ಆ್ಯಪ್ನಗರ

13ನೇ ರಾಷ್ಟ್ರೀಯ ಜಂಪ್‌ರೋಪ್: ಹನುಮಸಾಗರ ಸಜ್ಜು

13ನೇ ರಾಷ್ಟ್ರೀಯ ಕಿರಿಯರ ಜಂಪ್‌ರೋಪ್ ಕ್ರೀಡಾಕೂಟ, 2017, ಜ.8ರಿಂದ 10 ರವರೆಗೆ ನಡೆಯಲಿದ್ದು, ಕುಷ್ಟಗಿ ತಾಲೂಕಿನ ಹನುಮಸಾಗರ ಆತಿಥ್ಯಕ್ಕೆ ಸಜ್ಜುಗೊಂಡಿದೆ.

ವಿಕ ಸುದ್ದಿಲೋಕ 30 Dec 2016, 8:10 am
ಗಂಗಾಧರ ಬಂಡಿಹಾಳ, ಕೊಪ್ಪಳ
Vijaya Karnataka Web 13th national jamprop hanumasagara outfit
13ನೇ ರಾಷ್ಟ್ರೀಯ ಜಂಪ್‌ರೋಪ್: ಹನುಮಸಾಗರ ಸಜ್ಜು


13ನೇ ರಾಷ್ಟ್ರೀಯ ಕಿರಿಯರ ಜಂಪ್‌ರೋಪ್ ಕ್ರೀಡಾಕೂಟ, 2017, ಜ.8ರಿಂದ 10 ರವರೆಗೆ ನಡೆಯಲಿದ್ದು, ಕುಷ್ಟಗಿ ತಾಲೂಕಿನ ಹನುಮಸಾಗರ ಆತಿಥ್ಯಕ್ಕೆ ಸಜ್ಜುಗೊಂಡಿದೆ.

ಜಿಲ್ಲೆಯಲ್ಲಿ ಮೊದಲ ಬಾರಿ ರಾಷ್ಟ್ರ ಮಟ್ಟದ ಕ್ರೀಡಾಕೂಟ ನಡೆಯುತ್ತಿದೆ. ರಾಜ್ಯ ಜಂಪ್‌ರೋಪ್ ಸಂಸ್ಥೆ, ಜಿಲ್ಲಾಡಳಿತ, ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಸಹಯೋಗದಲ್ಲಿ ಕ್ರೀಡಾಕೂಟ ಆಯೋಜಿಸಲಾಗಿದೆ. ದೇಶದ 21 ರಾಜ್ಯಗಳ ಕ್ರೀಡಾಪಟುಗಳು ಕ್ರೀಡಾಕೂಟದಲ್ಲಿ ಭಾಗವಹಿಸಲಿದ್ದಾರೆ ಹೊಸಪೇಟೆಯಲ್ಲಿ ಡಿ.8ರಿಂದ 10 ರವರೆಗೆ ಜರುಗಿದ ರಾಜ್ಯ ಮಟ್ಟದ ಕ್ರೀಡೆಯಲ್ಲಿ ಆಯ್ಕೆಯಾದ ಕ್ರೀಡಾಪಟುಗಳು ರಾಷ್ಟ್ರ ಮಟ್ಟದ ಕ್ರೀಡೆಯಲ್ಲಿ ಭಾಗವಹಿಸಲಿದ್ದಾರೆ. ಈಗಾಗಲೇ 18 ರಾಜ್ಯಗಳ ಕ್ರೀಡಾಪಟುಗಳು ನೋಂದಣಿಮಾಡಿಸಿದ್ದು, ಮೂರು ರಾಜ್ಯಗಳ ಕ್ರೀಡಾಪಟುಗಳ ನೋಂದಣಿ ನಿರೀಕ್ಷಿಸಲಾಗಿದೆ. ಜ.7ರಂದು ಕ್ರೀಡಾಪಟಗಳು ಜಿಲ್ಲೆಗೆ ಆಗಮಿಸಲಿದ್ದಾರೆ.

ಈ ರಾಜ್ಯಗಳ ಕ್ರೀಡಾಪಟುಗಳು ಭಾಗಿ: ಕರ್ನಾಟಕ, ಬಿಹಾರ, ಆಂಧ್ರಪ್ರದೇಶ, ತೆಲಂಗಾಣ, ಚಂಡಿಗಢ, ಗುಜರಾತ್, ಹರಿಯಾಣ, ಜಾರ್ಖಂಡ್, ಕೇರಳ, ಮಧ್ಯಪ್ರದೇಶ, ಮಹಾರಾಷ್ಟ್ರ, ಉತ್ತರಖಂಡ, ಒಡಿಶಾ, ಪಂಚಾಬ್, ತಮಿಳುನಾಡು, ಪಾಂಡಿಚೇರಿ ಸೇರಿ ದೇಶದ ನಾನಾ ರಾಜ್ಯಗಳ ಕ್ರೀಡಾಪಟುಗಳು ಆಗಮಿಸಲಿದ್ದಾರೆ. ಪ್ರತಿ ರಾಜ್ಯದಿಂದ ಬಾಲಕ ಹಾಗೂ ಬಾಲಕಿಯರ ತಲಾ ಒಂದು ತಂಡ ಸ್ಪರ್ಧೆಯಲ್ಲಿ ಭಾಗವಹಿಸಲಿದೆ. ಕ್ರೀಡಾಪಟುಗಳು, ನಿರ್ಣಾಯಕರು ಸೇರಿ ಒಟ್ಟು 750 ಜನರು ಕ್ರೀಡಾಕೂಟದಲ್ಲಿ ಭಾಗವಹಿಸಲಿದ್ದಾರೆ.

ಸುಸಜ್ಜಿತ ಕ್ರೀಡಾಂಗಣ: ಹನುಮಸಾಗರದ ಸರಕಾರಿ ಪದವಿ ಪೂರ್ವ ಕಾಲೇಜಿನ ಕ್ರೀಡಾಂಗಣದಲ್ಲಿ ಕ್ರೀಡಾಕೂಟ ನಡೆಯಲಿದೆ. 60 ್ಡ 40 ಸ್ಥಳದಲ್ಲಿ ಕ್ರೀಡಾಪಟುಗಳು ಕ್ರೀಡೆ ಪ್ರದರ್ಶಿಸಲಿದ್ದು, 80 ್ಡ 100 ತಾತ್ಕಾಲಿಕ ಒಳಾಂಗಣ ಕ್ರೀಡಾಂಗಣವನ್ನೂ ನಿರ್ಮಿಸಲಾಗುತ್ತಿದೆ. 5 ಸಾವಿರ ಕ್ರೀಡಾಭಿಮಾನಿಗಳು ಕುಳಿತು ಕ್ರೀಡೆ ವೀಕ್ಷಿಸಬಹುದಾಗಿದೆ.

ಲೋಗೊದಲ್ಲಿ ಕೊಪ್ಪಳದ ಜಿಂಕೆ: ಜಿಲ್ಲೆಯಲ್ಲಿ ಕಾಣಸಿಗುವ ಜಿಂಕೆಯನ್ನೇ ಕ್ರೀಡಾಕೂಟದ ಲೋಗೊಕ್ಕೆ ಬಳಸಿರುವುದು ವಿಶೇಷ. ಜಿಂಕೆಗಳ ರಕ್ಷಣೆ ಹಾಗೂ ಜಿಂಕೆಯಂತೆ ಜಿಗಿಯುವ ಹಗ್ಗದಾಟ ದೃಷ್ಟಿಯಲ್ಲಿಟ್ಟುಕೊಂಡು ಲೋಗೊ ರಚಿಸಲಾಗಿದೆ. ಈಗಾಗಲೇ ಲೋಗೊ ಬಿಡುಗಡೆಯಾಗಿದ್ದು, ಜಿಲ್ಲೆಯ ಪ್ರಾಣಿ ಸಂಕುಲ ರಕ್ಷಣೆಗೆ ಹಿಡಿದ ಕೈಗನ್ನಡಿಯಾಗಿದೆ. ಇಂತಹ ವಿಶಿಷ್ಟ ಲೋಗೊ ಮೂಲಕ ಹೊರರಾಜ್ಯದವರಿಗೂ ಜಿಲ್ಲೆಯ ಜಿಂಕೆಯ ಬಗ್ಗೆ ಅರಿವು ಮೂಡಿಸುವ ಉದ್ದೇಶ ಹೊಂದಲಾಗಿದೆ ಎಂದು ಕಾರ್ಯಕ್ರಮ ಸಂಘಟಕರು ತಿಳಿಸಿದ್ದಾರೆ.

................
ರಾಷ್ಟ್ರೀಯ ಕ್ರೀಡಾಕೂಟಕ್ಕೆ ಸಿದ್ಧತೆ ನಡೆಯುತ್ತಿದೆ. ದೇಶದ 23 ರಾಜ್ಯಗಳಿಂದ ನೂರಾರು ಕ್ರೀಡಾಪಟುಗಳು ಭಾಗವಹಿಸುವ ನಿರೀಕ್ಷೆ ಇದೆ. ಈಗಾಗಲೇ 18 ರಾಜ್ಯಗಳ ಕ್ರೀಡಾಪಟುಗಳು ನೋಂದಣಿ ಮಾಡಿಸಿದ್ದಾರೆ.

- ಅಬ್ದುಲ್‌ರಜಾಕ್ ಟೇಲರ್, ಪ್ರಧಾನ ಕಾರ್ಯದರ್ಶಿ, ರಾಜ್ಯ ಜಂಪ್‌ರೋಪ್ ಅಸೋಸಿಯೇಶನ್

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ