ಆ್ಯಪ್ನಗರ

ಪಿಡಿಒ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಮನವಿ

ತಾಲೂಕಿನ ಗುಟ್ಟಹಳ್ಳಿ ಗ್ರಾಮದಲ್ಲಿಧ್ವಂಸಗೊಳಿಸಿರುವ ಕುಡಿಯುವ ನೀರಿನ ಸಿಸ್ಟನ್‌ ನಿರ್ಮಿಸಿಕೊಡಲು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಮೀನಮೇಷ ಎಣಿಸುತ್ತಿದ್ದು, ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ದಲಿತ ಸಿಂಹ ಸೇನೆಯ ಕಾರ್ಯಕರ್ತರು ತಾಪಂ ಇಒ ಅವರಿಗೆ ಮನವಿ ಸಲ್ಲಿಸಿದರು.

Vijaya Karnataka 23 Aug 2019, 3:17 pm
ಬಂಗಾರಪೇಟೆ: ತಾಲೂಕಿನ ಗುಟ್ಟಹಳ್ಳಿ ಗ್ರಾಮದಲ್ಲಿಧ್ವಂಸಗೊಳಿಸಿರುವ ಕುಡಿಯುವ ನೀರಿನ ಸಿಸ್ಟನ್‌ ನಿರ್ಮಿಸಿಕೊಡಲು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಮೀನಮೇಷ ಎಣಿಸುತ್ತಿದ್ದು, ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ದಲಿತ ಸಿಂಹ ಸೇನೆಯ ಕಾರ್ಯಕರ್ತರು ತಾಪಂ ಇಒ ಅವರಿಗೆ ಮನವಿ ಸಲ್ಲಿಸಿದರು.
Vijaya Karnataka Web take action against pdo
ಪಿಡಿಒ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಮನವಿ


ಗ್ರಾಧಿಮದ ಪ್ರಾಥಮಿಕ ಶಾಲಾ ಪಕ್ಕದಲ್ಲಿ60 ಸಾವಿರ ರೂಪಾಯಿ ವೆಚ್ಚದಲ್ಲಿಕಳೆದ 15 ವರ್ಷದ ಹಿಂದೆ ಕುಡಿಯುವ ನೀರಿನ ಸಿಸ್ಟನ್‌ ನಿರ್ಮಿಸಲಾಗಿತ್ತು. ಈ ಸಿಸ್ಟನ್‌ನಿಂದ ಗ್ರಾಮಸ್ಥರಿಗೆ ಅನುಕೂಲವಾಗಿತ್ತು. ಇತ್ತೀಚೆಗೆ ಗ್ರಾಮದ ನಾಗಾರಾಜ್‌ ಎಂಬುವರು ಏಕಾಏಕಿ ಜೆಸಿಬಿ ಯಂತ್ರದ ಮೂಧಿಲಧಿಕ ಧ್ವಂಸಗೊಳಿಸಿರುವುದರಿಂದ ಕುಡಿಯುವ ನೀರಿಗೆ ತೊಂದರೆಯಾಗಿದೆ. ಈ ಜಾಗವನ್ನು ಒತ್ತುವರಿ ಮಾಡಿಕೊಂಡು ಮನೆಯ ಕಾಂಪೌಂಡ್‌ ನಿರ್ಮಿಸಿಕೊಳ್ಳಲು ಬಳಸಿಕೊಂಡಿದ್ದಾರೆ ಎಂದು ಆರೋಪಿಸಿದಧಿರು.

ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಜರುಗಿಸಲು ವಿಫಲರಾಗಿದ್ದಾರೆ. ಕೂಡಲೆ ಅಧಿಧಿಕಾರಿ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಮನವಿ ಸ್ವೀಕರಿಸಿದ ಇಒ ವೆಂಕಟೇಶಪ್ಪ ಮಾತನಾಡಿ, ಈ ಸಂಬಂಧ ಪಿಡಿಒ ಅಧಿವಧಿರಿಧಿಗೆ ಸೂಚನೆ ನೀಡಿ ಕ್ರಮ ಕೈಗೊಳ್ಳುವುದಾಗಿ ತಿಧಿಳಿಧಿಸಿಧಿದರು.

ಸೇನೆಯ ತಾಲೂಕು ಅಧ್ಯಕ್ಷ ಗುಟ್ಟಹಳ್ಳಿ ಶ್ರೀನಿವಾಸ್‌, ಅಯ್ಯಪ್ಪ, ಮುನಿಸ್ವಾಮಿ, ಬಾವರಹಳ್ಳಿ ಮುನಿಯಪ್ಪ, ರಮೇಶ್‌ ಗೌಡ, ಎಂ.ಎನ್‌. ಭಾರದ್ವಾಜ್‌, ನಾಗೇಶ್‌, ಬೈರೇಶ್‌, ವಿಜಿ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ