು ವಿರೋದಿಸಿ ಚರ್ಚೆಗೆ ತರುತ್ತಿಲ್ಲ. ಇನ್ನಾದರೂ ಚರ್ಚೆಗೆ ತಂದು ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು.

ಬೇಡಿಕೆಗಳು:
ರೈತರ ಕೃಷಿ ಉತ್ಪನ್ನಗಳಿಗೆ ಅವುಗಳ ಸಮಗ್ರ ಉತ್ಪಾದನಾ ವೆಚ್ಚಕ್ಕೆ ಡಾ.ಎಂ.ಎಸ್‌ ಸ್ವಾಮಿನಾಥನ್‌ ಕೃಷಿ ಆಯೋಗದ ಸಲಹೆಯಂತೆ ಶೇ. 50ಲಾಭಾಂಶ ಸೇರಿಸಿದ ಕನಿಷ್ಠ ಬೆಂಬಲ ಬೆಲೆ ಖಾತರಿಯಾಗಿ ದೊರೆಯುವಂತೆ ಮಾಡಲು ಅದನ್ನು ಕಾಯಿದೆಯಾಗಿಸಬೇಕು.

ಎಲ್ಲ ರೈತರು ಹಾಗೂ ಕೃಷಿ ಕೂಲಿಕಾರರು ಮತ್ತು ಎಲ್ಲ ಸಣ್ಣ ಗೇಣಿದಾರರು, ಕಸಬುದಾರರಿಗೆ ಬಡ್ಡಿರಹಿತ ಅಗತ್ಯ ಸಾಲವನ್ನು ಸಾರ್ವಜನಿಕ ಬ್ಯಾಂಕುಗಳಿಂದ ಕಡ್ಡಾಯವಾಗಿ ದೊರೆಯುವಂತಾಗಬೇಕು. ಪ್ರಕೃತಿ ವಿಕೋಪ ಮತ್ತಿತರ ಸಂದರ್ಭಗಳಲ್ಲಿ ತನ್ನಿಂದ ತಾನೆ ಸಾಲ ಮನ್ನಾ ಆಗುವಂತೆ ಕ್ರಮ ವಹಿಸುವ ಸಾಲ ನೀತಿ ಇರುವ ಋುಣ ಮುಕ್ತ ಕಾಯಿದೆಯನ್ನು (ಕೇರಳ ಮಾದರಿ) ಅಂಗೀಕರಿಸಬೇಕು ಎನ್ನುವುದು ಸೇರಿದಂತೆ ಇನ್ನಿತರೆ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಲಾಯಿತು.

ಕೆಪಿಆರ್‌ಎಸ್‌ ಜಿಲ್ಲಾಧ್ಯಕ್ಷ ಪಿ.ಅರ್‌. ಸೂರ್ಯನಾರಾಯಣ, ಪ್ರಧಾನಕಾರ್ಯದರ್ಶಿ ಟಿ.ಎಂ.ವೆಂಕಟೇಶ್‌, ಜಿಲ್ಲಾ ಮುಖಂಡರಾದ ಪಿ. ಶ್ರೀನಿವಾಸ್‌ ವಿ.ನಾರಾಯಣರೆಡ್ಡಿ, ಪಾತಕೋಟೆ ನವೀನ್‌ ಕುಮಾರ್‌, ಗಂಗಮ್ಮ, ಅರ್‌.ವೆಂಕಟೇಶ್‌, ವೆಂಕಟಪ್ಪ, ಕುರ್ಕಿ ದೇವರಾಜ್‌, ವೆಂಕಟಲಕ್ಷ ್ಮಮ್ಮ, ರಾಜ್ಯ ರೈತ ಸಂಘದ ಉಪಾಧ್ಯಕ್ಷ ಕೆ.ನಾರಾಯಣಗೌಡ ಭಾಗವಹಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ