ಆ್ಯಪ್ನಗರ

ನರೇಗಾದಡಿ ಗ್ರಾಮೀಣ ಶಾಲೆಗಳ ಸಮಸ್ಯೆ ಬಗೆಹರಿಸಲು ಕ್ರಮ

ತಾಲೂಕಿನ ಗ್ರಾಮೀಣ ಭಾಗದಲ್ಲಿನ ಶಾಲೆಗಳಲ್ಲಿನ ಸಮಸ್ಯೆಗಳ ಬಗ್ಗೆ ಪಟ್ಟಿ ಮಾಡಿಕೊಟ್ಟರೆ ಆದ್ಯತೆ ಮೇರೆಗೆ ನರೇಗಾ ಯೋಜನೆಯಡಿ ಬಗೆಹರಿಸಲಾಗುವುದು ಎಂದು ತಾಪಂ ಅಧ್ಯಕ್ಷ ಸೂಲೂರು ಎಂ.ಆಂಜಿನಪ್ಪ ತಿಳಿಸಿದರು.

Vijaya Karnataka 31 May 2019, 5:00 am
ಕೋಲಾರ: ತಾಲೂಕಿನ ಗ್ರಾಮೀಣ ಭಾಗದಲ್ಲಿನ ಶಾಲೆಗಳಲ್ಲಿನ ಸಮಸ್ಯೆಗಳ ಬಗ್ಗೆ ಪಟ್ಟಿ ಮಾಡಿಕೊಟ್ಟರೆ ಆದ್ಯತೆ ಮೇರೆಗೆ ನರೇಗಾ ಯೋಜನೆಯಡಿ ಬಗೆಹರಿಸಲಾಗುವುದು ಎಂದು ತಾಪಂ ಅಧ್ಯಕ್ಷ ಸೂಲೂರು ಎಂ.ಆಂಜಿನಪ್ಪ ತಿಳಿಸಿದರು.
Vijaya Karnataka Web rural schools problem will be solved
ನರೇಗಾದಡಿ ಗ್ರಾಮೀಣ ಶಾಲೆಗಳ ಸಮಸ್ಯೆ ಬಗೆಹರಿಸಲು ಕ್ರಮ


ನಗರದ ತಾಲೂಕು ಪಂಚಾಯಿತಿ ಸಭಾಗಂಣದಲ್ಲಿ ಗುರುವಾರ ನಡೆದ ಶಿಕ್ಷ ಣಾಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.

ಬಿಆರ್‌ಪಿ, ಸಿಆರ್‌ಪಿಗಳು ಕೂಡಲೇ ತಮ್ಮ ವ್ಯಾಪ್ತಿಯ ಶಾಲೆಗಳ ಮುಖ್ಯಶಿಕ್ಷ ಕರ ಸಭೆ ನಡೆಸಿ, ಸಮಸ್ಯೆಗಳ ಪಟ್ಟಿ ತಯಾರಿಸಿ ಕಳುಹಿಸಿಕೊಡಬೇಕು. ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಸಭೆ ಕರೆದು ಸೌಕರ್ಯ ಕಲ್ಪಿಸಲು ಸೂಚಿಸಲಾಗುದು, ಇದಕ್ಕೆ ಇಲಾಖೆಯ ಅಧಿಕಾರಿಗಳು ಸಹಕಾರ ನೀಡಬೇಕು ಎಂದು ಕೋರಿದರು.

ನರೇಗಾ ಯೋಜನೆಯಡಿ ಸುಮಾರು ಅಭಿವೃದ್ಧಿ ಕೆಲಸಗಳನ್ನು ಕೈಗೊಳ್ಳಲು ಅವಕಾಶವಿದೆ. ಸರಕಾರಿ ಶಾಲೆಗಳಿಗೆ ಕಾಪೌಂಡ್‌, ಶೌಚಾಲಯ ಹಾಗೂ ಆಟದ ಮೈದಾನ ನಿರ್ಮಾಣಕ್ಕೂ ಅವಕಾಶವಿದೆ. ಮಾಹಿತಿಯ ಕೊರತೆಯಿಂದ ಯೋಜನೆಗಳು ಕಾರ್ಯಕತಗೊಳ್ಳುತ್ತಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.

ಸರಕಾರಿ ಶಾಲೆಗಳಲ್ಲಿ ಎಲ್‌ಕೆಜಿ, ಯುಕೆಜಿಯಿಂದ ಶಿಕ್ಷ ಣ ನೀಡದಾಗ ಬಡವರ ಮಕ್ಕಳಿಗೂ ಅನುಕೂಲವಾಗುತ್ತದೆ ಎಂದು ಇಲಾಖೆಯ ಕಾರ್ಯದರ್ಶಿ, ಆಯುಕ್ತರಿಗೆ ಪತ್ರ ಬರೆದು ಒತ್ತಾಯಿಸಲಾಗಿತ್ತು, ಈ ಹೋರಾಟದ ಫಲವಾಗಿ ಕನಸು ನನಸಾಗಿದೆ ಎಂದು ಹೇಳಿದರು.

ಈಗಿನ ಪರಸ್ಥಿತಿಯಲ್ಲಿ ಶಿಕ್ಷ ಣ ವ್ಯವಸ್ಥೆಯ ಮೇಲೆ ಸಾರ್ವಜನಿಕರಿಗೆ ನಂಬಿಕೆಯಿಲ್ಲದಂತಾಗಿದೆ. ಖಾಸಗಿ ಶಿಕ್ಷ ಣ ಸಂಸ್ಥೆಗಳು ಹಣ ಲಾಭಕ್ಕಾಗಿ ನಡೆಯುತ್ತಿವೆ. ಆದರೆ ಬಡವರಿಗೆ ಅದರ ಜ್ಞಾನವಿಲ್ಲದೆ ಅಲ್ಲೇ ದಾಖಲು ಮಾಡುತ್ತಿದ್ದಾರೆ. ಬಡ ಮಕ್ಕಳಿಗೂ ಇಂಗ್ಲಿಷ್‌ ಮಾಧ್ಯಮದಲ್ಲಿ ಶಿಕ್ಷ ಣ ನೀಡಲು ಸರಕಾರ ಕ್ರಮಕೈಗೊಂಡಿರುವುದು ಶ್ಲಾಘನೀಯ ಎಂದರು.

ಶಾಲೆಗಳಲ್ಲಿ ನೀರಿನ ಸಮಸ್ಯೆ ಇದ್ದರೆ ಕೂಡಲೇ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಗಮನಕ್ಕೆ ತಂದು ಬಗೆಹರಿಸಿಕೊಳ್ಳಬೇಕು. ಬೇಸಿಗೆಕಾಲ ಎದುರಾಗಿದ್ದರೂ ಎಲ್ಲೂ ನೀರಿಗೆ ಸಮಸ್ಯೆಯಿಲ್ಲ. ಮುಖ್ಯಶಿಕ್ಷ ಕರು ಕಾಳಜಿ ವಹಿಸಿ ಮಕ್ಕಳ ಹಿತದೃಷ್ಟಿಯಿಂದ ಕೆಲಸ ಮಾಡಬೇಕು ಎಂದು ಸಹೆಲ ನೀಡಿದರು.

ಖಾಸಗಿ ಶಾಲೆಗಳಿಂತ ಏನು ಸರಕಾರಿ ಶಾಲೆಗಳು ಕಡಿಮೆಯಿಲ್ಲ. ಗುಣಮಟ್ಟದ ಶಿಕ್ಷ ಣ ಸರಕಾರಿ ಶಾಲೆಗಳಲ್ಲಿ ದೊರೆಯುತ್ತದೆ. ಸರಕಾರ ಸಹ ಅನೇಕ ಯೋಜನೆಗಳನ್ನು ಅನುಷ್ಠಾನಗೊಳಿಸಿದೆ. ಇಲಾಖೆ ಅಧಿಕಾರಿಗಳು ವ್ಯಾಪಕ ಪ್ರಚಾರ ನಡೆಸುವ ಮೂಲಕ ಮಕ್ಕಳ ದಾಖಲಾತಿ ಸಂಖ್ಯೆ ಹೆಚ್ಚಿಸಬೇಕು ಎಂದು ಸಲಹೆ ನಿಡಿದರು.

ಶಿಕ್ಷ ಕರು ಪ್ರತಿ ದಿನ ಶಾಲೆಗೆ ಹಾಜರಾಗುತ್ತಿದ್ದಾರೆ ಎಂಬುದರ ಬಗ್ಗೆ ಬಿಆರ್‌ಪಿ, ಸಿಆರ್‌ಪಿಗಳು ಗಮನ ಹರಿಸಬೇಕು. ಸಮರ್ಪಕವಾಗಿ ಕೆಲಸ ಮಾಡದ ಶಿಕ್ಷ ಕರ ವಿರುದ್ಧ ಮಾಹಿತಿ ನೀಡಬೇಕು. ತಾವು ಶಾಲೆಗಳಿಗೆ ಧೀಡಿರ್‌ ಭೇಟಿ ನೀಡಿದಾಗ ಮಕ್ಕಳಿಂದ ಅಥವಾ ಪೋಷಕರಿಂದ ದೂರುಗಳು ಬರಬಾರದ ರೀತಿ ನೋಡಿಕೊಳ್ಳಬೇಕು ಎಂದು ಹೇಳಿದರು.

ಕ್ಷೇತ್ರ ಶಿಕ್ಷ ಣಾಧಿಕಾರಿ ಕೆ.ಎಸ್‌.ನಾಗರಾಜಗೌಡ ಮಾತನಾಡಿ, ಸರಕಾರಿ ಶಾಲೆಗಳಿಗೆ ಸೌಕರ್ಯ ಕಲ್ಪಿಸಿದಾಗ ಮಾತ್ರ ಮಕ್ಕಳ ದಾಖಲಾತಿಯೂ ಹೆಚ್ಚುತ್ತದೆ. ಕೇವಲ ಇಲಾಖೆಯಿಂದ ಬರುವ ಹಣದಿಂದ ಪೋಷಕರ ನಿರೀಕ್ಷೆಯಂತೆ ಅಭಿವೃದ್ಧಿಪಡಿಸಲು ಅಗುವುದಿಲ್ಲ. ತಾಪಂ ಪ್ರಯತ್ನಕ್ಕೆ ಎಲ್ಲರೂ ಸಹಕಾರ ನೀಡಬೇಕು ಎಂದರು.

ಎಸ್ಸೆಸ್ಸೆಲ್ಸಿ ಪರೀಕ್ಷೆಯ ಫಲಿತಾಂಶ ಉತ್ತಮಪಡಿಸಲು ಈಗಿನಿಂದಲೇ ಕ್ರಮ ಕೈಗೊಳ್ಳಬೇಕು. ಶಾಲೆಗಳಲ್ಲಿ ಆವಿಷ್ಕಾರದಂತಹ ಚಟುವಟಿಕೆಗಳು ನಡೆದಾಗ ಮಕ್ಕಳ ಶೈಕ್ಷ ಣಿಕ ಪ್ರಗತಿ ಅಗುತ್ತದೆ. ಯಾವುದೇ ಕೆಲಸ ಮಾಡಲು ಅಧಿಕಾರಿಗಳಿಗೆ ಬದ್ಧತೆಯಿರಬೇಕು ಎಂದು ಸಲಹೆ ನೀಡಿದರು.

ಸಭೆಯಲ್ಲಿ ಶಿಕ್ಷ ಣ ಸಂಯೋಜಕ ರಾಮಕೃಷ್ಣಪ್ಪ, ತಾಪಂ ವ್ಯವಸ್ಥಾಪಕ ಕಾಮತ್‌ ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ