ಆ್ಯಪ್ನಗರ

ಎಡದಂಡೆ ಕಾಲುವೆ ತಡೆಗೊಡೆ ಬಿರುಕು

ತಾಲೂಕಿನ ಜಿರ್ಹಾಳ ಕಲ್ಗುಡಿ ಸಮೀಪದ ತುಂಗಭದ್ರಾ ಎಡದಂಡೆ ಕಾಲುವೆ 25ರ ವಿತರಣಾ ಉಪಕಾಲುವೆ ಗೇಜ್‌ ಪಕ್ಕದಲ್ಲಿಯೇ ತಡೆಗೋಡೆ ಬಿರುಕು ಬಿಟ್ಟಿರುವುದನ್ನು ನೀರಾವರಿ ನಿಗಮದ ಅಧಿಕಾರಿಗಳು ಶುಕ್ರವಾರ ದುರಸ್ಥಿ ಕಾರ್ಯಕೈಗೊಂಡರು.

Vijaya Karnataka 22 Sep 2018, 5:00 am
ಗಂಗಾವತಿ : ತಾಲೂಕಿನ ಜಿರ್ಹಾಳ ಕಲ್ಗುಡಿ ಸಮೀಪದ ತುಂಗಭದ್ರಾ ಎಡದಂಡೆ ಕಾಲುವೆ 25ರ ವಿತರಣಾ ಉಪಕಾಲುವೆ ಗೇಜ್‌ ಪಕ್ಕದಲ್ಲಿಯೇ ತಡೆಗೋಡೆ ಬಿರುಕು ಬಿಟ್ಟಿರುವುದನ್ನು ನೀರಾವರಿ ನಿಗಮದ ಅಧಿಕಾರಿಗಳು ಶುಕ್ರವಾರ ದುರಸ್ಥಿ ಕಾರ್ಯಕೈಗೊಂಡರು.
Vijaya Karnataka Web KPL-KPL21CM03


ಮುಖ್ಯ ಕಾಲುವೆ ತಡೆಗೊಂಡೆ ಬಿರುಕು ಬಿಟ್ಟಿರುವುದನ್ನು ಗಮನಿಸಿದ ಸ್ಥಳೀಯರು ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಇದರಿಂದ ಬೆಳಗ್ಗೆ ಜೆಸಿಬಿ ಯಂತ್ರದಿಮದ ತುರ್ತು ಕಾರ್ಮಗಾರಿ ಕೈಗೊಳ್ಳಲಾಯಿತು. ವಿತರಣಾ ಉಪಕಾಲುವೆಗೆ ಅಧಿಕ ಪ್ರಮಾಣದ ನೀರು ಹರಿಬಿಟ್ಟಿರುವುದರಿಂದ ಗೇಜ್‌ ಪಕ್ಕದಲ್ಲಿ ತಡೆಗೋಡೆ ಬಿರುಕು ಕಾಣಿಸಿಕೊಂಡಿದೆ. ಈ ವಿತರಣಾ ಉಪಕಾಲುವೆಗೆ 0 ರಿಂದ 120 ಗೇಜ್‌ವರೆಗೆ ನೀರು ಹರಿಬಿಡಲಾಗುತ್ತದೆ. ಆದರೆ ರೈತರ ಒತ್ತಾಯದಿಂದ ವಾರದಿಂದ 140 ಗೇಜ್‌ಗೂ ಹೆಚ್ಚು ನೀರು ಬಿಡಲಾಗಿದೆ. ನೀರಿನ ರಭಸಕ್ಕೆ ತಡೆಗೊಡೆಗೆ ದಕ್ಕೆಯಾಗಿದೆ ಎಂದು ಅಧಿಕಾರಿಗಳು ಹೇಳಿದರು.

ಕಾಲುವೆ ಬಿರುಕು ಬಿಟ್ಟಿರುವ ಪರಿಣಾಮ ಮುಂಜಾಗೃತಾ ಕ್ರಮವಾಗಿ ಉಪಕಾಲುವೆಗೆ ನೀರು ಬಿಡುವುದನ್ನು ಸ್ಥಗಿತಗೊಳಿಸಲಾಯಿತು. ಜೆಸಿಬಿ ಯಂತ್ರದಿಂದ ಕಾಲುವೆ ಗೊಡೆಗೆ ಮರಂ ಹಾಕಲಾಯಿತು. ನಾಲ್ಕು ದಶದ ಹಳೇಯ ತಡೆಗೊಡೆಯಾಗಿರುವ ಪರಿಣಾಮ ಅಲ್ಲಲ್ಲಿ ಕಾಂಕ್ರಿಟ್‌ ಕಿತ್ತುಕೊಂಡು ಹೋಗಿದೆ. ಕಾಲುವೆ ನವೀಕರಣಕ್ಕೆ ಯೋಜನೆ ರೂಪಿಸಲಾಗುತ್ತಿದೆ ಎಂದು ಅಧಿಕಾರಿಗಳು ರೈತರಿಗೆ ಹೇಳಿದರು.

3 ದಿನ ನೀರು ಸ್ಥಗಿತ: ಉಪಕಾಲುವೆ ಗೇಜ್‌ ಪಕ್ಕದಲ್ಲಿಯೇ ತಡೆಗೋಡೆಯ ಕುಸಿತವಾಗಿರುವುದರಿಂದ ನೀರು ಸ್ಥಗಿತಗೊಳಿಸದ ಹಾಗೆ ಬಿಟ್ಟರೆ ಮುಖ್ಯ ಕಾಲುವೆಗೆ ದಕ್ಕೆಯಾಗುತ್ತದೆ. ಆದ್ದರಿಂದ ಮೂರು ದಿನಗಳ ಕಾಲ ನೀರು ಕಾಲುವೆಗೆ ಹರಿಸುವುದನ್ನು ಬಂದ್‌ ಮಾಡಲಾಗುತ್ತಿದೆ. ಕಾಲುವೆ ವ್ಯಾಪ್ತಿಯ ಢಣಾಪುರ, ಶ್ರೀರಾಮನಗರ, ಮುಸ್ಟೂರ್‌, ಮುಸ್ಟೂರ್‌ ಕ್ಯಾಂಪ್‌ಗಳಿಗೆ ನೀರು ಪೂರೈಕೆ ತಾತ್ಕಾಲಿಕ ಸ್ಥಗಿತಗೊಳ್ಳಲಿದೆ ಎಂದು ನೀರಾವರಿ ನಿಗಮದ ಇಇ ರಾಜಶೇಖರ ಶೆಟ್ಟರ ತಿಳಿಸಿದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ