ಆ್ಯಪ್ನಗರ

ಶಿಸ್ತು ಉಲ್ಲಂಘನೆ: ಪೇದೆ ಅಮಾನತು

ಇಲಾಖೆಯ ಶಿಸ್ತು ಉಲ್ಲಂಘನೆ ಆರೋಪ ಆಧರಿಸಿ, ಇಲ್ಲಿನ ಟ್ರಾಫಿಕ್ ಪೊಲೀಸ್ ಪೇದೆ ಕರಿಯಪ್ಪ ಲಕ್ಷ್ಮಣಗೌಡ ಅವರನ್ನು ಎಸ್ಪಿ ಡಾ.ಕೆ.ತ್ಯಾಗರಾಜನ್, ಶನಿವಾರ ತಡರಾತ್ರಿ ಅಮಾನತುಗೊಳಿಸಿದ್ದಾರೆ.

ವಿಕ ಸುದ್ದಿಲೋಕ 24 Oct 2016, 7:21 am
ಗಂಗಾವತಿ: ಇಲಾಖೆಯ ಶಿಸ್ತು ಉಲ್ಲಂಘನೆ ಆರೋಪ ಆಧರಿಸಿ, ಇಲ್ಲಿನ ಟ್ರಾಫಿಕ್ ಪೊಲೀಸ್ ಪೇದೆ ಕರಿಯಪ್ಪ ಲಕ್ಷ್ಮಣಗೌಡ ಅವರನ್ನು ಎಸ್ಪಿ ಡಾ.ಕೆ.ತ್ಯಾಗರಾಜನ್, ಶನಿವಾರ ತಡರಾತ್ರಿ ಅಮಾನತುಗೊಳಿಸಿದ್ದಾರೆ.
Vijaya Karnataka Web
ಶಿಸ್ತು ಉಲ್ಲಂಘನೆ: ಪೇದೆ ಅಮಾನತು


ಈ ಪೇದೆ, ಪೊಲೀಸ್ ಇಲಾಖೆ ಅಧಿಕಾರಿಗಳು ಮತ್ತು ಪೊಲೀಸ್ ಪೇದೆಗಳಿರುವ ವ್ಯಾಟ್ಸ್ ಆ್ಯಪ್ ಗ್ರೂಪ್‌ಗೆ ಅ.21ರಂದು ಸಂದೇಶ ಕಳುಹಿಸಿದ್ದರು. ‘‘ಪೊಲೀಸರ ವೇತನ ಪರಿಷ್ಕರಣೆಗೆ ಮೀನಮೇಷ ಎಣಿಸುತ್ತಿರುವ ರಾಜ್ಯ ಸರಕಾರದ ನಡೆಯಿಂದ ಮನನೊಂದ ಪೊಲೀಸ್ ಸಿಬ್ಬಂದಿ, ನ.14ರಂದು ಸಾಮೂಹಿಕ ರಜೆ ಹಾಕಲು ದೃಢ ನಿರ್ಧಾರಮಾಡಿದ್ದಾರೆ’’ ಎಂಬ ಸಂದೇಶವನ್ನು ಪೋಸ್ಟ್‌ಮಾಡಿದ್ದರು.

ಪೇದೆಯನ್ನು ಕಚೇರಿಗೆ ಕರೆಯಿಸಿಕೊಂಡ ಎಸ್ಪಿ ಡಾ.ಕೆ.ತ್ಯಾಗರಾಜನ್ ಅವರು ಸುದೀಘ್ರ ವಿಚಾರಣೆ ನಡೆಸಿದ್ದರು. ‘‘ಶಿಸ್ತಿನ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಟ್ರಾಫಿಕ್ ಪೊಲೀಸ್ ಪೇದೆ, ಮುಷ್ಕರ, ಹೋರಾಟಕ್ಕೆ ಇತರ ಸಿಬ್ಬಂದಿಗೆ ಪ್ರಚೋದಿಸಿದ್ದಾರೆ. ಕಾನೂನು ಸುವ್ಯವಸ್ಥೆ ಹಾಳುಮಾಡುವ ಯೋಚನೆ ಜತೆಗೆ ಇಲಾಖೆಯ ಗೌರವಕ್ಕೆ ಧಕ್ಕೆ ತಂದ ಕಾರಣದಿಂದ ಪೇದೆಯನ್ನು ಅಮಾನತು ಮಾಡಲಾಗಿದೆ’’ ಎಂದು ಆದೇಶದಲ್ಲಿ ಎಸ್ಪಿ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ