ಆ್ಯಪ್ನಗರ

'ಬಿಜೆಪಿ ಮತ್ತು ಬಿಎಸ್​ವೈ ನಂಬಿಕೆಗೆ ದ್ರೋಹ ಬಗೆಯಲ್ಲ': ಬಿ.ಸಿ.ಪಾಟೀಲ್‌ ವಿಶ್ವಾಸ

ನಂಬಿದವರಿಗೆ ಬಿಜೆಪಿ ದ್ರೋಹ ಮಾಡಲ್ಲ. ಜೊತೆಗೆ ಸಿಎಂ ಬಿಎಸ್‌ವೈ ಕೂಡ ಮೋಸ ಮಾಡಲ್ಲ ಎಂದು ಬಿ.ಸಿ.ಪಾಟೀಲ್‌ ಹೇಳಿದ್ದಾರೆ. ಮಾಜಿ ಸಚಿವರಾದ ಎಂಟಿಬಿ ನಾಗರಾಜ್, ಆರ್.ಶಂಕರ್ ಮತ್ತು ಎಚ್.ವಿಶ್ವನಾಥ್ ಅವರಿಗೆ ಮೋಸ ಮಾಡುವುದಿಲ್ಲ ಎಂಬ ವಿಶ್ವಾಸವಿದೆ ಎಂದರು.

Vijaya Karnataka Web 16 Jun 2020, 3:51 pm
ಕೊಪ್ಪಳ: ಬಿಜೆಪಿ ನಂಬಿಕೆಗೆ ದ್ರೋಹ ಬಗೆಯುವ ಪಕ್ಷವಲ್ಲ, ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಸಹ ನಂಬಿದವರಿಗೆ ಮೋಸ ಮಾಡುವುದಿಲ್ಲ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
Vijaya Karnataka Web BC Patil
ಸಚಿವ ಬಿ.ಸಿ.ಪಾಟೀಲ್‌ (ಫೈಲ್‌ ಫೋಟೋ)


ಕೊಪ್ಪಳದಲ್ಲಿ ಮಾತನಾಡಿದ ಅವರು, ಪರಿಷತ್ ಚುನಾವಣೆ ಟಿಕೆಟ್‌ ವಿಚಾರದಲ್ಲಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ಮಾಜಿ ಸಚಿವರಾದ ಎಂಟಿಬಿ ನಾಗರಾಜ್, ಆರ್.ಶಂಕರ್ ಮತ್ತು ಎಚ್.ವಿಶ್ವನಾಥ್‌ ಅವರಿಗೆ ಮೋಸ ಮಾಡುವುದಿಲ್ಲ ಎಂಬ ವಿಶ್ವಾಸವಿದೆ ಎಂದರು.

17 ಶಾಸಕರು ರಾಜೀನಾಮೆ ನೀಡಿದ್ದರಿಂದಲೇ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಈ ಬಗ್ಗೆ ಕೋರ್ ಕಮಿಟಿ ಸಭೆಯಲ್ಲಿ ಚರ್ಚೆಯಾಗಿದೆ. ಹೈಕಮಾಂಡ್‌ಗೆ ಪಟ್ಟಿ ಕಳುಹಿಸಲಾಗಿದ್ದು ಒಳ್ಳೆಯ ನಿರ್ಧಾರ ಬರಲಿದೆ. ಬಿಜೆಪಿ ನಂಬಿಕೆಗೆ ದ್ರೋಹ ಬಗೆಯುವ ಪಕ್ಷವಲ್ಲ, ಮುಖ್ಯಮಂತ್ರಿಗಳು ಸಹ ಮೋಸ ಮಾಡುವ ವ್ಯಕ್ತಿಗಳಲ್ಲ. ಅವರಿಗೆ ನ್ಯಾಯ ಒದಗಿಸಲಿದ್ದಾರೆ ಎಂದು ಹೇಳಿದರು.

ಪರಿಷತ್ ಟಿಕೆಟ್‌ ಕೈತಪ್ಪುವ ಭೀತಿಯಲ್ಲಿ ಎಚ್‌.ವಿಶ್ವನಾಥ್ ! ಹಳ್ಳಿಹಕ್ಕಿಯ ಮುಂದಿನ ನಡೆಯೇನು?

ಜೂನ್‌ 29ಕ್ಕೆ ವಿಧಾನಸಭೆಯಿಂದ ಪರಿಷತ್‌ನ 7 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಸದಸ್ಯಬಲದ ಆಧಾರದ ಮೇಲೆ ಬಿಜೆಪಿಗೆ 4, ಕಾಂಗ್ರೆಸ್‌ಗೆ 2 ಹಾಗೂ ಜೆಡಿಎಸ್‌ಗೆ 1 ಸ್ಥಾನ ಸಿಗಲಿದೆ. ಈ ಕಾರಣದಿಂದ ಮೂರು ಪಕ್ಷಗಳಲ್ಲೂ ಪರಿಷತ್‌ ಚುನಾವಣಾ ಅಖಾಡ ರಂಗೇರಿತ್ತು. ಈ ಹಿನ್ನೆಲೆ ಸೋಮವಾರ ನಡೆದ ಬಿಜೆಪಿ ಕೋರ್‌ ಕಮಿಟಿ ಸಭೆಯಲ್ಲಿ ನಾಲ್ಕು ಜನರ ಹೆಸರನ್ನು ಅಂತಿಮಗೊಳಿಸಲಾಗಿದ್ದು, ವರಿಷ್ಠರ ಅನುಮತಿಗಾಗಿ ಕಳುಹಿಸಲಾಗಿದೆ.

ಪರಿಷತ್‌ ಚುನಾವಣೆ: ಹೈಕಮಾಂಡ್‌ ಅಂಗಳ ತಲುಪಿದ ಕಾಂಗ್ರೆಸ್‌ ಸಂಭವನೀಯರ ಪಟ್ಟಿ

ಬಿಜೆಪಿ ಸರಕಾರ ರಚನೆಗೆ ಕಾರಣರಾದ 17 ಶಾಸಕರ ಪೈಕಿ ಎಂಟಿಬಿ ನಾಗರಾಜ್‌, ಆರ್‌.ಶಂಕರ್‌ ಮತ್ತು ಎಚ್‌.ವಿಶ್ವನಾಥ್‌ ಅವರಿಗೆ ಟಿಕೆಟ್‌ ನೀಡಲು ಕೋರ್‌ ಕಮಿಟಿ ನಿರ್ಧರಿಸಿದೆ. ಜೊತೆಗೆ ಉಳಿದ ಒಂದು ಸ್ಥಾನಕ್ಕೆ ಉತ್ತರ ಕರ್ನಾಟಕದ ಸುನೀಲ್‌ ವಲ್ಯಾಪುರೆ ಅವರ ಹೆಸರನ್ನು ಅಖೈರುಗೊಳಿಸಿ ವರಿಷ್ಠರ ಗ್ರೀನ್‌ ಸಿಗ್ನಲ್‌ಗಾಗಿ ರಾಜ್ಯ ನಾಯಕರು ಕಾಯುತ್ತಿದ್ದಾರೆ.

ಜೆಡಿಎಸ್‌ನಲ್ಲಿ ಅವಕಾಶ 1, ಆಕಾಂಕ್ಷಿಗಳು 29; ಪರಿಷತ್‌ ಅಭ್ಯರ್ಥಿ ಆಯ್ಕೆ ಗೌಡರ ಹೆಗಲಿಗೆ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ