ಆ್ಯಪ್ನಗರ

ಗ್ರಂಥಪಾಲಕರ ದಿನವಾಗಿ ರಂಗನಾಥನ್‌ ಜನ್ಮದಿನಾಚರಣೆ

ನಗರದ ಜಿಲ್ಲಾ ಕೇಂದ್ರ ಗ್ರಂಥಾಲಯದಲ್ಲಿ ಗ್ರಂಥಾಲಯ ಸಂಸ್ಥಾಪಕ ಎಸ್‌.ಆರ್‌.ರಂಗನಾಥನ್‌ ಅವರ ಭಾವಚಿತ್ರಕ್ಕೆ ಪೂಜೆæ ಸಲ್ಲಿಸುವ ಮೂಲಕ ಅವರ ಜನ್ಮದಿನಾಚರಣೆಯನ್ನು ಗ್ರಂಥಪಾಲಕರ ದಿನವಾಗಿ ಸೋಮವಾರ ಆಚರಿಸಲಾಯಿತು.

Vijaya Karnataka 13 Aug 2019, 4:20 pm
ಕೋಲಾರ: ನಗರದ ಜಿಲ್ಲಾ ಕೇಂದ್ರ ಗ್ರಂಥಾಲಯದಲ್ಲಿ ಗ್ರಂಥಾಲಯ ಸಂಸ್ಥಾಪಕ ಎಸ್‌.ಆರ್‌.ರಂಗನಾಥನ್‌ ಅವರ ಭಾವಚಿತ್ರಕ್ಕೆ ಪೂಜೆæ ಸಲ್ಲಿಸುವ ಮೂಲಕ ಅವರ ಜನ್ಮದಿನಾಚರಣೆಯನ್ನು ಗ್ರಂಥಪಾಲಕರ ದಿನವಾಗಿ ಸೋಮವಾರ ಆಚರಿಸಲಾಯಿತು.
Vijaya Karnataka Web ranganathan birthday as librarians day
ಗ್ರಂಥಪಾಲಕರ ದಿನವಾಗಿ ರಂಗನಾಥನ್‌ ಜನ್ಮದಿನಾಚರಣೆ


  • ಈ ಸಂದರ್ಭದಲ್ಲಿ ಮಾತನಾಡಿದ ಗ್ರಂಥಪಾಲಕಿ ಎಂ.ಸಿ.ನೇತ್ರಾವತಿ, ಪುಸ್ತಕಗಳಿಗಿಂತ ಉತ್ತಮ ಸ್ನೇಹಿತ ಮತ್ತೊಬ್ಬರಿಲ್ಲ, ಓದುವ ಅಭ್ಯಾಸದಿಂದ ಜ್ಞಾನಾಭಿವೃದ್ಧಿಯ ಜತೆಗೆ ಸಮಾಜದಲ್ಲಿ ಬದುಕು ಹಾದಿಯ ಅರಿವಾಗುತ್ತದೆ ಎಂದು ಹೇಳಿದರು.

ಎಸ್‌.ಆರ್‌.ರಂಗನಾಥನ್‌ ಅವರು ಗ್ರಂಥಾಲಯಗಳ ಪರಿಕಲ್ಪನೆಯೊಂದಿಗೆ ಇಂದು ಸಮಾಜದ ಪ್ರತಿಯೊಬ್ಬರಿಗೂ ಓದಲು ಪುಸ್ತಕ ಸಿಗುವಂತೆ ಮಾಡಿದ್ದಾರೆ, ಅವರ ಆದರ್ಶ ಪಾಲನೆ ಅಗತ್ಯವಾಗಿದೆ ಎಂದರು.

ಸಹ ಗ್ರಂಥಪಾಲಕಿ ಆರ್‌.ನಾಗಮಣಿ, ಗ್ರಂಥಾಲಯಗಳು ಜ್ಞಾನ ಭಂಡಾರ ಮಾತ್ರವಲ್ಲ, ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವ ಶಕ್ತಿ ನೀಡುವ ಕೇಂದ್ರಗಳೂ ಆಗಿವೆ, ಕೆಪಿಎಸ್ಸಿ, ಯುಪಿಎಸ್ಸಿ ಪರೀಕ್ಷೆಗಳಿಗೆ ಅಗತ್ಯವಾದ ಜ್ಞಾನ ನೀಡುವ ಅನೇಕ ಪುಸ್ತಕಗಳು ಇಲ್ಲಿ ಸಿಗುತ್ತಿದ್ದು, ಅನೇಕರಿಗೆ ದಾರಿದೀಪವಾಗಿವೆ ಎಂದರು.

ಟಿ.ಎಸ್‌.ನವೀನ್‌ಕುಮಾರ್‌, ಕೆ.ಸೀತಾರಾಮಯ್ಯ, ಜಯಶ್ರೀ ಮತ್ತಿತರರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ