ಆ್ಯಪ್ನಗರ

ಪೇದೆ ಮೇಲೆ ಹಲ್ಲೆ ಆರೋಪ: ಇಬ್ಬರ ಬಂಧನ

ಫೈನಾನ್ಸ್ ಕಂಪನಿ ವಶಪಡಿಸಿಕೊಂಡ ತಮ್ಮ ಟ್ರ್ಯಾಕ್ಟರ್ ಅನ್ನು ವಾಪಸ್ ಕೊಡಿಸುವಂತೆ ಕೋರಿ, ಇಲ್ಲಿನ ಠಾಣೆಗೆ ಸೋಮವಾರ ರಾತ್ರಿ ಭೇಟಿನೀಡಿದ್ದ ವ್ಯಕ್ತಿಗಳಿಬ್ಬರು ತಮ್ಮ ಅಳಲು ಆಲಿಸಿಲ್ಲ ಎಂಬ ನೆಪವೊಡ್ಡಿ ಪೊಲೀಸ್ ಪೇದೆಯ ಮೇಲೆ ಹಲ್ಲೆ ನಡೆಸಿದ್ದಾರೆ.

ವಿಕ ಸುದ್ದಿಲೋಕ 22 Feb 2017, 8:13 am
ತಾವರಗೇರಾ (ಕೊಪ್ಪಳ): ಫೈನಾನ್ಸ್ ಕಂಪನಿ ವಶಪಡಿಸಿಕೊಂಡ ತಮ್ಮ ಟ್ರ್ಯಾಕ್ಟರ್ ಅನ್ನು ವಾಪಸ್ ಕೊಡಿಸುವಂತೆ ಕೋರಿ, ಇಲ್ಲಿನ ಠಾಣೆಗೆ ಸೋಮವಾರ ರಾತ್ರಿ ಭೇಟಿನೀಡಿದ್ದ ವ್ಯಕ್ತಿಗಳಿಬ್ಬರು ತಮ್ಮ ಅಳಲು ಆಲಿಸಿಲ್ಲ ಎಂಬ ನೆಪವೊಡ್ಡಿ ಪೊಲೀಸ್ ಪೇದೆಯ ಮೇಲೆ ಹಲ್ಲೆ ನಡೆಸಿದ್ದಾರೆ.
Vijaya Karnataka Web
ಪೇದೆ ಮೇಲೆ ಹಲ್ಲೆ ಆರೋಪ: ಇಬ್ಬರ ಬಂಧನ


ಮಹೆಬೂಬ್ ನಾಡಗೌಡ ಹಾಗೂ ಅವರ ಸ್ನೇಹಿತ ರಾಜಾನಾಯಕ ಹಲ್ಲೆ ಮಾಡಿದ ಆರೋಪ ಎದುರಿಸುತ್ತಿದ್ದಾರೆ. ಅವರನ್ನು ವಶಕ್ಕೆ ಪಡೆದ ಪೊಲೀಸರು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಫೈನಾನ್ಸ್ ಕಂಪನಿಯಿಂದ ಸಾಲ ಪಡೆದು ಮಹೆಬೂಬ್ ನಾಡಗೌಡ ಅವರು, ಟ್ರ್ಯಾಕ್ಟರ್ ಖರೀದಿಸಿದ್ದರು. ಕಳೆದೆರಡು ವರ್ಷಗಳಿಂದ ಸಾಲದ ಕಂತು ತುಂಬಿರಲಿಲ್ಲ. ಎರಡು ದಿನಗಳ ಹಿಂದೆಯಷ್ಟೇ ಫೈನಾನ್ಸ್ ಕಂಪನಿಯವರು ಟ್ರ್ಯಾಕ್ಟರ್ ಅನ್ನು ತಮ್ಮ ವಶಕ್ಕೆ ಪಡೆದಿದ್ದರು. ತಮ್ಮ ಮೇಲೆ ದೌರ್ಜನ್ಯಮಾಡಿ ಟ್ರ್ಯಾಕ್ಟರ್ ತೆಗೆದುಕೊಂಡು ಹೋಗಿದ್ದು, ತಮಗೆ ನ್ಯಾಯ ಕೊಡಿಸುವಂತೆ ಮಹೆಬೂಬ್ ನಾಡಗೌಡ ಅವರು ತಮ್ಮ ಸ್ನೇಹಿತ ರಾಜಾನಾಯಕ ಜತೆಗೂಡಿ ಸ್ಥಳೀಯ ಠಾಣೆಗೆ ತೆರಳಿ, ಪಿಎಸ್‌ಐ ಅಮರೇಶ ಹುಬ್ಬಳ್ಳಿ ಅವರನ್ನು ಕೋರಿದರು.

ವಾಹನ ಅಪಘಾತ ಪ್ರಕರಣಕ್ಕೆ ಸಂಬಂಧಿಸಿ ಸ್ಥಳಕ್ಕೆ ಭೇಟಿ ನೀಡುವ ಅವಸರದಲ್ಲಿ ಪಿಎಸ್‌ಐ ಹಾಗೂ ಸಿಬ್ಬಂದಿ, ಮಹೆಬೂಬ್ ನಾಡಗೌಡ ಅವರ ಅಳಲು ಕೇಳದೇ ಹೊರನಡೆದರು. ತಮಗೆ ನ್ಯಾಯ ಕೊಡಿಸುವಂತೆ ಅವರು ಪೊಲೀಸರನ್ನು ಅಡ್ಡಗಟ್ಟಿದರು. ಪೊಲೀಸರ ಜತೆ ವಾಗ್ವಾದ ನಡೆಸಿದರು. ನೂಕಾಟದಲ್ಲಿ ಪೇದೆ ಉಮಾಪತಿ ಕುರಿ ಅವರ ಮೇಲೆ ಹಲ್ಲೆ ಮಾಡಿದರು ಎನ್ನಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ವಿಚಾರಣೆ ಮುಂದುವರಿಸಿದ್ದಾರೆ.

‘‘2009ರಲ್ಲಿ ಪ್ರಕರಣವೊಂದಕ್ಕೆ ಸಂಬಂಧಿಸಿ, ರಾಜಾನಾಯಕ ಅವರು, ಕುಷ್ಟಗಿ ಪೊಲೀಸರ ಮೇಲೆ ಹಲ್ಲೆ ಮಾಡಿದ ಆರೋಪ ಎದುರಿಸುತ್ತಿದ್ದಾರೆ’’ ಎಂದು ಪಿಎಸ್‌ಐ ಅಮರೇಶ ಹುಬ್ಬಳ್ಳಿ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ