ಆ್ಯಪ್ನಗರ

ಮಂಗಳೇಶ್ವರ ರಥೋತ್ಸವ: ಹರಕೆ ತೀರಿಸಿದ ಭಕ್ತರು

ತಾಲೂಕಿನ ಮಂಗಳೂರು ಗ್ರಾಮದ ಆರಾಧ್ಯ ದೈವ ಶ್ರೀ ಮಂಗಳೇಶ್ವರ ಜಾತ್ರೆ ನಿಮಿತ್ತ ಶುಕ್ರವಾರ ಅದ್ಧೂರಿಂದ ರಥೋತ್ಸವ ಜರುಗಿತು.

ವಿಕ ಸುದ್ದಿಲೋಕ 19 Mar 2016, 7:47 am
ಯಲಬುರ್ಗಾ ; ತಾಲೂಕಿನ ಮಂಗಳೂರು ಗ್ರಾಮದ ಆರಾಧ್ಯ ದೈವ ಶ್ರೀ ಮಂಗಳೇಶ್ವರ ಜಾತ್ರೆ ನಿಮಿತ್ತ ಶುಕ್ರವಾರ ಅದ್ಧೂರಿಂದ ರಥೋತ್ಸವ ಜರುಗಿತು.
Vijaya Karnataka Web
ಮಂಗಳೇಶ್ವರ ರಥೋತ್ಸವ: ಹರಕೆ ತೀರಿಸಿದ ಭಕ್ತರು


ಶ್ರೀ ಮಂಗಳೇಶನ ಮೂರ್ತಿಗೆ ಅಭಿಷೇಕ, ಪೂಜೆ ಸಲ್ಲಿಸಲಾಯಿತು. ಭಕ್ತರು ದೀಡ್ ನಮಸ್ಕಾರದ ಮೂಲಕ ಹರಕೆ ತೀರಿಸಿದರು. ಬೇವೂರು, ಕುದರಿಮೋತಿ, ರ‌್ಯಾವಣಿಕಿ, ಹಿರೇಬಿಡನಾಳ,ಮುತ್ತಾಳ,ಶಿರೂರು,ನೆಲಜೇರಿ,ವಟಪರ್ವಿ,ಚಂಡಿನಾಳ,ಬೈರನಾಯಕನಹಳ್ಳಿ, ಕದ್ರಳ್ಳಿ, ಕಕ್ಕಿಹಳ್ಳಿಯಿಂದ ಭಕ್ತರು ಆಗಮಿಸಿ ಸ್ವಾಮಿಯ ದರ್ಶನ ಪಡೆದರು. ಭಕ್ತರಿಗೆ ಮಹಾ ಪ್ರಸಾದ ಏರ್ಪಡಿಸಲಾಗಿತ್ತು. ಸಂಜೆ ಎಳೆದ ರಥೋತ್ಸವದಲ್ಲಿ ಭಕ್ತರು ಹೂ,ಹಣ್ಣು ಮಂಡಾಳು, ಉತ್ತತ್ತಿ ಸಮರ್ಪಿಸಿ ಭಕ್ತಿ ಭಾವ ಮೆರೆದರು. ರಥೋತ್ಸವಕ್ಕೆ ಹಿರೇಮಠದ ಶ್ರೀಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ಚಾಲನೆ ನೀಡಿದರು. ಜಿ.ಪಂ.ಸದಸ್ಯೆ ಪ್ರೇಮಾ ಈರಪ್ಪ ಕುಡಗುಂಟಿ, ತಾ.ಪಂ.ಸದಸ್ಯ ವಿಶ್ವನಾಥ ಮರಿಬಸಪ್ಪನವರ್, ಗ್ರಾ.ಪಂ.ಅಧ್ಯಕ್ಷ ಶೋಭಾ ನಿಂಗಾಪುರ, ಉಪಾಧ್ಯಕ್ಷೆ ಲಕ್ಷವ್ವ ಅಳವಂಡಿ, ಜಿ.ಪಂ.ಮಾಜಿ ಸದಸ್ಯ ಅಶೋಕ ತೋಟದ್,ತಾ.ಪಂ.ಮಾಜಿ ಸದಸ್ಯ ಈರಣ್ಣ ಹಳ್ಳಿಕೇರಿ,ಮುಖಂಡರಾದ ಕೊಟ್ರಪ್ಪ ಮುತ್ತಾಳ,ಎಂ.ಎ.ದೇಸಾಯಿ,ಗುರುರಾಜ ದೇಸಾಯಿ,ಶಿವಪುತ್ರಪ್ಪ,ಶೇಖರಗೌಡ,ಬಸವಂತಪ್ಪ ,ವಿರೂಪಾಕ್ಷಪ್ಪ,ಗ್ರಾ.ಪಂ.ಸದಸ್ಯರು ಇತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ