ಆ್ಯಪ್ನಗರ

ಕಂದಾಯ ಅದಾಲತ್‌ ಸದ್ಬಳಕೆಯಾಗಲಿ: ತಹಸೀಲ್ದಾರ್‌

ಕಾರ್ಯಭಾರದ ಒತ್ತಡದ ಕೊರತೆಯಿಂದ ಸಾರ್ವಜನಿಕರಿಗೆ ಕಂದಾಯ ಇಲಾಖೆಯಿಂದ ಸಮರ್ಪಕವಾಗಿ ಸೇವೆಗಳನ್ನು ನೀಡಲು ಆಗುತ್ತಿಲ್ಲ. ಆದ್ದರಿಂದ ಕಂದಾಯ ಅದಾಲತ್ತನ್ನು ಏರ್ಪಡಿಸಿದ್ದು, ಎಲ್ಲ ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ತಹಸೀಲ್ದಾರ್‌ ಬಿ.ಎನ್‌. ಪ್ರವೀಣ್‌ ಹೇಳಿದರು.

Vijaya Karnataka 18 Sep 2019, 3:57 pm
ನಂಗಲಿ: ಕಾರ್ಯಭಾರದ ಒತ್ತಡದ ಕೊರತೆಯಿಂದ ಸಾರ್ವಜನಿಕರಿಗೆ ಕಂದಾಯ ಇಲಾಖೆಯಿಂದ ಸಮರ್ಪಕವಾಗಿ ಸೇವೆಗಳನ್ನು ನೀಡಲು ಆಗುತ್ತಿಲ್ಲ. ಆದ್ದರಿಂದ ಕಂದಾಯ ಅದಾಲತ್ತನ್ನು ಏರ್ಪಡಿಸಿದ್ದು, ಎಲ್ಲ ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ತಹಸೀಲ್ದಾರ್‌ ಬಿ.ಎನ್‌. ಪ್ರವೀಣ್‌ ಹೇಳಿದರು.
Vijaya Karnataka Web revenue adalat may be useful tahsildar
ಕಂದಾಯ ಅದಾಲತ್‌ ಸದ್ಬಳಕೆಯಾಗಲಿ: ತಹಸೀಲ್ದಾರ್‌


ಬೈರಕೂರು ಗ್ರಾಮದಲ್ಲಿಏರ್ಪಡಿಸಿದ್ದ ಹೋಬಳಿ ಮಟ್ಟದ ಕಂದಾಯ ಅದಾಲತ್‌ ಮತ್ತು ಪಿಂಚಣಿ ಅದಾಲತ್‌ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಇತ್ತೀಚೆಗೆ ಕಂದಾಯ ಇಲಾಖೆಯ ಗ್ರಾಮ ಲೆಕ್ಕಾಧಿಕಾರಿಗಳು, ರಾಜಸ್ವ ನಿರೀಕ್ಷಕರು ಮತ್ತು ಇತರೆ ಅಧಿಕಾರಿಗಳಿಗೆ ಕಾರ್ಯಭಾರದ ಒತ್ತಡದಿಂದ ಸಾರ್ವಜನಿಕರ ಸಮಸ್ಯೆಗಳಿಗೆ ಕೂಡಲೇ ಸ್ಪಂದಿಸಲಾಗುತ್ತಿಲ್ಲ. ಆದ್ದರಿಂದ ಬೈರಕೂರು ಹೋಬಳಿ ಕೇಂದ್ರದಿಂದ ಕಂದಾಯ ಅದಾಲತ್ತನ್ನು ಪ್ರಾರಂಭಿಸುತ್ತಿದ್ದು, ಸಾರ್ವಜನಿಕರು ತಮ್ಮ ಏನೇ ಸಮಸ್ಯೆ ಇದ್ದರೂ ಅದಾಲತ್ತಿನಲ್ಲಿಅರ್ಜಿಗಳ ಮೂಲಕ ಸಲ್ಲಿಸಿ ತಮ್ಮ ಸಮಸ್ಯೆಗಳನ್ನು ಇತ್ಯರ್ಥಪಡಿಸಿಕೊಳ್ಳಬೇಕು ಎಂದರು.

ಅದಾಲತ್ತಿನಲ್ಲಿ ಕಂದಾಯ, ಪಿಂಚಣಿ, ವೃದ್ಧಾಪ್ಯ ವೇತನ, ಪೋಡಿ, ಖಾತಾ ಬದಲಾವಣೆ ಮತ್ತಿತರ ಕಂದಾಯ ಇಲಾಖೆಗೆ ಸಂಬಂಧಿಸಿದ ಸಮಸ್ಯೆಗಳಿಗೆ ಅದಾಲತ್ತಿನಲ್ಲಿಕೂಡಲೇ ಪರಿಹಾರ ಒದಗಿಸುತ್ತಿದೆ.ಆದ್ದರಿಂದ ಇದರ ಸೌಲಭ್ಯವನ್ನು ಸಾರ್ವಜನಿಕರು ಪಡೆದುಕೊಂಡು ತಾಲೂಕು ಕೇಂದ್ರ ಕಚೇರಿಗೆ ಪ್ರತಿದಿನ ಅಲೆಯುವುದನ್ನು ನಿಲ್ಲಿಸಬೇಕು ಎಂದು ಹೇಳಿದರು.

ಮುಂದೆ ತಾಲೂಕಿನ ಎಲ್ಲಹೋಬಳಿಗಳಲ್ಲಿಕಂದಾಯ ಅದಾಲತ್ತುಗಳನ್ನು ನಡೆಸಲಾಗುತ್ತಿದ್ದು, ಈಗಾಗಲೇ ದಿನಾಂಕ ನಿಗದಿಪಡಿಸಲಾಗಿದೆ.ಆದ್ದರಿಂದ ತಮ್ಮ ಹೋಬಳಿ ಕೇಂದ್ರಗಳಲ್ಲಿನಡೆಯುವ ಅದಾಲತ್ತಿಗೆ ಬೇಕಾದ ಎಲ್ಲದಾಖಲೆಗಳನ್ನು ಸಿದ್ದಪಡಿಸಿಕೊಂಡು ಆಯಾಯಾ ಹೋಬಳಿಗಳವರು ತಮ್ಮ ಸಮಸ್ಯೆಗಳನ್ನು ತಮ್ಮ ಹೋಬಳಿಯ ಅದಾಲತ್ತಿನಲ್ಲಿಯೇ ಪರಿಹರಿಸಿಕೊಳ್ಳಿ ಎಂದು ತಿಳಿಸಿದರು.

ಉಪ ತಹಶೀಲ್ದಾರ್‌ ಕೆ.ವೆಂಕಟೇಶಯ್ಯ, ರಾಜಸ್ವ ನಿರೀಕ್ಷಕ ಉಮೇಶ್‌, ಗ್ರಾಮ ಲೆಕ್ಕಾಧಿಕಾರಿಗಳಾದ ಅಶ್ವತ್‌, ನರೇಶ್‌,ವಿನೋದ್‌ ಮತ್ತಿತರರಿದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ