ಆ್ಯಪ್ನಗರ

ಕುಗ್ಗಿದ ನುಗ್ಗೆ ದರ

ಮಾರುಕಟ್ಟೆಯಲ್ಲಿ ನುಗ್ಗೇಕಾಯಿ ದರ ಇಳಿಕೆಯಾಗಿರುವುದರಿಂದ ಬೆಳೆಗಾರರು ಕಂಗಾಲಾಗಿದ್ದಾರೆ. ತಾಲೂಕಿನ ಹೆಸರೂರು, ಮೇಣೆದಾಳ, ಚಳಗೇರಾ, ಮಡಿಕೇರಿ ಭಾಗಗಳಲ್ಲಿ ನುಗ್ಗೆಯನ್ನೇ ಪ್ರಮುಖ ಬೆಳೆಯಾಗಿ ಬೆಳೆದಿರುವ ರೈತರಿದ್ದಾರೆ.

ವಿಕ ಸುದ್ದಿಲೋಕ 29 Feb 2016, 6:29 am
ವಿಶೇಷ ವರದಿ, ಕುಷ್ಟಗಿ
Vijaya Karnataka Web
ಕುಗ್ಗಿದ ನುಗ್ಗೆ ದರ


ಮಾರುಕಟ್ಟೆಯಲ್ಲಿ ನುಗ್ಗೇಕಾಯಿ ದರ ಇಳಿಕೆಯಾಗಿರುವುದರಿಂದ ಬೆಳೆಗಾರರು ಕಂಗಾಲಾಗಿದ್ದಾರೆ. ತಾಲೂಕಿನ ಹೆಸರೂರು, ಮೇಣೆದಾಳ, ಚಳಗೇರಾ, ಮಡಿಕೇರಿ ಭಾಗಗಳಲ್ಲಿ ನುಗ್ಗೆಯನ್ನೇ ಪ್ರಮುಖ ಬೆಳೆಯಾಗಿ ಬೆಳೆದಿರುವ ರೈತರಿದ್ದಾರೆ. ಕಳೆದ ವರ್ಷ ವಿಜಯಪುರ ಮತ್ತು ಬೆಳಗಾವಿಗಳಲ್ಲಿ ಪ್ರತಿ ಕ್ವಿಂಟಲ್‌ಗೆ 4ಸಾವಿರ ರೂ.ಗಳಂತೆ ನುಗ್ಗೆ ಮಾರಾಟವಾಗಿತ್ತು. ಬೆಲೆ ಹೆಚ್ಚಳವಾಗಿದ್ದಕ್ಕೆ ತಾಲೂಕು ಸೇರಿ ಜಿಲ್ಲೆಯ ನಾನಾ ಕಡೆ ನುಗ್ಗೆ ಬೆಳೆ ಕ್ಷೇತ್ರವನ್ನು ಹೆಚ್ಚಿಸಲಾಗಿದೆ. ಇದೀಗ ಮಾರುಕಟ್ಟೆಯಲ್ಲಿ ಬೆಲೆ ತೀವ್ರ ಇಳಿಕೆಯಾಗಿದೆ. ವಿಜಯಪುರದಲ್ಲಿ ಬೇಡಿಕೆ ಕುಗ್ಗಿದೆ. ಬೆಳಗಾವಿಯಲ್ಲಿ ಪ್ರತಿ ಕ್ವಿಂಟಲ್‌ಗೆ 2ಸಾವಿರ ರೂ.ಗಳಂತೆ ಮಾರಾಟವಾಗುತ್ತಿದೆ. ಬೆಳೆ ನಿರ್ವಹಣೆ, ಕೂಲಿದರ, ಸಾಗಣೆ ವೆಚ್ಚಗಳನ್ನು ಲೆಕ್ಕ ಹಾಕಿದರೆ ರೈತರಿಗೆ ನುಗ್ಗೆ ಈ ವರ್ಷ ಲಾಭದಾಯಕವಾಗಿಲ್ಲ.

ನಷ್ಟ: ತಾಲೂಕಿನ ಹೆಸರೂರು ಪ್ರದೇಶದಲ್ಲಿ ರೈತ ಮಧುಬಾಬು ಬಳ್ಳಾರಿ 10 ಎಕರೆಯಲ್ಲಿ ನುಗ್ಗೆ ಬೇಸಾಯ ಕೈಗೊಂಡಿದ್ದಾರೆ. 9ತಿಂಗಳು ಹಿಂದೆ ಸಸಿಗಳನ್ನು ನಾಟಿ ಮಾಡಲಾಗಿತ್ತು. ಇದೀಗ ಮೊದಲ ಇಳುವರಿ ಬಂದಿದೆ. ಡಿಸೆಂಬರ್‌ನಿಂದ ನುಗ್ಗೇಕಾಯಿ ಕಟಾವು ಆರಂಭಗೊಂಡಿದೆ. ಜನವರಿ ಮತ್ತು ಫೆಬ್ರವರಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನುಗ್ಗೆ ಬಂದಿದೆ. ಪ್ರತಿ ಎಕರೆಗೆ 20-25ಕ್ವಿಂಟಲ್ ನುಗ್ಗೇಕಾಯಿಯನ್ನು ರೈತ ನಿರೀಕ್ಷಿಸಿದ್ದಾರೆ. ಈ ಸೀಜನ್‌ನಲ್ಲಿ 70-80ಸಾವಿರ ರೂ.ಗಳ ಆದಾಯ ನಿರೀಕ್ಷಿಸಲಾಗಿತ್ತು. ಮಾರುಕಟ್ಟೆಯಲ್ಲಿ ದರ ಇಳಿಕೆಯಾಗಿರುವುದು ರೈತಗೆ ನಷ್ಟ ತಂದಿದೆ.

----

‘ಮರಳು ಮಿಶ್ರಿತ ಕೆಂಪುಮಣ್ಣು ನುಗ್ಗೆ ಬೆಳೆಗೆ ಸೂಕ್ತವಾಗಿದ್ದಕ್ಕೆ ಇಲ್ಲಿ ನುಗ್ಗೆ ಸಸಿಗಳನ್ನು ನಾಟಿ ಮಾಡಲಾಯಿತು. ಉಳಿದ ಬೆಳೆಗಳಿಗೆ ಹೋಲಿಕೆ ಮಾಡಿದರೆ ರೋಗ ಬಾಧೆ ಕಡಿಮೆ. ಆದರೆ ಈ ವರ್ಷ ಮಳೆಗಾಲದಲ್ಲಿ ಬೂದಿರೋಗ ಆವರಿಸಿತ್ತು. ಡ್ರಿಪ್ ಮೂಲಕ ಗಿಡಗಳಿಗೆ ನೀರು ಬಿಡಲಾಗುತ್ತಿದೆ. ಕಳೆದ ವರ್ಷ ಇದ್ದ ಬೆಲೆ ಈ ವರ್ಷವೂ ಮುಂದುವರಿದಿದ್ದರೆ ಹೆಚ್ಚಿನ ಆದಾಯ ಬರುತ್ತಿತ್ತು. ಇದು ವಾರ್ಷಿಕ ಬೆಳೆಯಾಗಿದ್ದು, ಮುಂದಿನ ದಿನಗಳಲ್ಲಿ ಬೆಲೆ ಹೆಚ್ಚಳವಾಗಬಹುದು ಎಂಬ ನಿರೀಕ್ಷೆ ಇದೆ.

ಮಧುಬಾಬು ಬಳ್ಳಾರಿ, ರೈತ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ