ಆ್ಯಪ್ನಗರ

ಸುರಿದ ರೋಹಿಣಿ: ನಡುಗಡ್ಡೆಯಾದ ಬಳೂಟಗಿ

ಕುಷ್ಟಗಿ ತಾಲೂಕಿನಲ್ಲಿ ಗುರುವಾರ ಮುಂಜಾವು ರೋಹಿಣಿ ಮಳೆ ಉತ್ತಮವಾಗಿ ಸುರಿದಿದ್ದು, ಹಳ್ಳಕೊಳ್ಳಗಳು ತುಂಬಿ ಹರಿದಿವೆ. ಹಳ್ಳದ ಬಳಿಯ ಬಳೂಟಗಿ ಗ್ರಾಮ ನಡುಗಡ್ಡೆಯಾಗಿ, 8 ತಾಸುಗಳವರೆಗೆ ಸಂಪರ್ಕ ಕಡಿತಕಳೆದುಕೊಂಡಿತ್ತು.

ವಿಕ ಸುದ್ದಿಲೋಕ 3 Jun 2016, 7:20 am
ಮುದೇನೂರು/ಕುಷ್ಟಗಿ (ಕೊಪ್ಪಳ); ಕುಷ್ಟಗಿ ತಾಲೂಕಿನಲ್ಲಿ ಗುರುವಾರ ಮುಂಜಾವು ರೋಹಿಣಿ ಮಳೆ ಉತ್ತಮವಾಗಿ ಸುರಿದಿದ್ದು, ಹಳ್ಳಕೊಳ್ಳಗಳು ತುಂಬಿ ಹರಿದಿವೆ. ಹಳ್ಳದ ಬಳಿಯ ಬಳೂಟಗಿ ಗ್ರಾಮ ನಡುಗಡ್ಡೆಯಾಗಿ, 8 ತಾಸುಗಳವರೆಗೆ ಸಂಪರ್ಕ ಕಡಿತಕಳೆದುಕೊಂಡಿತ್ತು.
Vijaya Karnataka Web
ಸುರಿದ ರೋಹಿಣಿ: ನಡುಗಡ್ಡೆಯಾದ ಬಳೂಟಗಿ


ಬಳೂಟಗಿ ಹಳ್ಳ ದಾಟುವಾಗ ಕಾಲುಜಾರಿ ಬಿದ್ದ ಮಹಿಬೂಬ್‌ಸಾಬ್ (19), ಹಳ್ಳದಲ್ಲಿ 2 ಕಿ.ಮೀ. ದೂರದವರೆಗೆ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದ. ನಂತರ ಪವಾಡಸದೃಶವಾಗಿ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಈ ಹಳ್ಳಕ್ಕೆ ಸಮೀಪದ ಮರಟಗೇರಾ, ಬಂದಮ್ಮನ ಹಳ್ಳ ದೋಟಿಹಾಳ, ಬಿಜಕಲ್ ಪ್ರದೇಶದಿಂದ ಹರಿದು ಬರುವ ಮಳೆ ನೀರು ಬಳೂಟಗಿ ಹಳ್ಳ ಸೇರುತ್ತದೆ.

ಸಿಡಿಲಿಗೆ ಆಕಳು ಬಲಿ: ಸಂಗನಾಳ ಗ್ರಾಮದಲ್ಲಿ ಬುಧವಾರ ಸಂಜೆ ಸಿಡಿಲಿಗೆ ಹನುಮಂತಪ್ಪ ದನಕಾಯಿ ಅವರಿಗೆ ಸೇರಿದ ಜರ್ಸಿ ಆಕಳು ಮೃತಪಟ್ಟಿದೆ. 50ಸಾವಿರ ರೂ. ನಷ್ಟ ಅಂದಾಜಿಸಲಾಗಿದೆ. ಗ್ರಾಮದ ಪ್ರೌಢಶಾಲೆಯ ಬಿಸಿಯೂಟದ ಕೋಣೆಗೆ ಸಿಡಿಲು ಅಪ್ಪಳಿಸಿದ್ದು, 48ಸಾವಿರ ರೂ.ಗೂ ಹೆಚ್ಚು ಬೆಲೆ ಬಾಳುವ ಸಾಮಗ್ರಿಗಳು ಹಾನಿಗೊಳಗಾಗಿವೆ. ಸಿಡಿಲಿನ ರಭಸಕ್ಕೆ ಶಾಲೆಯ 4 ಕೊಠಡಿಗಳು ಬಿರುಕುಬಿಟ್ಟಿವೆ.

ಹೊಸಪೇಟೆ ವರದಿ: ವಿಶ್ವ ಪರಂಪರೆ ತಾಣ ಹಂಪಿಯಲ್ಲಿ ಗುರುವಾರ ಸುರಿದ ಮಳೆ ತಂಪೆರೆಯಿತು. ತುಂತುರು ಮಳೆಯಲ್ಲೇ ಪ್ರವಾಸಿಗರು ನಾನಾ ಸ್ಮಾರಕಗಳನ್ನು ವೀಕ್ಷಿಸಿದರು.

ರಾಯಚೂರು ವರದಿ: ನಗರ ಸೇರಿ ಜಿಲ್ಲೆಯ ಬಹುತೇಕ ಕಡೆ ಬುಧವಾರ ತಡರಾತ್ರಿಯಿಂದ ಗುರುವಾರ ಬೆಳಗಿನವರೆಗೆ ಉತ್ತಮ ಮಳೆ ಸುರಿದಿದೆ. ಸಿಂಧನೂರು ತಾಲೂಕಿನ ಸಾಲಗುಂದಾದಲ್ಲಿ 54.8ಮಿ.ಮೀ. ಗರಿಷ್ಠ ಮಳೆ ದಾಖಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ