ಆ್ಯಪ್ನಗರ

ಅಗ್ರಿಗೋಲ್ಡ್ ಹಗರಣ: ಕ್ರಮಕ್ಕೆ ಆಗ್ರಹಿಸಿ ಪ್ರತಿಭಟನೆ

ಅಗ್ರಿಗೋಲ್ಡ್ ಹಗರಣದ ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳುವಂತೆ ಆಗ್ರಹಿಸಿ ಅಗ್ರಿಗೋಲ್ಡ್ ಗ್ರೂಪ್ ಆಫ್ ಕಂಪನಿ ಗ್ರಾಹಕರ ಹಾಗೂ ಪ್ರತಿನಿಧಿಗಳ ಹಿತರಕ್ಷಣಾ ಸಮಿತಿ ಗಂಗಾವತಿ ಘಟಕದಿಂದ ನಗರದ ಜಿಲ್ಲಾಡಳಿತ ಭವನದ ಎದುರು ಸೋಮವಾರ ಪ್ರತಿಭಟನೆ ನಡೆಯಿತು.

ವಿಕ ಸುದ್ದಿಲೋಕ 1 Mar 2016, 7:28 am
ಕೊಪ್ಪಳ ; ಅಗ್ರಿಗೋಲ್ಡ್ ಹಗರಣದ ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳುವಂತೆ ಆಗ್ರಹಿಸಿ ಅಗ್ರಿಗೋಲ್ಡ್ ಗ್ರೂಪ್ ಆಫ್ ಕಂಪನಿ ಗ್ರಾಹಕರ ಹಾಗೂ ಪ್ರತಿನಿಧಿಗಳ ಹಿತರಕ್ಷಣಾ ಸಮಿತಿ ಗಂಗಾವತಿ ಘಟಕದಿಂದ ನಗರದ ಜಿಲ್ಲಾಡಳಿತ ಭವನದ ಎದುರು ಸೋಮವಾರ ಪ್ರತಿಭಟನೆ ನಡೆಯಿತು.
Vijaya Karnataka Web
ಅಗ್ರಿಗೋಲ್ಡ್ ಹಗರಣ: ಕ್ರಮಕ್ಕೆ ಆಗ್ರಹಿಸಿ ಪ್ರತಿಭಟನೆ


ಆಂಧ್ರ ಮೂಲದ ಅಗ್ರಿಗೋಲ್ಡ್ ಗ್ರೂಪ್ ಆಫ್ ಕಂಪನಿಯು ಜನರಿಂದ ಸಂಗ್ರಹಿಸಿದ ಹಣ ವಾಪಸ್ ಕೊಟ್ಟಿಲ್ಲ. ಸುಮಾರು 700 ಕೋಟಿ ರೂ. ಚೆಕ್ ಬೌನ್ಸ್ ಆದ ಹಿನ್ನೆಲೆಯಲ್ಲಿ ಸಿಐಡಿಗೆ ದೂರು ನೀಡಿದ್ದರಿಂದ, ತನಿಖೆ ನಡೆಸಿ ಆಂಧ್ರ ಸರಕಾರಕ್ಕೆ ವರದಿ ಒಪ್ಪಿಸಲಾಗಿತ್ತು. ಇದರ ಬೆನ್ನಲ್ಲೇ ಸೆಕ್ಯುರಿಟಿ ಎಕ್ಸ್‌ಚೇಂಜ್ ಬೋರ್ಡ್ ಆಫ್ ಇಂಡಿಯಾ, ಅಗ್ರಿಗೋಲ್ಡ್ ಕಂಪನಿಗೆ ಯಾವುದೇ ಆಸ್ತಿ ಮಾರಾಟ ಮಾಡದಂತೆ ಹಾಗೂ ಬ್ಯಾಂಕ್ ವ್ಯವಹಾರ ಮಾಡದಂತೆ ನಿಷೇಧಿಸಿದೆ. ತೆಲಂಗಾಣ, ಕರ್ನಾಟಕ ಮತ್ತು ಒಡಿಶಾ ರಾಜ್ಯಗಳಲ್ಲಿ ಸಿಐಡಿ, ಸುಮಾರು 3,047 ಎಕರೆ ಭೂಮಿ ಜಪ್ತಿ ಮಾಡಿ ಆಂಧ್ರ ಸರಕಾರಕ್ಕೆ ಒಪ್ಪಿಸಿದೆ. ರಾಜ್ಯದ 45 ಶಾಖೆಗಳಿವೆ ಸುಮಾರು 20 ಲಕ್ಷ ನಿರುದ್ಯೋಗಿಗಳು, ಏಜೆಂಟರು ಕೆಲಸ ನಿರ್ವಹಿಸುತ್ತಿದ್ದಾರೆ. ಕೂಡಲೇ ಸರಕಾರ ಹಗರಣದ ತಪ್ಪಿತಸ್ಥರಿಗೆ ಶಿಕ್ಷೆ ನೀಡಿ, ಗ್ರಾಹಕರ ಹಣ ಹಿಂದಿರುಗಿಸಬೇಕು ಎಂದು ಒತ್ತಾಯಿಸಿದರು.

ನೂರಾರು ಗ್ರಾಹಕರು ಹಾಗೂ ಪ್ರತಿನಿಧಿಗಳು ಭಾಗವಹಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ