ಆ್ಯಪ್ನಗರ

ಶೈಕ್ಷಣಿಕ ಪರಿಕರ ಸದ್ಬಳಕೆ

ಸರಕಾರಿ ಶಾಲೆ ವಿದ್ಯಾರ್ಥಿಗಳು ಸರಕಾರ ನೀಡುವ ಯೋಜನೆಗಳ ಜತೆಗೆ ದಾನಿಗಳು ನೀಡುವ ಶೈಕ್ಷಣಿಕ ಪರಿಕರಗಳನ್ನು ಸಮರ್ಪಕವಾಗಿ ಸದ್ಬಳಕೆ ಮಾಡಿಕೊಂಡು ವಿದ್ಯಾಭ್ಯಾಸದ ಕಡೆಗೆ ಹೆಚ್ಚಿನ ಗಮನ ಹರಿಸಬೇಕು ಎಂದು ಬಿಜೆಪಿ ತಾಲೂಕು ಸದಸ್ಯತ್ವ ಸಮಿತಿ ಸಂಚಾಲಕ ಪುರ ನಾರಾಯಣಸ್ವಾಮಿ ಹೇಳಿದರು.

Vijaya Karnataka 23 Sep 2019, 2:50 pm
ಲಕ್ಕೂರು: ಸರಕಾರಿ ಶಾಲೆ ವಿದ್ಯಾರ್ಥಿಗಳು ಸರಕಾರ ನೀಡುವ ಯೋಜನೆಗಳ ಜತೆಗೆ ದಾನಿಗಳು ನೀಡುವ ಶೈಕ್ಷಣಿಕ ಪರಿಕರಗಳನ್ನು ಸಮರ್ಪಕವಾಗಿ ಸದ್ಬಳಕೆ ಮಾಡಿಕೊಂಡು ವಿದ್ಯಾಭ್ಯಾಸದ ಕಡೆಗೆ ಹೆಚ್ಚಿನ ಗಮನ ಹರಿಸಬೇಕು ಎಂದು ಬಿಜೆಪಿ ತಾಲೂಕು ಸದಸ್ಯತ್ವ ಸಮಿತಿ ಸಂಚಾಲಕ ಪುರ ನಾರಾಯಣಸ್ವಾಮಿ ಹೇಳಿದರು.
Vijaya Karnataka Web utilize the education fecilities
ಶೈಕ್ಷಣಿಕ ಪರಿಕರ ಸದ್ಬಳಕೆ


ಕುಡಿಯನೂರು ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿಪ್ರಧಾನಿ ನರೇಂದ್ರ ಮೋದಿ ಅವರ ಹುಟ್ಟುಹÜಬ್ಬದ ಅಂಗವಾಗಿ ಶಾಲೆಯಲ್ಲಿವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಉಚಿತವಾಗಿ ನೋಟ್‌ ಪುಸ್ತಕ ಹಾಗೂ ಶೈಕ್ಷಣಿಕ ಪರಿಕರಗಳನ್ನು ವಿತರಿಸುವ ಕಾರ್ಯಕ್ರಮ ಕುರಿತು ಮಾತನಾಡಿದರು.

ಸರಕಾರಿ ಶಾಲೆಗಳಲ್ಲಿವ್ಯಾಸಂಗ ಮಾಡುವ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಸರಕಾರ ಪ್ರತಿವರ್ಷ ಕೋಟ್ಯಂತರ ರೂ.ವೆಚ್ಚ ಮಾಡುತ್ತಿದೆ.ಅಲ್ಲದೆ, ದಾನಿಗಳು ಗ್ರಾಮೀಣ ಪ್ರದೇಶದ ಬಡಮಕ್ಕಳ ಅನುಕೂಲಕ್ಕಾಗಿ ಶೈಕ್ಷಣಿಕ ಪರಿಕರಗಳನ್ನು ನೀಡುತ್ತಿರುತ್ತಾರೆ. ಕುಡಿಯನೂರು ಗ್ರಾಮದ ಸರಕಾರಿ ಶಾಲೆಯಲ್ಲಿವ್ಯಾಸಂಗ ಮಾಡುತ್ತಿರುವ ಬಡಮಕ್ಕಳ ಅನುಕೂಲಕ್ಕಾಗಿ ನೋಟ್‌ ಪುಸ್ತಕ ಹಾಗೂ ಶೈಕ್ಷಣಿಕ ಪರಿಕರಗಳನ್ನು ನೀಡುತ್ತಿರುವುದರಿಂದ ಬಡಮಕ್ಕಳಿಗೆ ಹೆಚ್ಚಿನ ಅನುಕೂಲವಾಗುತ್ತಿದೆ. ಈ ನಿಟ್ಟಿನಲ್ಲಿ

ಪ್ರಧಾನಿ ನರೇಂದ್ರ ಮೋದಿ ಅವರ ಹುಟ್ಟುಹÜಬ್ಬದ ಅಂಗವಾಗಿ ವಿದ್ಯಾರ್ಥಿಗಳಿಗೆ ಉಚಿತವಾಗಿ ನೋಟ್‌ ಪುಸ್ತಕ ಹಾಗೂ ಶೈಕ್ಷಣಿಕ ಪರಿಕರಗಳನ್ನು ವಿತರಿಸಲಾಗುತ್ತಿದೆ ಎಂದರು.

ತಾ. ಬಿಜೆಪಿ ಅಧ್ಯಕ್ಷ ಬಿ.ಆರ್‌.ವೆಂಕಟೇಶ್‌ ಮಾತನಾಡಿ, ಸರಕಾರ ಹಲವಾರು ಯೋಜನೆಗಳನ್ನು ಜಾರಿಗೆ ತಂದು ಮಕ್ಕಳ ಶೈಕ್ಷಣಿಕ ಪ್ರಗತಿಗೆ ಶ್ರಮಿಸುತ್ತಿದೆ. ದಾನಿಗಳೂ ಸಹ ಮಕ್ಕಳಿಗೆ ಸಹಕಾರ ನೀಡುತ್ತಿದ್ದಾರೆ. ವಿದ್ಯಾರ್ಥಿಗಳು ಶೈಕ್ಷಣಿಕ ಪರಿಕರಗಳನ್ನು ಸಮರ್ಪಕವಾಗಿ ಸದ್ಬಳಕೆ ಮಾಡಿಕೊಂಡು ಶಿಸ್ತು ಸಂಯಮದಿಂದ ವಿದ್ಯಾಭ್ಯಾಸದ ಕಡೆಗೆ ಹೆಚ್ಚಿನ ಗಮನ ಹರಿಸಿ ಉನ್ನತ ಮಟ್ಟದಲ್ಲಿಪ್ರಗತಿ ಸಾಧಿಸಿ ಒಳ್ಳೆಯ ಉದ್ಯೋಗ ಅಲಂಕರಿಸಿ ಪೋಷಕರ ಆಶಯ ಈಡೇರಿಸುವುದರ ಜತೆಗೆ ಶಾಲೆಗೆ ಹಾಗೂ ಗ್ರಾಮಕ್ಕೆ ಒಳ್ಳೆಯ ಹೆಸರು ತರಬೇಕು ಎಂದರು.

ತಾಲೂಕು ಸದಸ್ಯತ್ವ ಸಮಿತಿ ಉಪ ಸಂಚಾಲಕ ರಾಮಕೃಷ್ಣಗೌಡ, ಮುಖಂಡರಾದ ಸುರೇಶ್‌,ಗೋವಿಂದಸ್ವಾಮಿ, ಮುನಿರಾಜ್‌, ಎಸ್‌ಡಿಎಂಸಿ ಅಧ್ಯಕ್ಷ ಮೋಹನ್‌, ಶಾಲೆಯ ಶಿಕ್ಷಕರು, ಮುಖಂಡರು ಇನ್ನಿತರರು ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ