ಆ್ಯಪ್ನಗರ

ಚಿತ್ರ ಬಿಡುಗಡೆ ತಡೆಯೋಣ ಬನ್ನಿ, ಕೆಜಿಎಫ್ ಚಲನಚಿತ್ರ ವಿರೋಧಿಸಿ ಕರಪತ್ರ ಹಂಚಿಕೆ

ನಟ ಯಶ್ ಅಭಿನಯದ ಕೆಜಿಎಫ್ ಚಲನಚಿತ್ರ ಬಿಡುಗಡೆ ತಡೆಯೋಣ ಬನ್ನಿ ಎಂದು ನಮೂದಿಸಿರುವ ಕರಪತ್ರ ಈಗ ಕೆಜಿಎಫ್ ಸೇರಿದಂತೆ ಹಲವೆಡೆ ಹರಿದಾಡುತ್ತಿದೆ.

Vijaya Karnataka Web 20 Dec 2018, 10:30 pm
ಕೋಲಾರ: ನಟ ಯಶ್ ಅಭಿನಯದ ಕೆಜಿಎಫ್ ಚಲನಚಿತ್ರ ಬಿಡುಗಡೆ ತಡೆಯೋಣ ಬನ್ನಿ ಎಂದು ನಮೂದಿಸಿರುವ ಕರಪತ್ರ ಈಗ ಕೆಜಿಎಫ್ ಸೇರಿದಂತೆ ಹಲವೆಡೆ ಹರಿದಾಡುತ್ತಿದೆ.
Vijaya Karnataka Web ಕರಪತ್ರ
ಕರಪತ್ರ


ಕೆಜಿಎಫ್ ನಾಗರಿಕರು ಎಂಬ ಹೆಸರಿನಲ್ಲಿ ತಮಿಳು, ಕನ್ನಡ, ಆಂಗ್ಲ ಭಾಷೆಯಲ್ಲಿ ಮುದ್ರಿತವಾಗಿರುವ ಕರಪತ್ರ ಈಗ ಹೆಚ್ಚಾಗಿ ಕೆಜಿಎಫ್ ಮತ್ತಿತರೆಡೆ ಸದ್ದು ಮಾಡಿದೆ.

ಕೆಜಿಎಫ್‍ನ ಸಹೋದರರೇ, ನೋಡಿ ನಮ್ಮ ಊರು, ನಮ್ಮ ಊರಿನ ಗೌರವ, ಮಾನ ಮರ್ಯಾದೆಯನ್ನು ತೆಗೆಯುತ್ತಿದ್ದಾರೆಂಬಂತೆ ಕರಪತ್ರದಲ್ಲಿ ಬಿಂಬಿಸಲಾಗಿದೆ.

ಕೊಲೆಗಾರರು, ದೊಂಬಿಕೋರರು, ರಕ್ತ ಪಿಶಾಚಿಗಳು, ಕ್ರೂರ ಸ್ವಾಭಾವದ ಜನರು, ರೌಡಿಗಳು ಎಂದು ಕೆಜಿಎಫ್ ಚಿತ್ರವನ್ನು ಚಿತ್ರೀಕರಣ ಮಾಡಿ, ಯುವಕರು, ಉದ್ಯೋಗ ಅವಕಾಶಗಳಿಗೆ ಕುಂದುಂಟು ಮಾಡಿ, ನಗರದ ಜನರಿಗೆ, ನಗರಕ್ಕೆ, ಗೌರವಕ್ಕೆ ಧಕ್ಕೆ ತರಲಾಗಿದೆ.

ದಲಿತ ವಾಸಿಗಳ ಬಗ್ಗೆ ಹೀನವಾಗಿ ಚಿತ್ರ ತಯಾರಿಸಿ, ಪ್ರಪಂಚಕ್ಕೆಲ್ಲಾ ಪ್ರಚಾರ ಮಾಡುವ ಮೂಲಕ ಭಾರತದ ಸಂವಿಧಾನ ಕ್ರಿಯೆಗೂ ಧಕ್ಕೆ ಮಾಡಿರುತ್ತಾರೆ.

ಭಾರತದ ಡಾ.ಬಾಬಾ ಸಾಹೇಬರ ಸೇವೆಗೆ, ಮಾನವ ಹಕ್ಕುಗಳಿಗೆ ಅಡ್ಡಗಾಲು ಮಾಡಿರುವ ಚಿತ್ರ ಬಿಡುಗಡೆಗೆ ತಡೆದು ಮಾನವ ಹಕ್ಕುಗಳನ್ನು, ದಲಿತರನ್ನು ರಕ್ಷಿಸಲು ಬನ್ನಿ, ಒಂದುಗೂಡಿ ನಮ್ಮನ್ನು, ನಮ್ಮ ಜೀವನವನ್ನು, ಊರನ್ನು ರಕ್ಷಿಸೋಣ ಎಂದು ಕರಪತ್ರದಲ್ಲಿ ವಿವರಿಸಲಾಗಿದೆ.

ಹೀಗೆ ಮೂರು ಭಾಷೆಯಲ್ಲಿ ಮುದ್ರಿಸಿರುವ ಕರಪತ್ರ ಹಂಚಿಕೆ ಮಾಡಲಾಗಿದೆ. ಇದು ಎಲ್ಲೆಡೆ ವೈರಲ್ ಆಗಿದೆ. ಇದು ಯಾವ ಹಂತಕ್ಕೆ ತಲುಪಲಿದೆ ಎಂಬುದನ್ನು ಕಾದು ನೋಡಬೇಕಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ