ಆ್ಯಪ್ನಗರ

ಜಲ ಪ್ರಾಧಿಕಾರ ರಚಿಸಿ: ಕಾರಜೋಳ

ಕೇಂದ್ರ ಸರಕಾರ ಜಲ ಪ್ರಾಧಿಕಾರ ರಚಿಸುವ ಮೂಲಕ ಜಲ ವಿವಾದ ಬಗೆಹರಿಸಲು ಕ್ರಮಕೈಗೊಳ್ಳಬೇಕು ಎಂದು ಸಾರ್ವಜನಿಕ ಲೆಕ್ಕಪತ್ರಗಳ ಸದನ ಸಮಿತಿ ಅಧ್ಯಕ್ಷ ಗೋವಿಂದ ಕಾರಜೋಳ ಹೇಳಿದರು.

ವಿಕ ಸುದ್ದಿಲೋಕ 30 Jul 2016, 8:05 am
ಕೊಪ್ಪಳ; ಕೇಂದ್ರ ಸರಕಾರ ಜಲ ಪ್ರಾಧಿಕಾರ ರಚಿಸುವ ಮೂಲಕ ಜಲ ವಿವಾದ ಬಗೆಹರಿಸಲು ಕ್ರಮಕೈಗೊಳ್ಳಬೇಕು ಎಂದು ಸಾರ್ವಜನಿಕ ಲೆಕ್ಕಪತ್ರಗಳ ಸದನ ಸಮಿತಿ ಅಧ್ಯಕ್ಷ ಗೋವಿಂದ ಕಾರಜೋಳ ಹೇಳಿದರು.
Vijaya Karnataka Web
ಜಲ ಪ್ರಾಧಿಕಾರ ರಚಿಸಿ: ಕಾರಜೋಳ


ಇಲ್ಲಿನ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘‘ಮಹದಾಯಿ ನ್ಯಾಯಾಧೀಕರಣದ ಮಧ್ಯಾಂತರ ತೀರ್ಪಿನಿಂದ ರಾಜ್ಯಕ್ಕೆ ಅನ್ಯಾಯವಾಗಿದೆ. ಇದನ್ನು ಪ್ರಶ್ನಿಸಿ, ರಾಜ್ಯ ಸರಕಾರ ಸುಪ್ರೀಂ ಕೋರ್ಟ್ ಮೊರೆಹೋಗಬೇಕು. ಮಹದಾಯಿ ರಾಜ್ಯದಲ್ಲಿ ಹರಿಯುತ್ತಿದ್ದು, ಗೋವಾ ಹಾಗೂ ಮಹಾರಾಷ್ಟ್ರ ರಾಜ್ಯಗಳಿಗೆ ಕುಡಿಯಲು ನೀರು ಕೊಡುವುದಕ್ಕೆ ಯಾವುದೇ ಸಮಸ್ಯೆ ಇಲ್ಲ. ಉಭಯ ಸರಕಾರಗಳು ಧನಾತ್ಮಕವಾಗಿ ಸ್ಪಂದಿಸಬೇಕು. ಜಲ ಪ್ರಾಧಿಕಾರ ರಚಿಸಿದರೆ, ಕುಡಿಯುವ ನೀರಿಗೆ ಸಂಬಂಧಿಸಿದ ವಿಷಯದಲ್ಲಿ ಶಾಸನ ಬದ್ಧ ಅಧಿಕಾರ ಹೊಂದಲು ಸಾಧ್ಯವಾಗಲಿದೆ’’ ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ