ಆ್ಯಪ್ನಗರ

ಕೆಜಿಎಫ್‌ನಲ್ಲಿ ಮತಾಂತರ ಜಾಲ? ಪರಿಶಿಷ್ಟ ಜಾತಿಯ 11 ಮಂದಿ ಸಾಮೂಹಿಕ ಮತಾಂತರ!

​​ಎರಡು ವರ್ಷಗಳ ಹಿಂದೆ ಕೆಜಿಎಫ್‌ನಲ್ಲಿ ಕ್ರಿಶ್ಚಿಯನ್‌ ಧರ್ಮಕ್ಕೆ ಮತಾಂತರ ಮಾಡುವ ಪ್ರಕ್ರಿಯೆ ವ್ಯಾಪಕವಾಗಿ ನಡೆಯುತ್ತಿತ್ತು. ಜಿಲ್ಲಾಡಳಿತದ ಕಟ್ಟುನಿಟ್ಟಿನ ಕ್ರಮಗಳಿಂದ ಎರಡು ವರ್ಷಗಳಿಂದ ಇದು ಹತೋಟಿಗೆ ಬಂದಿತ್ತು. ಸ್ವಇಚ್ಛೆಯಿಂದ ಮತಾಂತರಗೊಳ್ಳಲು ಕಾನೂನಿನಲ್ಲಿ ಅವಕಾಶವಿದೆಯಾದರೂ, ಹೆಚ್ಚಿನ ಸಂಖ್ಯೆಯ ಜನ ಆಮಿಷಗಳಿಗೆ ಒಳಗಾಗಿ ಮತಾಂತರವಾಗುತ್ತಿರುವುದು ಕಂಡುಬಂದಿತ್ತು. ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

Vijaya Karnataka Web 20 Mar 2021, 7:25 am
ಕೋಲಾರ: ಹಿಂದೂ ಧರ್ಮಕ್ಕೆ ಸೇರಿದ ಹನ್ನೊಂದು ಮಂದಿ ಇತ್ತೀಚೆಗೆ ಸಾಮೂಹಿಕ ವಾಗಿ ಕ್ರಿಶ್ಚಿಯನ್‌ ಧರ್ಮಕ್ಕೆ ಮತಾಂತರವಾಗಿದ್ದು, ಜಿಲ್ಲೆಯಲ್ಲಿ ಮತ್ತೆ ಮತಾಂತರದ ಭೂತ ತಲೆ ಎತ್ತಿದೆಯೇ ಎಂಬ ಅನುಮಾನ ಮೂಡಿಸಿದೆ. ಹಿಂದೂ ಧರ್ಮದ ಪರಿಶಿಷ್ಟ ಜಾತಿಯ ಆದಿ ದ್ರಾವಿಡ ಸಮುದಾಯಕ್ಕೆ ಸೇರಿದ 11 ಮಂದಿ ಕ್ರಿಶ್ಚಿಯನ್‌ ಧರ್ಮಕ್ಕೆ ಸಾಮೂಹಿಕವಾಗಿ ಮತಾಂತರವಾಗಿದ್ದಾರೆ.
Vijaya Karnataka Web kolar


ಎರಡು ವರ್ಷಗಳ ಹಿಂದೆ ಕೆಜಿಎಫ್‌ನಲ್ಲಿ ಕ್ರಿಶ್ಚಿಯನ್‌ ಧರ್ಮಕ್ಕೆ ಮತಾಂತರ ಮಾಡುವ ಪ್ರಕ್ರಿಯೆ ವ್ಯಾಪಕವಾಗಿ ನಡೆಯುತ್ತಿತ್ತು. ಜಿಲ್ಲಾಡಳಿತದ ಕಟ್ಟುನಿಟ್ಟಿನ ಕ್ರಮಗಳಿಂದ ಎರಡು ವರ್ಷಗಳಿಂದ ಇದು ಹತೋಟಿಗೆ ಬಂದಿತ್ತು. ಸ್ವಇಚ್ಛೆಯಿಂದ ಮತಾಂತರಗೊಳ್ಳಲು ಕಾನೂನಿನಲ್ಲಿ ಅವಕಾಶವಿದೆಯಾದರೂ, ಹೆಚ್ಚಿನ ಸಂಖ್ಯೆಯ ಜನ ಆಮಿಷಗಳಿಗೆ ಒಳಗಾಗಿ ಮತಾಂತರವಾಗುತ್ತಿರುವುದು ಕಂಡುಬಂದಿತ್ತು.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದಂತಹವರು ಹೆಚ್ಚಿನ ಸಂಖ್ಯೆಯಲ್ಲಿ ಕ್ರಿಶ್ಚಿಯನ್‌, ಇಸ್ಲಾಂ ಧರ್ಮಗಳಿಗೆ ಸೇರ್ಪಡೆ ಯಾಗಿರುವುದು ಕಂಡುಬಂದಿದೆ. ಮತಾಂತರದ ಬಳಿಕವೂ ಅವರು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ದೊರೆಯುವ ಮೀಸಲಾತಿ ಹಾಗೂ ಸರಕಾರ ಸೌಲಭ್ಯಗಳನ್ನು ಪಡೆಯುತ್ತಿರುವ ಬಗ್ಗೆ ಆರೋಪಗಳಿವೆ.

ಪಂಚಾಯಿತಿ ಕಟ್ಟಡಕ್ಕೆ ಬೆಂಕಿ: ಪಿಡಿಒ ವಿರುದ್ಧ ಗ್ರಾಮಸ್ಥರ ಆರೋಪ

ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಂದ ಇತರೆ ಧರ್ಮಕ್ಕೆ ಮತಾಂತರಗೊಂಡವರ ಪೈಕಿ ಕೆಲವರು ಮಾತ್ರವೇ ಘೋಷಿಸಿಕೊಳ್ಳುತ್ತಾರೆ. ಉಳಿದವರು ಪ್ರತಿ ವಾರ ಚರ್ಚ್, ಮಸೀದಿಗಳಲ್ಲಿ ನಡೆಯುವ ಪ್ರಾರ್ಥನೆಗಳಲ್ಲಿ ಭಾಗವಹಿಸುತ್ತಾರೆ. ಆದರೆ ತಾವು ಪಡೆದಿರುವ ಎಸ್‌ಸಿ, ಎಸ್ಟಿ ಜಾತಿ ಪ್ರಮಾಣಪತ್ರಗಳನ್ನು ಸರಕಾರಕ್ಕೆ ಹಿಂತಿರುಗಿಸುವುದಿಲ್ಲ. ಪ್ರಮುಖವಾಗಿ ವಿದ್ಯಾಭ್ಯಾಸ, ಉದ್ಯೋಗ ದಂತಹ ಸಂದರ್ಭಗಳಲ್ಲಿಅದೇ ಪ್ರಮಾಣ-ಪತ್ರಗಳನ್ನು ಕೊಟ್ಟು ಸರಕಾರವನ್ನು ವಂಚಿಸುತ್ತಾರೆ ಎಂಬುದು ಕೆಲವರ ಆರೋಪವಾಗಿದೆ.

ಕೆಜಿಎಫ್‌ನಲ್ಲಿವೆ 170 ಚರ್ಚ್‌ಗಳು:
ಚಿನ್ನದ ಗಣಿ ಆರಂಭವಾದ ಸಂದರ್ಭದಲ್ಲಿ ಬ್ರಿಟಿಷರು ಕೆಜಿಎಫ್‌ನಲ್ಲಿವಾಸವಾಗಿದ್ದರು. ಅವಿಭಜಿತ ಕೆಜಿಎಫ್‌-ಬಂಗಾರಪೇಟೆ ತಾಲೂಕುಗಳಲ್ಲಿ170ಕ್ಕೂ ಹೆಚ್ಚಿನ ಚರ್ಚ್ಗಳನ್ನು ನಿರ್ಮಿಸಿದ್ದಾರೆ. ಹಿಂದೆ ಕ್ರೈಸ್ತ ಮಿಷನರಿಗಳ ಮೂಲಕ ಧರ್ಮ ಪ್ರಚಾರ, ಮತಾಂತರ ನಡೆಸುತ್ತಿರುವ ಬಗ್ಗೆ ಸಾಕಷ್ಟು ಆರೋಪಗಳು ಕೇಳಿಬಂದಿತ್ತು. ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದಿಂದ ಕ್ರಿಶ್ಚಿಯನ್‌ ಧರ್ಮಕ್ಕೆ ಕಾಲಕ್ರಮೇಣ 30 ಸಾವಿರಕ್ಕೂ ಹೆಚ್ಚಿನ ಜನರು ಮತಾಂತರಗೊಂಡಿದ್ದಾರೆ ಎನ್ನಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ