ಆ್ಯಪ್ನಗರ

ಬಂಗಾರಪೇಟೆಯ ಕಾಳಮ್ಮಗುಡಿ ಅರಣ್ಯ ಪ್ರದೇಶದಲ್ಲಿ ಬೀಡುಬಿಟ್ಟ ಕಾಡಾನೆಗಳ ಹಿಂಡು

ತಾಲೂಕಿನ ಗಡಿಭಾಗದ ಕಾಳಮ್ಮಗುಡಿ ಅರಣ್ಯ ಪ್ರದೇಶದಲ್ಲಿ ಕಾಡಾನೆಗಳ ಹಿಂಡು ಬೀಡುಬಿಟ್ಟು ಸುತ್ತಮುತ್ತಲಿನ ಗ್ರಾಮಗಳ ರೈತರ ಜಮೀನಿಗೆ ನುಗ್ಗಿ ಅಪಾರ ಪ್ರಮಾಣದ ಬೆಳೆಗಳನ್ನು ನಾಶ ಮಾಡುತ್ತಿವೆ.

Vijaya Karnataka 29 Apr 2019, 5:00 am
ಬಂಗಾರಪೇಟೆ : ತಾಲೂಕಿನ ಗಡಿಭಾಗದ ಕಾಳಮ್ಮಗುಡಿ ಅರಣ್ಯ ಪ್ರದೇಶದಲ್ಲಿ ಕಾಡಾನೆಗಳ ಹಿಂಡು ಬೀಡುಬಿಟ್ಟು ಸುತ್ತಮುತ್ತಲಿನ ಗ್ರಾಮಗಳ ರೈತರ ಜಮೀನಿಗೆ ನುಗ್ಗಿ ಅಪಾರ ಪ್ರಮಾಣದ ಬೆಳೆಗಳನ್ನು ನಾಶ ಮಾಡುತ್ತಿವೆ.
Vijaya Karnataka Web the flock of wild elephants parked in the forest area of kalamagudi in bangarpet
ಬಂಗಾರಪೇಟೆಯ ಕಾಳಮ್ಮಗುಡಿ ಅರಣ್ಯ ಪ್ರದೇಶದಲ್ಲಿ ಬೀಡುಬಿಟ್ಟ ಕಾಡಾನೆಗಳ ಹಿಂಡು


ನಾಲ್ಕು ದಿನಗಳಿಂದ ಗಡಿಭಾಗದ ಯರ್ರಗೋಳ್‌ ಅರಣ್ಯಪ್ರದೇಶ, ಮುರಗನ್‌ ಅರಣ್ಯ ಪ್ರದೇಶದಲ್ಲಿ ಸುತ್ತಾಡುತ್ತಾ ಕಳೆದ ರಾತ್ರಿ ಕಾಳಮ್ಮಗುಡಿ ಅರಣ್ಯ ಪ್ರದೇಶದಲ್ಲಿ ಬೀಡು ಬಿಟ್ಟಿರುವ 12 ಕಾಡಾನೆಗಳ ಹಿಂಡು ರಾತ್ರಿ ವೇಳೆ ಕಾಡಂಚಿನ ತೋಟ, ಗದ್ದೆಗಳಿಗೆ ಲಗ್ಗೆಯಿಡುತ್ತಿವೆ.

ದೋಣಿಮೊಡಗು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಾಕರಸನಹಳ್ಳಿ ಗ್ರಾಮದ ರಾಜಪ್ಪ ಎಂಬುವರ ಒಂದು ಎಕರೆ ಟೊಮೇಟೊ ತೋಟ ತುಳಿದು ಸಂಪೂರ್ಣ ಹಾಳು ಮಾಡಿದೆ. ಟೊಮೇಟೊ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಹೊಂದಿದ್ದು ರೈತ ರಾಜಪ್ಪನಿಗೆ ಏನಿಲ್ಲವೆಂದರೂ 8 ಲಕ್ಷ ಕ್ಕೂ ಹೆಚ್ಚು ನಷ್ಟವಾಗಿದೆ ಎಂದು ರಾಜಪ್ಪ ಅಳಲು ತೋಡಿಕೊಂಡರು.

ಕಾಳಮ್ಮಗುಡಿ ಅರಣ್ಯ ಪ್ರದೇಶದ ಪಕ್ಕದ ನನ್ನೂರು ನಾಗರಾಜ್‌ ಎಂಬುವರ ಮಾವಿನ ಫಸಲಿರುವ ಮರಗಳನ್ನು ಮುರಿದು ಕೆಡವಿ ನೆಲಕ್ಕೆ ಉರುಳಿಸಿದೆ. ಕೆಲ ಮರಗಳನ್ನು ಬುಡಸಮೇತ ಕಿತ್ತು ಎಸೆದರೆ, ಕೆಲ ಮರಗಳ ಕೊಂಬೆಗಳನ್ನು ಮುರಿದಿವೆ. ಅರ್ಥ ಎಕರೆ ರಾಗಿ ತೋಟವನ್ನು ತುಳಿದು ನಾಶ ಮಾಡಿದೆ ಎಂದು ನಾಗರಾಜ್‌ ದೂರಿದ್ದಾರೆ.

ನಷ್ಟಕ್ಕೆ ತಕ್ಕ ಪರಿಹಾರ ನೀಡಿ: ಕಾಡಾನೆಗಳ ದಾಳಿಯಿಂದ ಒಂದು ಲಕ್ಷ ನಷ್ಟವಾದರೆ ಅರಣ್ಯ ಇಲಾಖೆ ಏಳೆಂಟು ಸಾವಿರ ಪರಿಹಾರ ನೀಡುತ್ತದೆ. ಇದರಿಂದ ರೈತರಿಗೆ ಯಾವುದೇ ಅನುಕೂಲ ಆಗುತ್ತಿಲ್ಲ. ನಷ್ಟಕ್ಕೆ ತಕ್ಕಂತೆ ಪರಿಹಾರ ನೀಡಬೇಕು ಎನ್ನುವ ರೈತರ ಆಗ್ರಹದ ನಡುವೆಯೂ ಕಾಡಾನೆಗಳ ಹಾವಳಿಯನ್ನು ತಪ್ಪಿಸಲು ಇದುವರೆಗೂ ಅರಣ್ಯ ಇಲಾಖೆ ಮುಂದಾಗದೇ ಇರುವುದು ಈ ಭಾಗದ ರೈತರ ಆಕ್ರೋಶಕ್ಕೆ ಗುರಿಯಾಗಿದೆ.

16 ಜೀವ ಬಲಿ:
ಏಳೆಂಟು ವರ್ಷಗಳಿಂದ ಕಾಡಾನೆಗಳ ಉಪಟಳದಿಂದ ಇದುವರೆಗೂ 16ಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದಾರೆ. ಬೆಳೆ ಹಾನಿಗೆಂದೇ ಇದುವರೆಗೂ ಸರಕಾರ 20 ಕೋಟಿಗೂ ಹೆಚ್ಚು ಹಣ ರೈತರಿಗೆ ಪಾವತಿಸಿದೆ. ಆದರೆ ಸರಕಾ ಮತ್ತು ಅರಣ್ಯ ಇಲಾಖೆ ಇದನ್ನು ಗಂಭೀರವಾಗಿ ಪರಿಗಣಿಸದೇ ಬರೀ ಪರಿಹಾರ ಕೊಡುವುದಕಷ್ಟೇ ಸಿಮೀತವಾಗಿ ನಂತರ ಘಟನೆಗಳನ್ನು ಮರೆಯುತ್ತಿರುವುದರಿಂದ ಕಾಡಾನೆಗಳ ಹಾವಳಿಯನ್ನು ತಪ್ಪಿಸಲು ಶಾಶ್ವತ ಪರಿಹಾಎ ಏಕೆ ಮಾಡುತ್ತಿಲ್ಲ ಎನ್ನುವುದು ರೈತಾಪಿ ಜನತೆಯ ಪ್ರಶ್ನೆ.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ