ಆ್ಯಪ್ನಗರ

ಪೌರಕಾರ್ಮಿಕರಿಂದ ಪೌರಾಯುಕ್ತ ತರಾಟೆಗೆ

ವೇತನ ಪಾವತಿಗೆ ವಿಳಂಬ ನೀತಿ ಅನುಸರಿಸಲಾಗುತ್ತಿದೆ ಎಂದು ಆರೋಪಿಸಿ, ನಗರಸಭೆ ಪೌರಕಾರ್ಮಿಕರು ಪೌರಾಯುಕ್ತರನ್ನು ತರಾಟೆಗೆ ತೆಗೆದುಕೊಂಡ ಘಟನೆ ಸೋಮವಾರ ನಡೆಯಿತು.

Vijaya Karnataka 29 May 2018, 12:00 am
ಗಂಗಾವತಿ: ವೇತನ ಪಾವತಿಗೆ ವಿಳಂಬ ನೀತಿ ಅನುಸರಿಸಲಾಗುತ್ತಿದೆ ಎಂದು ಆರೋಪಿಸಿ, ನಗರಸಭೆ ಪೌರಕಾರ್ಮಿಕರು ಪೌರಾಯುಕ್ತರನ್ನು ತರಾಟೆಗೆ ತೆಗೆದುಕೊಂಡ ಘಟನೆ ಸೋಮವಾರ ನಡೆಯಿತು.
Vijaya Karnataka Web civic trouble by civic workers
ಪೌರಕಾರ್ಮಿಕರಿಂದ ಪೌರಾಯುಕ್ತ ತರಾಟೆಗೆ


ಕನಿಷ್ಠ ವೇತನದಡಿ ಸುಮಾರು 68 ಪೌರ ಕಾರ್ಮಿಕರು ನಗರಸಭೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಒಂದು ತಿಂಗಳು ವೇತನ ಪಾವತಿ ಮಾಡಿದರೆ, ಮೂರು ತಿಂಗಳು ವೇತನ ತಡೆಹಿಡಿಯಲಾಗುತ್ತಿದೆ. ವಿಳಂಬ ನೀತಿಯ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರೆ, ಹಣ ಇಲ್ಲ, ಕಾರ್ಮಿಕರು ರಾಜಕೀಯ ಮಾಡುತ್ತಾರೆ ಎಂಬ ಆರೋಪ ಹೊರಿಸಲಾಗುತ್ತಿದೆ. ದುಡಿದ ಕೂಲಿ ಸಕಾಲಕ್ಕೆ ಕೈಗೆ ತಲುಪದ ಕಾರಣ ಕುಟುಂಬ ನಿರ್ವಹಣೆಗೆ ತೊಂದರೆಯಾಗುತ್ತಿದೆ ಎಂದು ಪೌರಾಯುಕ್ತ ಖಾಜಾಮೋಹಿನುದ್ದೀನ್‌ ಅವರನ್ನು ಕಾರ್ಮಿಕರು ತರಾಟೆಗೆ ತೆಗೆದುಕೊಂಡರು.

ವೇತನ ಪಾವತಿಗೆ ಪಟ್ಟು:

ಮೂರು ತಿಂಗಳ ಬಾಕಿ ವೇತನ ಪಾವತಿ ಮಾಡುವಂತೆ ಪೌರ ಕಾರ್ಮಿಕರು ಪಟ್ಟು ಹಿಡಿದರು. ಪ್ರತಿ ಬಾರಿ ವೇತನಕ್ಕಾಗಿ ಗಲಾಟೆ, ಧರಣಿ ನಡೆಸಬೇಕಾಗಿಬಂದಿದೆ. ಅಧಿಕಾರಿಗಳನ್ನು ಕೇಳಿದರೆ ತೆರಿಗೆ ವಸೂಲಾಗಿಲ್ಲ, ನಗರಸಭೆ ಖಜಾನೆಯಲ್ಲಿ ಹಣ ಇಲ್ಲ ಎಂದು ಹೇಳಲಾಗುತ್ತಿದೆ. ಪ್ರತಿ ತಿಂಗಳು 5ನೇ ತಾರೀಖಿಗೆ ವೇತನ ನೀಡಬೇಕೆಂಬ ನಿಯಮವಿದ್ದರೂ ಉಲ್ಲಂಘಿಸಲಾಗುತ್ತಿದೆ ಎಂದು ಆರೋಪಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಪೌರಾಯುಕ್ತ ಖಾಜಾಮೋಹಿನುದ್ದೀನ್‌, ಕಾರ್ಮಿಕರ ಪಿಎಫ್‌ ಹಣ ಪಾವತಿ ಮಾಡದ ಹಿನ್ನೆಲೆಯಲ್ಲಿ ಪ್ರಾದೇಶಿಕ ಆಯುಕ್ತ ಕಚೇರಿ ಅಧಿಕಾರಿಗಳು ನಗರಸಭೆ ಖಾತೆಗಳನ್ನು ಬ್ಲಾಕ್‌ ಮಾಡಿದ್ದರು. ಹಿಂದಿನ ಪೌರಾಯುಕ್ತರು ಮಾಡಿದ ತಪ್ಪಿಗೆ 25 ಲಕ್ಷ ರೂಪಾಯಿ ಪಿಎಫ್‌ ಹಣ ಪಾವತಿ ಮಾಡಲಾಗಿದೆ. ಆದ್ದÜರಿಂದ, ನಗರಸಭೆಯಲ್ಲಿ ಹಣದ ಕೊರತೆ ಇದೆ. ತಿಂಗಳಿಗೆ 11 ಲಕ್ಷ ರೂಪಾಯಿ ಕಾರ್ಮಿಕರ ವೇತನ ಪಾವತಿ ಮಾಡಬೇಕು. ಅಷ್ಟೊಂದು ಹಣ ಇಲ್ಲ. ತುರ್ತಾಗಿ ಒಂದು ತಿಂಗಳು ವೇತನ ಪಾವತಿ ಮಾಡುವಂತೆ ಸಿಬ್ಬಂದಿಗೆ ಸೂಚನೆ ನೀಡಿದ್ದೇನೆ ಎಂದರು. ಪೌರಾಯುಕ್ತರ ಮಾತು ಕೇಳದ ಕಾರ್ಮಿಕರು ಆಕ್ರೋಶ ವ್ಯಕ್ತಪಡಿಸಿದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ