ಆ್ಯಪ್ನಗರ

‘ಶೀಘ್ರ ಹಾಲು ಸಂಸ್ಕರಣಾ ಘಟಕ ಆರಂಭ’

ಬೂದಗುಂಪಾ ಕ್ರಾಸ್ ಬಳಿ ಕೆಲವೇ ತಿಂಗಳಲ್ಲಿ 60 ಲಕ್ಷ ಲೀಟರ್ ಸಾಮರ್ಥ್ಯದ ಹಾಲು ಸಂಸ್ಕರಣಾ ಘಟಕ ಆರಂಭಿಸಲಾಗುವುದು ಎಂದು ಸಚಿವ ಶಿವರಾಜ ತಂಗಡಗಿ ಹೇಳಿದರು.

ವಿಕ ಸುದ್ದಿಲೋಕ 16 Mar 2016, 7:01 am
ಕಾರಟಗಿ; ಬೂದಗುಂಪಾ ಕ್ರಾಸ್ ಬಳಿ ಕೆಲವೇ ತಿಂಗಳಲ್ಲಿ 60 ಲಕ್ಷ ಲೀಟರ್ ಸಾಮರ್ಥ್ಯದ ಹಾಲು ಸಂಸ್ಕರಣಾ ಘಟಕ ಆರಂಭಿಸಲಾಗುವುದು ಎಂದು ಸಚಿವ ಶಿವರಾಜ ತಂಗಡಗಿ ಹೇಳಿದರು.
Vijaya Karnataka Web
‘ಶೀಘ್ರ ಹಾಲು ಸಂಸ್ಕರಣಾ ಘಟಕ ಆರಂಭ’


ಸಮೀಪದ ಬಸವಣ್ಣಕ್ಯಾಂಪ್‌ನ ಹಾಲು ಉತ್ಪಾದಕರ ಸಹಕಾರ ಸಂಘದಿಂದ ಹಮ್ಮಿಕೊಂಡಿದ್ದ 3ಸಾವಿರ ಲೀಟರ್ ಸಾಮರ್ಥ್ಯದ ಬಲ್ಕ್ ಮಿಲ್ಕ್ ಕೂಲರ್ ಘಟಕ ಹಾಗೂ ಶುದ್ಧ ಕುಡಿವ ನೀರಿನ ಘಟಕ ಉದ್ಘಾಟನಾ ಸಮಾರಂಭಕ್ಕೆ ಸೋಮವಾರ ಚಾಲನೆ ನೀಡಿ ಮಾತನಾಡಿದರು.

ಹಾಲು ಉತ್ಪಾದನೆ ಹೆಚ್ಚಾದಷ್ಟು ಅನುಕೂಲವಾಗಲಿದೆ. ಸರಕಾರ ಅಪೌಷ್ಟಿಕತೆ ಮುಕ್ತ ರಾಜ್ಯವನ್ನಾಗಿಸಲು ಮುಂದಾಗಿದ್ದು, ಹೈನುಗಾರಿಕೆಯಿಂದ ಈ ಯೋಜನೆಗೆ ಸಹಕಾರಿಯಾಗಲಿದೆ ಎಂದರು.

ಎನ್‌ಡಿಡಿಬಿಯ ರಾಷ್ಟ್ರೀಯ ಹೈನು ಯೋಜನೆ ಹಾಗೂ ರಾಬಕೊ ಹಾಲು ಒಕ್ಕೂಟದಿಂದ 3ಸಾವಿರ ಲೀಟರ್ ಸಾಮರ್ಥ್ಯದ ಮಿಲ್ಕ್ ಕೂಲರ್ ಘಟಕ ಆರಂಭಿಸಲಾಗಿದೆ. ಅಲ್ಲದೇ ಇತ್ತೀಚೆಗೆ ರಾಜ್ಯ ಸರಕಾರ ಪ.ಜಾ. ಮತ್ತು ಪ.ಪಂ.ಗಳಿಗೆ ವಿನಾಯಿತಿ ನೀಡುವ ಮೂಲಕ ಹೈನುಗಾರಿಕೆಗೆ ಪ್ರೋತ್ಸಾಹಿಸಿ ಸ್ವಾವಲಂಬಿ ಜೀವನ ನಡೆಸಲು ಪ್ರೇರಣೆ ನೀಡುತ್ತಿದ್ದು, ರೈತರು ಯೋಜನೆ ಸದುಪಯೋಗ ಪಡೆದುಕೊಳ್ಳಬೇಕು ಎಣದರು.

ಜಿ.ಪಂ.ಸದಸ್ಯರಾದ ವಿಶ್ವನಾಥರೆಡ್ಡಿ ಹೊಸಮನಿ, ಭಾಗ್ಯವತಿ ಮಾಣಿಕ್ ಬೋಲಾ, ಜಿ.ಸ್ವಾತಿ ರಾಮಮೋಹನರಾವ್, ವಿಜಯಲಕ್ಷ್ಮಿ, ತಾ.ಪಂ.ಸದಸ್ಯ ದಾನನಗೌಡ, ಗ್ರಾ.ಪಂ.ಅಧ್ಯಕ್ಷೆ ಯಮನಮ್ಮ, ಉಪಾಧ್ಯಕ್ಷೆ ರೇಣುಕಮ್ಮ, ರಾಬಕೊ ಒಕ್ಕೂಟದ ಅಧ್ಯಕ್ಷ ವೆಂಕನಗೌಡ ಹಿರೇಗೌಡ್ರು, ಉಪಾಧ್ಯಕ್ಷ ಅಮರಗುಂಡಪ್ಪ, ನಿರ್ದೇಶಕರಾದ ಎನ್.ಸತ್ಯನಾರಾಯಣ, ಜಿ.ಸತ್ಯನಾರಾಯಣ, ಬಿ.ಸೂರ್ಯನಾರಾಯಣ ಮೂರ್ತಿ, ಜಯತೀರ್ಥರಾವ್ ದೇಸಾಯಿ, ಗುರುಸಿದ್ದನಗೌಡ, ಡಿ.ಕೊಟ್ರೇಶ, ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಜೆ.ಶೇಷಗಿರಿರಾವ್, ಶುದ್ಧ ಕುಡಿವ ನೀರಿನ ಘಟಕದ ದಾನಿ ಎನ್.ಬಸವೇಶ್ವರರಾವ್ ಸೇರಿ ಇತರರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ