ಆ್ಯಪ್ನಗರ

ಇಂದಿನಿಂದ ಏ.13 ರವರೆಗೆ ಇಂದ್ರ ಧನುಷ್ ಲಸಿಕಾ ಅಭಿಯಾನ

ಮಕ್ಕಳು ಹಾಗೂ ಗರ್ಭಿಣಿಯರನ್ನು ಮಾರಕ ರೋಗಗಳಿಂದ ರಕ್ಷಿಸಲು, ಏ.4 ರಿಂದ 13 ರವರೆಗೆ ಏಳು ದಿನದವರೆಗೆ ‘ಇಂದ್ರಧನುಷ್’ ವಿಶೇಷ ಲಸಿಕಾ ಅಭಿಯಾನ ಜಿಲ್ಲಾದ್ಯಂತ ಹಮ್ಮಿಕೊಳ್ಳಲಾಗಿದೆ ಎಂದು ಜಿ.ಪಂ. ಸಿಇಒ ಆರ್.ರಾಮಚಂದ್ರನ್ ಹೇಳಿದರು.

ವಿಕ ಸುದ್ದಿಲೋಕ 4 Apr 2016, 6:39 am
ಕೊಪ್ಪಳ ; ಮಕ್ಕಳು ಹಾಗೂ ಗರ್ಭಿಣಿಯರನ್ನು ಮಾರಕ ರೋಗಗಳಿಂದ ರಕ್ಷಿಸಲು, ಏ.4 ರಿಂದ 13 ರವರೆಗೆ ಏಳು ದಿನದವರೆಗೆ ‘ಇಂದ್ರಧನುಷ್’ ವಿಶೇಷ ಲಸಿಕಾ ಅಭಿಯಾನ ಜಿಲ್ಲಾದ್ಯಂತ ಹಮ್ಮಿಕೊಳ್ಳಲಾಗಿದೆ ಎಂದು ಜಿ.ಪಂ. ಸಿಇಒ ಆರ್.ರಾಮಚಂದ್ರನ್ ಹೇಳಿದರು.
Vijaya Karnataka Web  13
ಇಂದಿನಿಂದ ಏ.13 ರವರೆಗೆ ಇಂದ್ರ ಧನುಷ್ ಲಸಿಕಾ ಅಭಿಯಾನ


ನಗರದ ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆರೋಗ್ಯ ಇಲಾಖೆಯಿಂದ ಅನುಷ್ಠಾನಗೊಳಿಸುವ ಇಂದ್ರಧನುಷ್ ಅಭಿಯಾನ ಕಾರ್ಯಕ್ರಮದ ಸಿದ್ಧತೆ ಸಭೆಯ ಅಧ್ಯಕ್ಷತೆ ವಹಿಸಿ ಶನಿವಾರ ಮಾತನಾಡಿದರು.

ಭವಿಷ್ಯದ ಪ್ರಜೆಗಳು ಆರೋಗ್ಯವಂತರಾಗಿರಲು ಹಾಗೂ ಸದಢ ಸಮಾಜ ನಿರ್ಮಾಣವಾಗಲು, ಮಕ್ಕಳ ಆರೋಗ್ಯ ರಕ್ಷಣೆಗೆ ಹೆಚ್ಚಿನ ಮಹತ್ವವನ್ನು ಸರಕಾರ ನೀಡುತ್ತಿದೆ. ಮಕ್ಕಳಿಗೆ ಮಾರಕ ರೋಗಗಳಿಂದ ರಕ್ಷಿಸಲು ಲಸಿಕೆಯನ್ನು ತಪ್ಪದೇ ಹಾಕಿಸುವುದು ಅಗತ್ಯವಾಗಿದೆ. ಹಲವು ಕಾರಣಗಳಿಂದ ಮಕ್ಕಳು ಲಸಿಕೆಯಿಂದ ವಂಚಿತರಾಗುತ್ತಿದ್ದಾರೆ. ಮಕ್ಕಳನ್ನು ಮಾರಕ ರೋಗಗಳಿಂದ ರಕ್ಷಿಸುವ ಸಲುವಾಗಿಯೇ ಸರಕಾರ ಇಂದ್ರಧನುಷ್ ಲಸಿಕಾ ಅಭಿಯಾನ ಹಮ್ಮಿಕೊಂಡಿದೆ ಎಂದು ಹೇಳಿದರು.

ಮನವಿ: ರಾಜ್ಯದ 5 ಜಿಲ್ಲೆಗಳಲ್ಲಿ ಏ.4 ರಿಂದ 13ರವರೆಗೆ ಆಯೋಜಿಸಿದ್ದು, ಜಿಲ್ಲೆಯ 2 ವರ್ಷದೊಳಗಿನ ಮಕ್ಕಳು ಹಾಗೂ ಗರ್ಭಿಣಿಯರಿಗೆ ತಪ್ಪದೇ ಲಸಿಕೆ ಹಾಕಬೇಕು. ಯಾವುದೇ ಮಗು ಅಥವಾ ಗರ್ಭಿಣಿಯರು ಲಸಿಕೆಯಿಂದ ವಂಚಿತರಾಗದಂತೆ ಅಗತ್ಯ ಕ್ರಮ ಕೈಗೊಳ್ಳಬೇಕು. ಮಹತ್ವಪೂರ್ಣ ಕಾರ್ಯಕ್ರಮಕ್ಕೆ ಮಹಿಳಾ ಮತ್ತು ಮಕ್ಕಳ ಅಭಿವದ್ಧಿ ಇಲಾಖೆ, ಶಿಕ್ಷಣ, ಆರೋಗ್ಯ ಸೇರಿದಂತೆ ಸಂಬಂಧಿಸಿದ ಎಲ್ಲ ಇಲಾಖೆಗಳು ಅಗತ್ಯ ಸಹಕಾರ ನೀಡಿ ಕಾರ್ಯಕ್ರಮಯಶಸ್ವಿಗೊಳಿಸಬೇಕು. 2 ವರ್ಷದೊಳಗಿನ ಎಲ್ಲ ಮಕ್ಕಳಿಗೆ ಹಾಗೂ ಗರ್ಭಿಣಿಯರಿಗೆ ಇಂದ್ರಧನುಷ್ ಲಸಿಕೆಯನ್ನು ತಪ್ಪದೇ ಹಾಕಿಸಬೇಕು ಎಂದು ಮನವಿ ಮಾಡಿದರು.

ಸಂಚಾರಿ ಲಸಿಕಾ ತಂಡ: ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಡಾ. ರಮೇಶ್ ಮೂಲಿಮನಿ, ಮಕ್ಕಳ ಪ್ರಾಣಕ್ಕೆ ಸಂಚಕಾರ ತರುವ ಗಂಟಲು ಮಾರಿ, ಪೋಲಿಯೊ, ಮೆದುಳು ಜ್ವರ, ನಾಯಿಕೆಮ್ಮು, ದಡಾರ ಮತ್ತು ಟೆಟ್ಯಾನಸ್ ಮತ್ತು ಹೆಪಟೈಟಸ್ ಸೇರಿದಂತೆ 9 ರೋಗಗಳನ್ನು ತಡೆಗಟ್ಟಲು ಇಂದ್ರಧನುಷ್ ವಿಶೇಷ ಲಸಿಕಾ ಕಾರ್ಯಕ್ರಮ ಹಮ್ಮಿಕೊಂಡಿದೆ. ಎರಡು ವರ್ಷದೊಳಗಿನ 4,986 ಮಕ್ಕಳು ಮತ್ತು 690 ಗರ್ಭಿಣಿಯರಿಗೆ ಲಸಿಕೆ ಹಾಕುವ ಗುರಿ ಹೊಂದಲಾಗಿದೆ. ಕೊಪ್ಪಳ ತಾಲೂಕಿನಲ್ಲಿ 1,105 ಮಕ್ಕಳು, ಗರ್ಭಿಣಿಯರು-144, ಗಂಗಾವತಿ ತಾಲೂಕಿನ 2, 015 ಮಕ್ಕಳು, ಗರ್ಭಿಣಿಯರು-364, ಕುಷ್ಟಗಿ ತಾಲೂಕಿನ -446 ಮಕ್ಕಳು, ಗರ್ಭಿಣಿಯರು-47, ಯಲಬುರ್ಗಾ ತಾಲೂಕಿನ 1,420 ಮಕ್ಕಳು, ಗರ್ಭಿಣಿಯರು-135 ಜನರಿಗೆ ಲಸಿಕೆ ಹಾಕುವ ಗುರಿ ಇದೆ. ಇದಕ್ಕಾಗಿ ಜಿಲ್ಲೆಯಲ್ಲಿ 335 ಲಸಿಕಾ ಕೇಂದ್ರಗಳನ್ನು ಅಂಗನವಾಡಿ ಕೇಂದ್ರಗಳು ಹಾಗೂ ಶಾಲೆಗಳಲ್ಲಿ ಸ್ಥಾಪಿಸಲಾಗುವುದಲ್ಲದೆ, 72 ಸಂಚಾರಿ ಲಸಿಕಾ ತಂಡವನ್ನು ಸಹ ನಿಯೋಜಿಸಲಾಗುವುದು ಎಂದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಶ್ರೀಕಾಂತ್ ಬಾಸೂರ ಮಾತನಾಡಿದರು.

ಸರ್ವೆಲೆನ್ಸ್ ಮೆಡಿಕಲ್ ಆಫೀಸರ್ ಡಾ. ಶ್ರೀಧರ್, ಡಾ. ಎಸ್.ಕೆ. ದೇಸಾಯಿ, ಡಾ. ಆಂಜನೇಯ ಸೇರಿದಂತೆ ನಾನಾ ಇಲಾಖೆಗಳ ಅಧಿಕಾರಿಗಳು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ