ಆ್ಯಪ್ನಗರ

ಮನೆ ನಿರ್ಮಿಸಿಕೊಳ್ಳದವರಿಗೆ ನೋಟಿಸ್

ಸಮೀಪದ ಹಟ್ಟಿ ಗ್ರಾ.ಪಂ. ಪಿಡಿಒ ಬಸವರಡ್ಡಿ ತವದಿ ಅವರು ಮುರ್ಲಾಪುರ ಹಾಗೂ ಘಟ್ಟಿರಡ್ಡಿಹಾಳ ಗ್ರಾಮಕ್ಕೆ ಭೇಟಿ ನೀಡಿ ನಾನಾ ಯೋಜನೆಗಳಡಿ ಇನ್ನೂ ಮನೆ ನಿರ್ಮಿಸಿಕೊಳ್ಳದ ಫಲಾನುಭವಿಗಳಿಗೆ ಗುರುವಾರ ನೋಟಿಸ್ ಜಾರಿ ಮಾಡಿದರು. ಬಳಿಕ ಮಾತನಾಡಿ,

ವಿಕ ಸುದ್ದಿಲೋಕ 27 Feb 2016, 7:35 am
ಅಳವಂಡಿ; ಸಮೀಪದ ಹಟ್ಟಿ ಗ್ರಾ.ಪಂ. ಪಿಡಿಒ ಬಸವರಡ್ಡಿ ತವದಿ ಅವರು ಮುರ್ಲಾಪುರ ಹಾಗೂ ಘಟ್ಟಿರಡ್ಡಿಹಾಳ ಗ್ರಾಮಕ್ಕೆ ಭೇಟಿ ನೀಡಿ ನಾನಾ ಯೋಜನೆಗಳಡಿ ಇನ್ನೂ ಮನೆ ನಿರ್ಮಿಸಿಕೊಳ್ಳದ ಫಲಾನುಭವಿಗಳಿಗೆ ಗುರುವಾರ ನೋಟಿಸ್ ಜಾರಿ ಮಾಡಿದರು. ಬಳಿಕ ಮಾತನಾಡಿ,
Vijaya Karnataka Web
ಮನೆ ನಿರ್ಮಿಸಿಕೊಳ್ಳದವರಿಗೆ ನೋಟಿಸ್


ವಸತಿ ಯೋಜನೆಯಲ್ಲಿ ಆಯ್ಕೆಗೊಂಡ ಫಲಾನುಭವಿಗಳು ಮನೆಯನ್ನು ನಿಗದಿತ ಸಮಯದಲ್ಲಿ ಪೂರ್ಣ ನಿರ್ಮಿಸಿಕೊಳ್ಳದೇ ಕೇವಲ ತಳಪಾಯ ಹಾಕಿ, ಗೋಡೆ ಹಂತದವರೆಗೆ ನಿರ್ಮಿಸಿಕೊಂಡಿದ್ದಾರೆ. ನೋಟಿಸ್ ಜಾರಿ ಮಾಡಿದ 15 ದಿನದೊಳಗೆ ಈ ಫಲಾನುಭವಿಗಳು ಮನೆ ನಿರ್ಮಿಸಿಕೊಳ್ಳಬೇಕೆಂದರು. 2010-11 ನೇ ಸಾಲಿನಲ್ಲಿ ಹಾಗೂ ನಂತರದ ವರ್ಷಗಳಲ್ಲಿ ಬಸವ ವಸತಿ ಹಾಗೂ ಇಂದಿರಾ ಆವಾಸ ಯೋಜನೆಗಳಲ್ಲಿ ಮಂಜೂರಾದ ಮನೆಗಳನ್ನು ಪೂರ್ತಿ ನಿರ್ಮಿಸಿಕೊಳ್ಳುವಂತೆ ಸೂಚಿಸಿದರು.

ಅಳವಂಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಾದ ಬೆಳಗಟ್ಟಿ, ಹಟ್ಟಿ, ರಘುನಾಥನಹಳ್ಳಿ, ಹೈದರನಗರ ಗ್ರಾಮಗಳ ಫಲಾನುಭವಿಗಳಿಗೆ ನೋಟಿಸ್ ನೀಡಿದರು. ಗ್ರಾ.ಪಂ. ಸದಸ್ಯರಾದ ವೀರಣ್ಣ ಡಂಬಳ, ಹನುಮಂತ ಗಾಳೇರ, ಶಿವರಡ್ಡಿ ಮೇಗಳಮನಿ ಮತ್ತು ಶರಣಬಸವರಾಜಗೌಡ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ