Please enable javascript.ಶಮನವಾಗದ ಅಗ್ನಿ ಶಾಮಕ ಠಾಣೆ ಸಮಸ್ಯೆ - ಶಮನವಾಗದ ಅಗ್ನಿ ಶಾಮಕ ಠಾಣೆ ಸಮಸ್ಯೆ - Vijay Karnataka

ಶಮನವಾಗದ ಅಗ್ನಿ ಶಾಮಕ ಠಾಣೆ ಸಮಸ್ಯೆ

ವಿಕ ಸುದ್ದಿಲೋಕ 14 Feb 2013, 12:00 pm
Subscribe

ಕನಕಗಿರಿ ರಸ್ತೆಯಲ್ಲಿರುವ ಅಗ್ನಿ ಶಾಮಕ ಠಾಣೆಗೆ ಮೂಲ ಸೌಲಭ್ಯ ಕೊರತೆ ಇದೆ. ಸುತ್ತಮುತ್ತ ಘಟಿಸುವ ಬೆಂಕಿ ನಂದಿಸಲು ಸಿಬ್ಬಂದಿ ಕೊರತೆಯಿದೆ. ಇರುವ ಕಡಿಮೆ ಸಿಬ್ಬಂದಿಗಳೇ ಕಾರ್ಯ ನಿರ್ವಹಿಸಬೇಕಿದೆ. ಸ್ವಲ್ಪ ತಡವಾದರೆ ಅನಾಹುತದ ಪ್ರಮಾಣ ಹೆಚ್ಚಾಗುತ್ತದೆ ಎಂಬ ಆತಂಕ ಇಲ್ಲಿನ ಸಿಬ್ಬಂದಿಯನ್ನು ಕಾಡುತ್ತಿದೆ. ಅಗತ್ಯಕ್ಕೆ ತಕ್ಕ ಸೌಲಭ್ಯಗಳ ಕೊರತೆಯೇ ಇದಕ್ಕೆ ಕಾರಣವಾಗಿದೆ.

ಶಮನವಾಗದ ಅಗ್ನಿ ಶಾಮಕ ಠಾಣೆ ಸಮಸ್ಯೆ
ವಿಶೇಷ ವರದಿ ಗಂಗಾವತಿ

ಕನಕಗಿರಿ ರಸ್ತೆಯಲ್ಲಿರುವ ಅಗ್ನಿ ಶಾಮಕ ಠಾಣೆಗೆ ಮೂಲ ಸೌಲಭ್ಯ ಕೊರತೆ ಇದೆ. ಸುತ್ತಮುತ್ತ ಘಟಿಸುವ ಬೆಂಕಿ ನಂದಿಸಲು ಸಿಬ್ಬಂದಿ ಕೊರತೆಯಿದೆ. ಇರುವ ಕಡಿಮೆ ಸಿಬ್ಬಂದಿಗಳೇ ಕಾರ್ಯ ನಿರ್ವಹಿಸಬೇಕಿದೆ. ಸ್ವಲ್ಪ ತಡವಾದರೆ ಅನಾಹುತದ ಪ್ರಮಾಣ ಹೆಚ್ಚಾಗುತ್ತದೆ ಎಂಬ ಆತಂಕ ಇಲ್ಲಿನ ಸಿಬ್ಬಂದಿಯನ್ನು ಕಾಡುತ್ತಿದೆ. ಅಗತ್ಯಕ್ಕೆ ತಕ್ಕ ಸೌಲಭ್ಯಗಳ ಕೊರತೆಯೇ ಇದಕ್ಕೆ ಕಾರಣವಾಗಿದೆ.


ಸಿಬ್ಬಂದಿ ಕೊರತೆ: ಅಗ್ನಿ ಶಾಮಕ ಠಾಣೆಗೆ 25 ಸಿಬ್ಬಂದಿ ಅಗತ್ಯವಿದೆ. ಆದರೆ ಸದ್ಯ 16 ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಒಬ್ಬ ಅಗ್ನಿಶಾಮಕ ಅಧಿಕಾರಿ, ನಾಲ್ಕು ವಾಹನ ಚಾಲಕರಿದ್ದಾರೆ.

9 ಸಿಬ್ಬಂದಿ ಇದ್ದು, ಇಬ್ಬರು ಪ್ರಮುಖ ಅಗ್ನಿ ಶಾಮಕದಳದವರಿದ್ದಾರೆ. ನಾನಾ ವಿಭಾಗಕ್ಕೆ ಅಧಿಕಾರಿ ಮತ್ತು ಸಹಾಯಕರ ತೀವ್ರ ಕೊರತೆಯಿದೆ.

ಕಾಲುವೆ, ಹಳ್ಳವೇ ಗತಿ: ಅವಘಡ ಸಂಭವಿಸಿದ ಸ್ಥಳಕ್ಕೆ ತೆರಳಲು ವಾಹನಗಳಿಗೆ ನೀರು ತುಂಬಿಸಿ ಕೊಳ್ಳಲು ಏರ್ ಟ್ಯಾಂಕ್ ಇಲ್ಲ. ಕೊಳವೆ ಬಾವಿಯಿಂದ ನೀರು ತುಂಬಿಕೊಳ್ಳಬೇಕಾಗಿದೆ. ಒಂದು ವೇಳೆ ವಿದ್ಯುತ್ ಕೈಕೊಟ್ಟರೆ ಸರಿಯಾದ ಸಮಯದಲ್ಲಿ ವಾಹನಕ್ಕೆ ನೀರು ತುಂಬಿಕೊಳ್ಳಲು ತೊಂದರೆಯಾಗುತ್ತದೆ. ಟ್ಯಾಂಕ್‌ನಲ್ಲಿರುವ ನೀರು ಖಾಲಿಯಾದರೆ ತುಂಗಭದ್ರಾ ಕಾಲುವೆ ಇಲ್ಲವೇ ದುರ್ಗಮ್ಮನ ಹಳ್ಳದಿಂದ ನೀರು ತೆಗೆದುಕೊಂಡು ಹೋಗಬೇಕಾಗುತ್ತದೆ. ಇದರಿಂದಾಗಿ ಕೆಲವೊಂದು ಸಂದರ್ಭದಲ್ಲಿ ಭಾರಿ ಅನಾಹುತ ತಪ್ಪಿಸುವಲ್ಲಿ ಸಿಬ್ಬಂದಿಗೆ ಸಾಧ್ಯವಾಗಿಲ್ಲ.

ಹೊಸ ಕಟ್ಟಡ ನಿರ್ಮಾಣಕ್ಕಾಗಿ 1 ಕೋಟಿ ರೂ.ವೆಚ್ಚದ ಯೋಜನೆ ತಯಾರಿಸಲಾಗಿತ್ತು. ಸರಕಾರದಿಂದ ಮಂಜೂರಾದ 40 ಲಕ್ಷ ರೂ. ವೆಚ್ಚದಲ್ಲಿ ಲೋಕೋಪಯೋಗಿ ಇಲಾಖೆ ಕಾಮಗಾರಿ ನಿರ್ವಹಿಸಿದೆ. ಕೆಲವೊಂದು ಕಾಮಗಾರಿಗಳು ಇನ್ನೂ ಪೂರ್ಣಗೊಂಡಿಲ್ಲ. ಠಾಣೆ ಸುತ್ತ ಕಾಂಪೌಂಡ್ ಇಲ್ಲದ ಕಾರಣಕ್ಕೆ ಬಿಡಾಡಿ ದನಗಳು ಇಲ್ಲಿಯೇ ಠಿಕಾಣಿ ಹೂಡಿರುತ್ತವೆ.

ಕೋಟ್:

ಸಿಬ್ಬಂದಿ ಕೊರತೆಯಿಂದಾಗಿ ಹೋಂ ಗಾರ್ಡ್ಸ್‌ಗಳನ್ನು ತಾತ್ಕಾಲಿಕವಾಗಿ ನೇಮಕ ಮಾಡಿಕೊಳ್ಳಲಾಗಿದೆ. ಕಟ್ಟಡ ಕಾಮಗಾರಿ ಕುರಿತು ಲೋಕೋಪಯೋಗಿ ಇಲಾಖೆ ಅಧಿಕಾರಿಗಳನ್ನು ಕೇಳಿದರೆ ಬಾಕಿ ಅನುದಾನ ಬಿಡುಗಡೆಯಾಗಿಲ್ಲ ಎನ್ನುತ್ತಾರೆ. ಶಾಸಕ, ಸಂಸದರಿಗೆ ಅನುದಾನ ಬಿಡುಗಡೆ ಮಾಡುವಂತೆ ಕೇಳಲಾಗಿದೆ. ಸಕಾರಾತ್ಮಕ ಪ್ರತಿಕ್ರಿಯೆ ಸಿಕ್ಕಿಲ್ಲ.

-ಶಶಿಧರ ಮೂರ್ತಿ, ಜಿಲ್ಲಾ ಅಗ್ನಿ ಶಾಮಕ ಅಧಿಕಾರಿ
ಕಾಮೆಂಟ್‌ ಮಾಡಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ