ಆ್ಯಪ್ನಗರ

ವೀಲಿಂಗ್‌ಗೆ ಯುವಕ ಬಲಿ

ಸಾರ್ವಜನಿಕರ ವ್ಯಾಪಕ ದೂರುಗಳ ನಡುವೆಯೂ ಕ್ರಮ ಕೈಗೊಳ್ಳದ ಪೊಲೀಸರ ನಿರ್ಲಕ್ಷ್ಯದಿಂದ ಯುವಕರು ಮಾಡುತ್ತಿದ್ದ ದ್ವಿಚಕ್ರವಾಹನ ವೀಲಿಂಗ್‌ ಸಂಸ್ಕೃತಿಗೆ ಯುವಕನೊಬ್ಬ ಪಟ್ಟಣದಲ್ಲಿ ಬಲಿಯಾಗಿದ್ದಾನೆ.

Vijaya Karnataka 29 Jun 2019, 3:08 pm
ಬಂಗಾರಪೇಟೆ: ಸಾರ್ವಜನಿಕರ ವ್ಯಾಪಕ ದೂರುಗಳ ನಡುವೆಯೂ ಕ್ರಮ ಕೈಗೊಳ್ಳದ ಪೊಲೀಸರ ನಿರ್ಲಕ್ಷ್ಯದಿಂದ ಯುವಕರು ಮಾಡುತ್ತಿದ್ದ ದ್ವಿಚಕ್ರವಾಹನ ವೀಲಿಂಗ್‌ ಸಂಸ್ಕೃತಿಗೆ ಯುವಕನೊಬ್ಬ ಪಟ್ಟಣದಲ್ಲಿ ಬಲಿಯಾಗಿದ್ದಾನೆ.
Vijaya Karnataka Web youth dies in wheeling
ವೀಲಿಂಗ್‌ಗೆ ಯುವಕ ಬಲಿ


ಪಟ್ಟಣದ ಸಿ ರಹಿಂ ಕಾಂಪೌಂಡ್‌ ನಿವಾಸಿ ತಾಹೀದ್‌(23) ಮೃತ ಯುವಕ.

ಪಟ್ಟಣದ ಹೊರವಲಯದ ಕಾಮಸಮುದ್ರ ರಸ್ತೆಯಲ್ಲಿ ಶುಕ್ರವಾರ ಮದ್ಯಾಹ್ನ 3 ಘಂಟೆಯಲ್ಲಿ ತನ್ನ ದ್ವಿಚಕ್ರವಾಹನದಲ್ಲಿ ವೀಲಿಂಗ್‌ ಮಾಡಲು ತೆರಳಿದ್ದ ತಾಹೀದ್‌ ವಾಹನ ನಿಯಂತ್ರಣ ತಪ್ಪಿ ವಿದ್ಯುತ್‌ ಕಂಬಕ್ಕೆ ಡಿಕ್ಕಿ ಹೊಡೆದಿದ್ದರಿಂದಾಗಿ ತಲೆಗೆ ತೀವ್ರ ಪೆಟ್ಟು ಸ್ಥಳದಲ್ಲಿ ತಾಹೀದ್‌ ಮೃತಪಟ್ಟರೆ ಹಿಂಬದಿ ಸವಾರನೊಬ್ಬ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾನೆ.

ಕಳೆದ ಹಲವಾರು ವರ್ಷಗಳಿಂದ ಪಟ್ಟಣ ಸೇರಿದಂತೆ ತಾಲೂಕಿನ ಪ್ರಮುಖ ಹಳ್ಳಿಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳಲ್ಲಿ ಯುವಕರಿಂದ ದ್ವಿಚಕ್ರವಾಹನಗಳಲ್ಲಿ ವೀಲಿಂಗ್‌ ಮಾಡುವುದು ಸರ್ವೆ ಸಾಮಾನ್ಯ,ಸಾರ್ವಜನಿಕರ ವ್ಯಾಪಕ ದೂರುಗಳು ಬಂದರೂ ಪೊಲೀಸರು ಯಾವುದೇ ಕ್ರಮಕ್ಕೆ ಮುಂದಾಗುವುದಿಲ್ಲ. ಕಳೆದ ಡಿಸೆಂಬರ್‌ನಲ್ಲಿ ದ್ವಿಚಕ್ರ ವಾಹನ ಅಪಘಾತವಾಗಿ ಯುವಕನೊಬ್ಬ ಸಜೀವವಾಗಿ ದಹನಗೊಂಡ ಸಂದರ್ಭದಲ್ಲೂ ಸಾರ್ವಜನಿಕರು ವೀಲಿಂಗ್‌ ಸಂಸ್ಕೃತಿಗೆ ಕಡಿವಾಣ ಹಾಕುವಂತೆ ಒತ್ತಾಯಿಸಿದ್ದರು. ಆಗಲೂ ಪೊಲೀಸರು ನಿರ್ಲಕ್ಷ ್ಯವಹಿಸಿದ್ದರು. ಯಾವುದೇ ಕಾನೂನಿನ ಭಯವಿಲ್ಲದ ಯುವಕರು ದ್ವಿಚಕ್ರವಾಹನಗಳಲ್ಲಿ ವೀಲಿಂಗ್‌ ಮಾಡುವುದನ್ನೇ ಹವ್ಯಾಸ ಮಾಡಿಕೊಂಡಿರುವುದರಿಂದ ಮತ್ತೊಬ್ಬ ಯುವಕ ಬಲಿಯಾಗಿದ್ದಾನೆ. ಈಗಲಾದರೂ ಪೊಲೀಸರು ವೀಲಿಂಗ್‌ ಸಂಸ್ಕೃತಿಗೆ ಕಡಿವಾಣ ಹಾಕುವರೇ?

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ