ಆ್ಯಪ್ನಗರ

ದೇವಾಲಯ ಕೋಟ್ಯಂತರ ರೂ.ಚಿನ್ನ ಬೆಳ್ಳಿ ಹಣ ಕಳವು: ಅರ್ಚಕರಿಂದ ದೂರು

ದೇವಾಲಯ ಧÜರ್ಮದರ್ಶಿ ಶಿವಪ್ರಸಾದ್‌ ಮತ್ತು ಅರ್ಚಕ ಪದ್ಮನಾಭ ಆಡಳಿತಾಧಿಕಾರಿ ಕುಮಾರಿ ಮತ್ತು ಅವರ ಸಂಬಂಧಿಗಳಾದ ಸುನಿಲ್‌,ಚಾಲಕ ಮಹೇಶ್‌, ವೆಂಕಟಚಲ,ಅಕ್ಕನ ಮಕ್ಕಳಾದ ಅನಿತಾ,ರೂಪ, ...

Vijaya Karnataka 31 Jan 2019, 5:00 am
ಕೆಜಿಎಫ್‌: ದೇವಾಲಯ ಧÜರ್ಮದರ್ಶಿ ಶಿವಪ್ರಸಾದ್‌ ಮತ್ತು ಅರ್ಚಕ ಪದ್ಮನಾಭ ಆಡಳಿತಾಧಿಕಾರಿ ಕುಮಾರಿ ಮತ್ತು ಅವರ ಸಂಬಂಧಿಗಳಾದ ಸುನಿಲ್‌,ಚಾಲಕ ಮಹೇಶ್‌, ವೆಂಕಟಚಲ,ಅಕ್ಕನ ಮಕ್ಕಳಾದ ಅನಿತಾ,ರೂಪ, ಕೋಟ್ಯಂತರ ರೂ.ಚಿನ್ನ,ಬೆಳ್ಳಿ, ಹಣ ಕಳವು ಮಾಡಿಕೊಂಡು ಹೋಗಿರುವುದಾಗಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳಿಗೆ ದೂರು ನೀಡಿದ್ದಾರೆ.
Vijaya Karnataka Web silver money stolen by temple chin rs
ದೇವಾಲಯ ಕೋಟ್ಯಂತರ ರೂ.ಚಿನ್ನ ಬೆಳ್ಳಿ ಹಣ ಕಳವು: ಅರ್ಚಕರಿಂದ ದೂರು


ಏನೀದು ದೂರು: 13-12-18 ರಂದು ರಾತ್ರಿ 12 ಗಂಟೆ ಸುಮಾರಿಗೆ ಇನೋವ ಕಾರಿನ ಸಂಖ್ಯೆ ಕೆ.ಎ 08- ಎಂ.1314ರಲ್ಲಿ ಬಂದ ಕುಮಾರಿ ಸಂಬಂಧಿಗಳಾದ ಸುನಿಲ್‌,ಚಾಲಕ ಮಹೇಶ್‌,ಅಕ್ಕನ ಮಗಳಾದ ಅನಿತಾ ರೂಪ ಇಬರು ನ್ಯೂಅಕ್ಷ್‌ಫರ್ಡ್‌ ಶಾಲೆಯೊಳಗಿರುವ ಕಚೇರಿಯಲ್ಲಿರುವ ಲಾಕರ್‌ ತೆಗೆದು ದೇವಾಲಯದ ಚಿನ್ನಾಭರಣ,ಬೆಳ್ಳಿ,ಹಣ ಮತ್ತು ದಾಖಲೆಗಳನ್ನು ಚೀಲಗಳಲ್ಲಿ ತುಂಬಿಕೊಂಡು ಸ್ವಂತ ಕೆ.ವಿ ಕುಮಾರಿ ಅವರ ಕಾರಿನಲ್ಲಿ ಸಾಗಿಸಿದ್ದನ್ನು ಕಣ್ಣಾರೆ ನೋಡಿದ್ದೇವೆ. ಈ ವಿಷಯವನ್ನು ಯಾರಿಗಾದರು ತಿಳಿಸಿದರೆ ಪ್ರಾಣ ತೆಗೆಯುವುದಾಗಿ ಬೆದರಿಕೆ ಹಾಕಿದ್ದ ಹಿನ್ನೆಲೆಯಲ್ಲಿ ನಾವು ಯಾರಿಗೂ ತಿಳಿಸಿಲ್ಲ ಎಂದು ಅರ್ಚಕ ಪದ್ಮನಾಭ ದೂರಿನಲ್ಲಿ ತಿಳಿಸಿದ್ದಾರೆ.

ಹುಂಡಿ ಹಣ ಸಹ ದೋಚಿದರು: ದಿನಾಂಕ 22-12-18 ರಂದು ರಾತ್ರಿ ಕೆ.ವಿ .ಕುಮಾರಿ ಸಹಸಚರರು ದೇವಾಲಯದ ಎಲ್ಲ ಹುಂಡಿಗಳನ್ನು ಹೊಡೆದು ಹಣ ದೋಚಿದ್ದಾರೆ. ಹುಂಡಿಗಳನ್ನು ಹೊಡೆದು ಹಣ ದೋಚಿರುವುದು ಸಿಸಿ ಕ್ಯಾಮಾರ ಮೂಲಕ ಬಯಲಿಗೆ ಬರುತ್ತದೆ ಎಂದು ತಿಳಿದು ಮುನ್ನ್ನಾದಿನವೇ ಸಂಬಂಧಿಕರಾದ ತಿಲಕ್‌ ಮತ್ತು ದಿನೇಶ್‌ ಸಿಸಿ ಕ್ಯಾಮಾರಗಳ ಡಿವಿಆರ್‌ ಸ್ವಿಚ್‌ಆಫ್‌ ಮಾಡಿ ಹೋಗಿರುವುದಾಗಿ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ. ದೇವಾಲಯದ ಚಿನ್ನಾಭರಣ, ಹಣವನ್ನು ವಾಪಸ್‌ ಕೊಡಿಸುವಂತೆ ಅರ್ಚಕರಾದ ಪದ್ಮನಾಭ್‌ ಪೊಲೀಸರಲ್ಲಿ ಮನವಿ ಮಾಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ