ಆ್ಯಪ್ನಗರ

ಕೋಲಾರ ಚಿನ್ನದ ಗಣಿ ಪುನಾರಂಭ ಸಾಧ್ಯತೆ ಪರಿಶೀಲನೆ: ಸಚಿವ ಎಚ್‌ ನಾಗೇಶ್‌

ಗಡಿ ಜಿಲ್ಲೆ ಕೋಲಾರದ ಪ್ರತಿ ಗ್ರಾಮದಲ್ಲಿಯೂ ಕನ್ನಡ ಸಾಹಿತ್ಯ ಪರಿಷತ್ತಿನ ಚಟುವಟಿಕೆ ನಡೆಯಬೇಕು. ಈ ನಿಟ್ಟಿನಲ್ಲಿ ಎಲ್ಲ ರೀತಿಯ ಸಹಕಾರ, ನೆರವು ನೀಡಲಾಗುವುದು. ಇದಕ್ಕಾಗಿ ಸಾಹಿತಿಗಳು ಕ್ರಮ ಕೈಗೊಳ್ಳಬೇಕು ಎಂದು ಸಚಿವರು ಹೇಳಿದರು.

Vijaya Karnataka Web 16 Jan 2020, 10:04 pm
ಕೋಲಾರ: ಕೋಲಾರ ಜಿಲ್ಲೆಗೆ ಚಿನ್ನದ ನಾಡು ಎಂಬ ಹೆಸರು ತಂದು ಕೊಟ್ಟಿರುವ ಚಿನ್ನದ ಗಣಿಗಳನ್ನು ಪುನರಾರಂಭಿಸಲು ಇರುವ ಸಾಧ್ಯತೆಗಳ ಕುರಿತಂತೆ ಪರಿಶೀಲಿಸಲು ಜಿಲ್ಲಾಧಿಕಾರಿಗೆ ಸೂಚಿಸುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಎಚ್.ನಾಗೇಶ್ ಹೇಳಿದ್ದಾರೆ.
Vijaya Karnataka Web ಕೆಜಿಎಫ್‌
ಕೆಜಿಎಫ್‌


ಕೋಲಾರದಲ್ಲಿ ಹದಿನೆಂಟನೇ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು. ಚಿನ್ನದ ಗಣಿಗಳಿಂದ ಹೇರಳ ಪ್ರಮಾಣದ ಮಣ್ಣು ತೆಗೆದು ಹೊರ ಹಾಕಲಾಗಿದ್ದು, ಇದರಲ್ಲಿ ಚಿನ್ನದ ಅಂಶವಿದೆಯೇ ಎನ್ನುವ ಬಗ್ಗೆ ಹಾಗೂ ಗಣಿಗಳನ್ನು ಪುನರಾರಂಭಿಸುವ ಸಾಧಕ -ಬಾಧಕ ಪರಿಶೀಲಿಸುವಂತೆ ತಿಳಿಸಲಾಗಿದೆ. ಅವರು ನೀಡುವ ಮಾಹಿತಿಯ ಆಧಾರದ ಮೇಲೆ ಈ ಕುರಿತು ಸರ್ಕಾರದೊಂದಿಗೆ ಪ್ರಸ್ತಾಪಿಸಲಾಗುವುದು ಎಂದು ಅವರು ತಿಳಿಸಿದರು.

ಗಡಿ ಜಿಲ್ಲೆ ಕೋಲಾರದ ಪ್ರತಿ ಗ್ರಾಮದಲ್ಲಿಯೂ ಕನ್ನಡ ಸಾಹಿತ್ಯ ಪರಿಷತ್ತಿನ ಚಟುವಟಿಕೆ ನಡೆಯಬೇಕು. ಮುಂದಿನ ಒಂದು ವರ್ಷದೊಳಗೆ ನಗರಸಭೆಯಿಂದ ಕನ್ನಡ ಸಾಹಿತ್ಯಭವನ ನಿರ್ಮಾಣಕ್ಕೆ ನಿವೇಶನ ಮಂಜೂರು ಮಾಡಿ ಕಾಮಗಾರಿ ಆರಂಭಕ್ಕೆ ಅಗತ್ಯ ನೆರವು ನೀಡಲಾಗುವುದು ಎಂದು ಸಚಿವ ನಾಗೇಶ್‌ ಹೇಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ