ಆ್ಯಪ್ನಗರ

ಕೋಲಾರ: ಆನೆ ದಾಳಿ ತಡೆಯಲು ಸೋಲಾರ್ ಬೇಲಿ ಮೊರೆ

ಸೋಲಾರ್ ಫೆನ್ಸಿಂಗ್ ಹಾಕಿರುವ ಕಡೆಯಿಂದ ಪ್ರತಿಸಲ ಗ್ರಾಮಕ್ಕೆ ಆಗಮಿಸ್ತಿದ್ದ ಆನೆಗಳು, ಇದೀಗ ಬೇರೆ ದಾರಿಯಿಂದ ಗ್ರಾಮಗಳಿಗೆ ಲಗ್ಗೆಯಿಡುತ್ತಿದ್ದು ಮತ್ತೊಮ್ಮೆ ರೈತರಿಗೆ ಹಾಗೂ ಅರಣ್ಯ ಇಲಾಖೆಗೆ ತಲೆನೋವಾಗಿದೆ.

Vijaya Karnataka Web 20 Mar 2021, 7:57 pm
ಕೋಲಾರ: ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಗಡಿಯಲ್ಲಿ ಆನೆ ದಾಳಿಗೆ ರೈತರು ತತ್ತರಿಸಿ ಹೊಗಿದ್ದಾರೆ, ನಿರಂತರವಾಗಿ ದೋಣಿಮಡುಗು ಗ್ರಾಮ ಪಂಚಾಯ್ತಿಗೆ ಸೇರುವ ಕಾಡು ಪ್ರದೇಶದ ಅಂಚಿನಲ್ಲಿರೊ 10ಕ್ಕೂ ಹೆಚ್ಚು ಗ್ರಾಮಗಳಲ್ಲಿ, ವಾರಕ್ಕೆ ಎರಡುಮೂರು ಬಾರಿ ಆನೆಗಳ ದಾಳಿಯಿಂದ ರೈತರ ಬೆಳೆಗಳು ನಾಶವಾಗುತ್ತಿವೆ.
Vijaya Karnataka Web ಆನೆ ದಾಳಿ
ಆನೆ ದಾಳಿ


ಇತ್ತ ಅರಣ್ಯ ಇಲಾಖೆಗೂ ಆನೆ ಹಾವಳಿ ತಡೆಯುವುದು ಸವಾಲಾಗಿದೆ, ಇದೀಗ ರೈತರ ಬೆಳೆಗಳನ್ನ ರಕ್ಷಿಸಲು ಸೋಲಾರ್ ಫೆನ್ಸಿಂಗ್ ನಿರ್ಮಿಸಲು ಅರಣ್ಯ ಇಲಾಖೆ ಮುಂದಾಗಿದ್ದು, ಇದಕ್ಕೆ ಇಂಡಿಯನ್ ಇನ್ಸ್ಟಿಟ್ಯೂಟ್ ಆಪ್ ಸೈನ್ಸ್ ಸಂಸ್ತೆಯು ಕೈ ಜೋಡಿಸಿದ್ದು, ಆದರು ಆನೆದಾಳಿಗಳು ಮುಂದುವರೆದಿದೆ.

ಅತಿಹೆಚ್ಚು ಕಾಡಾನೆ ಹಾವಳಿಯಿರೊ ತಳೂರು ಗ್ರಾಮದ ಅರಣ್ಯ ಪ್ರದೇಶದ ಪಕ್ಕದಲ್ಲಿರೋ ರೈತ ಸಂಪಂಗಿಗೌಡ ಎನ್ನುವರ ನಾಲ್ಕು ಎಕರೆಯ ಸುತ್ತಮುತ್ತ ಸೋಲಾರ್ ಫೆನ್ಸಿಂಗ್ ವ್ಯವಸ್ತೆಯನ್ನ ಉಚಿತವಾಗಿ ನಿರ್ಮಿಸಲಾಗಿದೆ, ಇದರಿಂದಾಗಿ ಆನೆಗಳು ಫೆನ್ಸಿಂಗ್‍ಗೆ ತಾಕಿದಲ್ಲಿ ಒಂದು ಕ್ಷಣ ಶಾಕ್ ಹೊಡೆಯುವ ಅನುಭವ ಉಂಟಾಗಿ ಆನೆಗಳು ಸುಳಿಯುವ ಸಾಧ್ಯತೆ ಕಡಿಮೆಯಾಗಿದ್ದು, ಕಳೆದ ಒಂದು ವಾರದಿಂದ ಸಂಪಂಗಿಗೌಡ ಅವ್ರ ತೋಟ ಸೇರಿದಂತೆ ಅಕ್ಕ ಪಕ್ಕದಲ್ಲೆ ಇರುವ 15 ರೈತರ ತೋಟಗಳಿಗೆ ಆನೆಗಳು ಲಗ್ಗೆಯಿಡಲು ಸಾಧ್ಯವಾಗಿಲ್ಲ.

ಸೋಲಾರ್ ಫೆನ್ಸಿಂಗ್ ಹಾಕಿರುವ ಕಡೆಯಿಂದ ಪ್ರತಿಸಲ ಗ್ರಾಮಕ್ಕೆ ಆಗಮಿಸ್ತಿದ್ದ ಆನೆಗಳು, ಇದೀಗ ಬೇರೆ ದಾರಿಯಿಂದ ಗ್ರಾಮಗಳಿಗೆ ಲಗ್ಗೆಯಿಡುತ್ತಿದ್ದು ಮತ್ತೊಮ್ಮೆ ರೈತರಿಗೆ ಹಾಗೂ ಅರಣ್ಯ ಇಲಾಖೆಗೆ ತಲೆನೋವಾಗಿದೆ, ಈ ಬಗ್ಗೆ ಮಾತನಾಡಿರುವ ರೈತ ಸಂಪಂಗಿಗೌಡ ನಮ್ಮ ತೋಟಕ್ಕೆ ಸೋಲಾರ್ ಪೆನ್ಸಿಂಗ್ ವ್ಯವಸ್ತೆ ಮಾಡಿರುವ ಕಾರಣ ಆನೆಗಳು ಲಗ್ಗೆಯಿಡಲು ಸಾಧ್ಯವಾಗ್ತಿಲ್ಲ, ಆದ್ರೆ ಸುತ್ತಮುತ್ತಲ ಪ್ರದೇಶದಲ್ಲಿ ಆನೆಗಳು ನುಗ್ಗಲು ಆರಂಭಿಸಿದೆ.

ಆನೆ ಹಾವಳಿ ಇರೋ ಅರಣ್ಯ ಪ್ರದೇಶದಲ್ಲಿ, 5 ಕಿಲೋ ಮೀಟರ್ ಉದ್ದ ಸೋಲಾರ್ ಫೆನ್ಸಿಂಗ್ ಅಳವಡಿಸಲು ಅನುದಾನ ಬಂದಿದ್ದು, ಈಗಾಗಲೇ ಖಾಸಗಿಯವರಿಗೆ ಗುತ್ತಿಗೆಯನ್ನ ನೀಡಲಾಗಿದೆ, ಒಂದು ತಿಂಗಳ ಒಳಗಾಗಿ ಕಾಮಗಾರಿಯು ಆರಂಭವಾಗಲಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ