ಆ್ಯಪ್ನಗರ

ಭಿನ್ನಾಭಿಪ್ರಾಯ ಬಿಟ್ಟು ಪಕ್ಷ ಕ್ಕೆ ಶ್ರಮಿಸಿ: ಮುನಿಸ್ವಾಮಿ

ಇಲ್ಲಿನ ಲೋಕಸಭಾ ಮೀಸಲು ಕ್ಷೇತ್ರದಲ್ಲಿ ಬಿಜೆಪಿಯನ್ನು ಗೆಲ್ಲಿಸಲು ತಮ್ಮಲ್ಲಿರುವ ಭಿನ್ನಾಭಿಪ್ರಾಯಗಳನ್ನು ಮರೆತು ಒಟ್ಟಾಗಿ ಪಕ್ಷ ದ ಏಳಿಗೆಗೆ ದುಡಿದು, ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿ ಮಾಡಲು ಮುಖಂಡರು ಬೂತ್‌ ಮಟ್ಟದಲ್ಲಿ ಶ್ರಮಿಸಬೇಕಿದೆ ಎಂದು ಬಿಜೆಪಿ ಅಭ್ಯರ್ಥಿ ಎಸ್‌.ಮುನಿಸ್ವಾಮಿ ತಿಳಿಸಿದರು.

Vijaya Karnataka 29 Mar 2019, 5:00 am
ಕೋಲಾರ: ಇಲ್ಲಿನ ಲೋಕಸಭಾ ಮೀಸಲು ಕ್ಷೇತ್ರದಲ್ಲಿ ಬಿಜೆಪಿಯನ್ನು ಗೆಲ್ಲಿಸಲು ತಮ್ಮಲ್ಲಿರುವ ಭಿನ್ನಾಭಿಪ್ರಾಯಗಳನ್ನು ಮರೆತು ಒಟ್ಟಾಗಿ ಪಕ್ಷ ದ ಏಳಿಗೆಗೆ ದುಡಿದು, ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿ ಮಾಡಲು ಮುಖಂಡರು ಬೂತ್‌ ಮಟ್ಟದಲ್ಲಿ ಶ್ರಮಿಸಬೇಕಿದೆ ಎಂದು ಬಿಜೆಪಿ ಅಭ್ಯರ್ಥಿ ಎಸ್‌.ಮುನಿಸ್ವಾಮಿ ತಿಳಿಸಿದರು.
Vijaya Karnataka Web stop dissidence and work hard
ಭಿನ್ನಾಭಿಪ್ರಾಯ ಬಿಟ್ಟು ಪಕ್ಷ ಕ್ಕೆ ಶ್ರಮಿಸಿ: ಮುನಿಸ್ವಾಮಿ


ನಗರದ ಬಿಜೆಪಿ ಕಚೇರಿಯಲ್ಲಿ ನಡೆದ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಕ್ಷೇತ್ರದ ಒಟ್ಟು 2,500 ಬೂತ್‌ಗಳಲ್ಲಿ ಮುಂದಿನ 20 ದಿನಗಳಲ್ಲಿ ಮತದಾರರಿಗೆ ಮೋದಿ ಮಾಡಿರುವ ಕಾರ್ಯಗಳ ಅರಿವು ಮೂಡಿಸಿ ಬಿಜೆಪಿಯನ್ನು ಗೆಲ್ಲಿಸಲು ಕಾರ್ಯನಿರ್ವಹಿಸಬೇಕಿದೆ ಎಂದು ಹೇಳಿದರು.

2014ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಕೇವಲ 10 ಸಾವಿರ ಮತಗಳ ಅಂತರದಲ್ಲಿ ಸೋಲನ್ನು ಕಂಡಿದ್ದು, ಈ ಬಾರಿಯ ಚುನಾವಣೆಯಲ್ಲಿ ಅಧಿಕ ಮತಗಳಿಂದ ಗೆಲ್ಲಲು ಶ್ರಮಿಸಬೇಕು. ಕಾರ್ಯಕರ್ತರು, ಮುಖಂಡರು ಒಗ್ಗಟ್ಟಿನಿಂದ ಪಕ್ಷ ದ ಹಿತಸಾಧನೆಗೆ ಜನರ ಏಳಿಗೆಗೆ ದುಡಿದು, ಕೆ.ಎಚ್‌.ಮುನಿಯಪ್ಪ ಅವರನ್ನು ತಂತ್ರಗಳನ್ನು ಎದುರಿಸಲು ಸಿದ್ಧರಾಗಬೇಕು ಎಂದರು.

ಜಿಲ್ಲೆಯನ್ನು ಬರಪೀಡಿತ ಪ್ರದೇಶ ಎಂದು ಘೋಷಿಸಿದ್ದರೂ ಸಂಸದರಾದ ಕೆ.ಎಚ್‌.ಮುನಿಯಪ್ಪ ಸಾರ್ವಜನಿಕರಿಗೆ ಯಾವುದೇ ರೀತಿಯಾದ ಸೌಲಭ್ಯಗಳನ್ನು ಒದಗಿಸಲು ಮುಂದಾಗಲಿಲ್ಲ. ಆದರೆ ಅವರು ಆಸ್ತಿ ಅಭಿವೃದ್ಧಿ ಮಾಡಲು ಶ್ರಮಿಸುವ ಸಾಧನೆಯಲ್ಲಿ ನಿರಂತರವಾಗಿ ತೊಡಗಿರುವುದು ದುರಂತದ ಸಂಗತಿ. ಆದ್ದರಿಂದ ಈ ಬಾರಿ ಜನರಿಗೆ ಕೆ.ಎಚ್‌.ಮುನಿಯಪ್ಪ ಅವರ ಆಡಳಿತ ವೈಖರಿ ಮತ್ತು ಜಿಲ್ಲೆಗೆ ನೀಡಿರುವ ಅಪಾರ ಕೊಡುಗೆಗಳ ಬಗ್ಗೆ ಅರಿವು ಮೂಡಿಸಬೇಕಿದೆ ಎಂದು ಟೀಕಿಸಿದರು.

ರಾಜ್ಯದ ವಿವಿಧೆಡೆ ಸಾವಿರಾರು ಎಕರೆ ಜಮೀನನ್ನು ತನ್ನ ಸಂಬಂಧಿಕರ ಹೆಸರಿನಲ್ಲಿ ಮಾಡಿಕೊಂಡಿರುವ ಕುರಿತು ಅವರ ಮೇಲೆ ಅಕ್ರಮ ಆಸ್ತಿ, ಭೂಕಬಳಿಕೆ ಎಂದು ಜಿಲ್ಲೆಯ ನಾನಾ ಸಂಘಟನೆಗಳ ಮುಖಂಡರು ಆರೋಪಗಳನ್ನು ಮಾಡುತ್ತಿದ್ದರೂ ಕೆ.ಎಚ್‌.ಮುನಿಯಪ್ಪ ಅವರು ಇದೆಲ್ಲಾ ರಾಜಕೀಯ ವಿರೋಧಿಗಳ ಕೈವಾಡ. ಅನವಶ್ಯಕವಾಗಿ ಆರೋಪಗಳನ್ನು ಮಾಡುತ್ತಿದ್ದಾರೆಂದು ತಮ್ಮನ್ನು ಸಮರ್ಥಿಸಿಕೊಳ್ಳುತ್ತಿರುವುದು ಖಂಡನೀಯ ಎಂದರು.

ಬಿಜೆಪಿ ಜಿಲ್ಲಾಧ್ಯಕ್ಷ ಬಿ.ಪಿ.ವೆಂಕಟಮುನಿಯಪ್ಪ ಮಾತನಾಡಿ, ಯುವ ಮತದಾರರು ದೇಶದ ಹಿತದೃಷ್ಟಿಯಿಂದ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಲು ಮುಂದಾಗಬೇಕೇ ಹೊರತು ಪ್ರತಿಪಕ್ಷ ಗಳ ಕಾರ್ಯಕರ್ತರ ಮೇಲೆ ವಿನಾಕಾರಣ ಜಗಳಕ್ಕೆ ಇಳಿಯಬಾರದು. ಅವರಿಂದ ಬಿಜೆಪಿ ಪಕ್ಷ ಕ್ಕೆ ಮತಗಳ ಅವಶ್ಯಕತೆ ಇದೆ ಎಂದು ತಿಳಿಸಿದರು.

ಬಿಜೆಪಿ ಪಕ್ಷ ದ ಯುವ ಮುಖಂಡರಾದ ಓಂಶಕ್ತಿ ಚಲಪತಿ, ವಕ್ಕಲೇರಿ ವೇಣುಗೋಪಾಲ್‌, ರಾಮಚಂದ್ರಗೌಡ, ಸುನಿಲ್‌ಕುಮಾರ್‌, ಶಿಳ್ಳಂಗೆರೆಶಿವಕುಮಾರ್‌, ನಾಗರಾಜ್‌, ಸಂತೋಷ್‌, ಸುರೇಶ್‌ ಮತ್ತಿತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ