ಆ್ಯಪ್ನಗರ

ಸಮರ್ಪಕ ನೀರು ಸರಬರಾಜಿಗೆ ಆಗ್ರಹ

ತಾಲೂಕಿನ ಸೋರೆಗೌಡನಕೋಟೆ ಗ್ರಾಮದ ಹೊಸ ಬಡಾವಣೆ ಪ್ರಶಾಂತ್‌ನಗರಕ್ಕೆ ಸರಿಯಾಗಿ ನೀರು ಸರಬರಾಜು ಮಾಡುತ್ತಿಲ್ಲ ಎಂದು ಆರೋಪಿಸಿ ಕರ್ನಾಟಕ ಸಿಂಹ ಘರ್ಜನೆ ವೇದಿಕೆ ನೇತೃತ್ವದಲ್ಲಿ ಮಹಿಳೆಯರು ಚಿನ್ನಕೋಟೆ ಗ್ರಾಪಂ ಮುಂಭಾಗ ಪ್ರತಿಭಟಿಸಿದರು.

Vijaya Karnataka 15 Mar 2019, 2:52 pm
ಬಂಗಾರಪೇಟೆ: ತಾಲೂಕಿನ ಸೋರೆಗೌಡನಕೋಟೆ ಗ್ರಾಮದ ಹೊಸ ಬಡಾವಣೆ ಪ್ರಶಾಂತ್‌ನಗರಕ್ಕೆ ಸರಿಯಾಗಿ ನೀರು ಸರಬರಾಜು ಮಾಡುತ್ತಿಲ್ಲ ಎಂದು ಆರೋಪಿಸಿ ಕರ್ನಾಟಕ ಸಿಂಹ ಘರ್ಜನೆ ವೇದಿಕೆ ನೇತೃತ್ವದಲ್ಲಿ ಮಹಿಳೆಯರು ಚಿನ್ನಕೋಟೆ ಗ್ರಾಪಂ ಮುಂಭಾಗ ಪ್ರತಿಭಟಿಸಿದರು.
Vijaya Karnataka Web supply sufficient drinking water
ಸಮರ್ಪಕ ನೀರು ಸರಬರಾಜಿಗೆ ಆಗ್ರಹ


ಮಹಿಳೆಯರು ಕುಡಿಯುವ ನೀರಿಗಾಗಿ ದಿನನಿತ್ಯ ಪಡಿಪಾಟಲು ಬೀಳುತ್ತಿದ್ದಾರೆ. ಹಲವಾರು ಬಾರಿ ಗ್ರಾಪಂ ಅಧಿಕಾರಿಗಳಿಗೆ ತಿಳಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಆರೋಪಿಸಿ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಘೋಷಣೆಗಳನ್ನು ಕೂಗಿದರು.

ಖಾಲಿ ಬಿಂದಿಗೆಗಳನ್ನು ಪ್ರದರ್ಶನ ಮಾಡಿದ ಮಹಿಳೆಯರು ಸುಮಾರು 2 ತಿಂಗಳುಗಳಿಂದ ಗ್ರಾ.ಪಂ ಸದಸ್ಯರಿಗೆ ಹಾಗೂ ಸ್ವಗ್ರಾಮಕ್ಕೆ ಸೇರಿದ ಅಧ್ಯಕ್ಷೆ .ಸುಮಿತ್ರ ರವರಿಗೆ ಮತ್ತು ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದಿದರೂ ಯಾವುದೇ ರೀತಿಯಲ್ಲಿ ಪ್ರಯೋಜನವಾಗುತ್ತಿಲ್ಲ. 2013ನೇ ಸಾಲಿನಲ್ಲಿ ಓವರ್‌ಹೆಡ್‌ ಟ್ಯಾಂಕ್‌ ಉದ್ಟಾಟನೆಯಾಗಿದ್ದರೂ ಇದುವರೆಗೂ ಆ ಟ್ಯಾಂಕ್‌ಗೆ ನೀರೇ ಬಿಟ್ಟಿಲ್ಲ. ಇದರಿಂದ ಲಕ್ಷಾಂತರ ರೂ ವ್ಯಯ ಮಾಡಿದರೂ ಪ್ರಯೋಜನವಾಗಿಲ್ಲ ಎಂದು ಆರೋಪಿಸಿದ ಪ್ರತಿಭಟನಾಕಾರರು, ಪ್ರತಿಭಟನೆ ವೇಳೆ ಸ್ಥಳದಲ್ಲಿ ಪಿಡಿಒ ಅವರನ್ನು ತರಾಟೆಗೆ ತೆಗೆದುಕೊಂಡರು. ಕೂಡಲೇ ಸ್ಥಳ ಪರಿಶೀಲನೆ ನಡೆಸಿ ನೀರಿನ ಸಮಸ್ಯೆ ಬಗೆಹರಿಸುವುದಾಗಿ ಪಿಡಿಒ ಅವರು ಪ್ರತಿಭಟನಾಕಾರರಿಗೆ ತಿಳಿಸಿದರು.

ಪ್ರತಿಭಟನೆಯಲ್ಲಿ ಕರ್ನಾಟಕ ಸಿಂಹ ಘರ್ಜನೆ ವೇದಿಕೆ ಅಧ್ಯಕ್ಷ .ಪ್ರಸನ್ನಕುಮಾರ್‌ ಸ್ವಾಮಿ, ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್‌.ಜಿ.ಕೋಟೆ ಶ್ರೀನಿವಾಸ್‌, ವಿಶ್ವನಾಥ್‌, ವೆಂಕಟೇಶ್‌ ವೆಂಕಟೇಶಪ್ಪ ಮತ್ತು ಸ್ಥಳೀಯ ಮಹಿಳೆಯರು ಕುಡಿಯುವ ನೀರಿಗಾಗಿ ಪ್ರತಿಭಟನೆ ನಡೆಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ