ಆ್ಯಪ್ನಗರ

‘ಪರಿಶ್ರಮದ ಮೇಲೆ ನಂಬಿಕೆ ಇರಲಿ’

ಒಂದು ಕಾಯಕದಲ್ಲಿ ಯಶಸ್ಸು ಕಾಣಲು ಪರಿಶ್ರಮದ ಮೇಲೆ ನಂಬಿಕೆ ಇರಬೇಕು ಎಂದು ಗ್ಲೋಬಲ್ ವೇ ಆಫ್ ಲೈಫ್ ಮೆಡಿಟೇಷನ್ ಸೆಂಟರ್‌ನ ಬೌದ್ಧಬಿಕ್ಕು ಭಂತೆ ಮಾತಾ ಮೈತ್ರಿ ಹೇಳಿದರು.

ವಿಕ ಸುದ್ದಿಲೋಕ 29 Feb 2016, 6:28 am
ಗಂಗಾವತಿ; ಒಂದು ಕಾಯಕದಲ್ಲಿ ಯಶಸ್ಸು ಕಾಣಲು ಪರಿಶ್ರಮದ ಮೇಲೆ ನಂಬಿಕೆ ಇರಬೇಕು ಎಂದು ಗ್ಲೋಬಲ್ ವೇ ಆಫ್ ಲೈಫ್ ಮೆಡಿಟೇಷನ್ ಸೆಂಟರ್‌ನ ಬೌದ್ಧಬಿಕ್ಕು ಭಂತೆ ಮಾತಾ ಮೈತ್ರಿ ಹೇಳಿದರು.
Vijaya Karnataka Web
‘ಪರಿಶ್ರಮದ ಮೇಲೆ ನಂಬಿಕೆ ಇರಲಿ’


ನಗರದ 20ನೇ ವಾರ್ಡ್‌ನ ಚಲುವಾದಿ ಓಣಿಯಲ್ಲಿ ಭಾನುವಾರ ನಡೆದ ಗೌತಮ ಬುದ್ಧ ಸರ್ಕಲ್, ಬುದ್ಧ ವಿಹಾರ ಟ್ರಸ್ಟ್ ಹಾಗೂ ಕಾರ್ಯಾಲಯ ಉದ್ಘಾಟನಾ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದರು.

ಬುದ್ಧನನ್ನು ವ್ಯಕ್ತಿ ಎಂದು ಭಾವಿಸಬೇಡಿ. ಬುದ್ಧ ಎಂದರೆ ಜ್ಞಾನ ಎಂದು ಅರ್ಥ. ಜ್ಞಾನಕ್ಕೆ ನಾವೆಲ್ಲರೂ ಶರಣಾಗಲೇಬೇಕು. ಪ್ರತಿಯೊಬ್ಬ ಮನುಷ್ಯ ವೈಯಕ್ತಿಕ ಅಜ್ಞಾನದಿಂದ ಜ್ಞಾನದ ಕಡೆ ಬರಬೇಕು. ಬುದ್ಧ ಸಂದೇಶ, ತತ್ತ್ವಗಳನ್ನು ಸರಿಯಾಗಿ ಅರ್ಥ ಮಾಡಿಕೊಂಡರೆ ಸಮಾಜದಲ್ಲಿ ಶಾಂತಿ ನೆಲೆಸುತ್ತದೆ. ಮನುಷ್ಯ ಯಾವಾಗಲೂ ಪ್ರಯೋಗಶೀಲನಾಗಿರಬೇಕು. ಬೇರೆಯವರು ಹೇಳಿದ ಮಾತುಗಳಿಗೆ ತಲೆ ಬಾಗದೇ ವಿಮರ್ಶೆ ಮಾಡುವ ಗುಣವನ್ನು ಬೆಳೆಸಿಕೊಳ್ಳಬೇಕು ಎಂದರು.

ರಾಜ್ಯ ಕೈಮಗ್ಗ ನಿಗಮದ ಅಧ್ಯಕ್ಷ ಮಲ್ಲಿಕಾರ್ಜುನ ನಾಗಪ್ಪ, ನಗರಸಭೆ ಮಾಜಿ ಅಧ್ಯಕ್ಷ ಶಾಮೀದ್ ಮುನಿಯಾರ್, ನಗರಾಭಿವದ್ಧಿ ಪ್ರಾಧಿಕಾರದ ಅಧ್ಯಕ್ಷ ಹನುಮಂತಪ್ಪ ನಾಯಕ, ನಗರಸಭೆ ಸದಸ್ಯ ಹುಸೇನಪ್ಪ ಹಂಚಿನಾಳ, ಕೆಪಿಸಿಸಿ ಸಂಚಾಲಕ ನಂದಾಪುರ ನಾಗರಾಜ, ಸುರೇಶ ಪಿಡಿಒ, ಆರತಿ ತಿಪ್ಪಣ್ಣ, ರಾಮಕಷ್ಣ, ತಿಪ್ಪೇಸ್ವಾಮಿ, ಈಶಪ್ಪ ಇಟಗಿ, ಖಾದರ್‌ಸಾಬ್ ಹುಲ್ಲೂರ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ