ಆ್ಯಪ್ನಗರ

ಕೊಪ್ಪಳ: ಹುಚ್ಚು ಹಿಡಿದ ತೋಳದ ದಾಳಿ, ಜನ ಹಾಗೂ ಜಾನುವಾರುಗಳಿಗೆ ಗಾಯ

ಹುಚ್ಚು ಹಿಡಿದ ತೋಳವೊಂದು ದಾಳಿ ನಡೆಸಿ, 15ಕ್ಕೂ ಹೆಚ್ಚು ಜನ ಹಾಗೂ ಜಾನುವಾರುಗಳನ್ನು ಗಾಯಗೊಳಿಸಿದೆ. ರೊಚ್ಚಿಗೆದ್ದ ಗ್ರಾಮಸ್ಥರು ಬಡಿಗೆಗಳಿಂದ ಹುಚ್ಚು ಹಿಡಿದ ತೋಳವನ್ನು ಹೊಡೆದು ಸಾಯಿಸಿ, ನಂತರ ಅದನ್ನು ಸುಟ್ಟು ಹಾಕಿದ್ದಾರೆ.

Vijaya Karnataka Web 14 Mar 2020, 1:50 pm
ಕೊಪ್ಪಳ: ಕುಷ್ಟಗಿ ತಾಲೂಕಿನ ಹಲವು ಗ್ರಾಮಗಳಲ್ಲಿ ಹುಚ್ಚು ಹಿಡಿದ ತೋಳವೊಂದು ದಾಳಿ ನಡೆಸಿ, 15ಕ್ಕೂ ಹೆಚ್ಚು ಜನ ಹಾಗೂ ಜಾನುವಾರುಗಳನ್ನು ಗಾಯಗೊಳಿಸಿದ ಘಟನೆ ನಡೆದಿದೆ.
Vijaya Karnataka Web wolf attack man


ಮೊದಲಿಗೆ ತೆಗ್ಗಿನಾಳ ಗ್ರಾಮಕ್ಕೆ ಬಂದ ತೋಳ, ಎರಡು ಆಕಳಿಗೆ ಕಚ್ಚಿ ಪರಾರಿಯಾಗಿದೆ. ಹೊಸೂರು ಗ್ರಾಮದಲ್ಲಿ ಒಂದು ಜಾನುವಾರು ಹಾಗೂ ಇಬ್ಬರ ವ್ಯಕ್ತಿಗಳ ಮೇಲೆ ದಾಳಿ ನಡೆಸಿ ಗಾಯಗೊಳಿಸಿದೆ.‌ ಟೆಂಗುಂಟಿ ಗ್ರಾಮದಲ್ಲಿ ನುಗ್ಗಿ 8 ಜನರಿಗೆ ಕಚ್ಚಿ ಗಾಯಗೊಳಿಸಿದೆ.

ರೊಚ್ಚಿಗೆದ್ದ ಗ್ರಾಮಸ್ಥರು ಬಡಿಗೆಗಳಿಂದ ಹುಚ್ಚು ಹಿಡಿದ ತೋಳವನ್ನು ಹೊಡೆದು ಸಾಯಿಸಿ, ನಂತರ ಅದನ್ನು ಸುಟ್ಟು ಹಾಕಿದ್ದಾರೆ. ತೀವ್ರ ಗಾಯಗೊಂಡ ನಾಗಮ್ಮ ಸೇರಿ ಮೂವರನ್ನು ಚಿಕಿತ್ಸೆಗೆ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಉಳಿದ ಗಾಯಾಳುಗಳು ಕುಷ್ಟಗಿಯ ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಕುಷ್ಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ