ಆ್ಯಪ್ನಗರ

ಕೊಪ್ಪಳ: ಕೊರೊನಾಗೆ ಮತ್ತೆ ಇಬ್ಬರು ಸಾವು; ಮತ್ತೆರಡು ಪಾಸಿಟಿವ್‌ ಪ್ರಕರಣ ಪತ್ತೆ

ಕೊಪ್ಪಳದಲ್ಲಿಯೂ ಕೊರೊನಾ ವೈರಸ್‌ ಆರ್ಭಟ ಮುಂದುವರೆಸಿದ್ದು, ಗುರುವಾರ ಒಂದೇ ದಿನ ಇಬ್ಬರು ಸಾವನ್ನಪ್ಪಿರುವುದು ಜಿಲ್ಲೆಯಲ್ಲಿ ಆತಂಕಕ್ಕೆ ಕಾರಣವಾಗಿದೆ. ಈ ಎರಡು ಸಾವುಗಳೊಂದಿಗೆ ಜಿಲ್ಲೆಯಲ್ಲಿ ನಾಲ್ಕು ಜನ ಕೊರೊನಾಗೆ ಮೃತಪಟ್ಟಂತಾಗಿದ್ದು, ಇದುವರೆಗೂ 157 ಪಾಸಿಟಿವ್‌ ಪ್ರಕರಣಗಳು ಪತ್ತೆಯಾಗಿವೆ.

Vijaya Karnataka Web 9 Jul 2020, 8:05 pm
ಕೊಪ್ಪಳ: ಜಿಲ್ಲೆಯಲ್ಲಿ ಕೊರೊನಾ ಸಾವಿನ ಸರಣಿ ಮುಂದುವರೆದಿದೆ. ಗುರುವಾರ ಒಂದೇ ದಿನ ಇಬ್ಬರು ಕೊರೊನಾ ಸೋಂಕಿತರು ಮೃತಪಟ್ಟಿರುವುದು ಕೊಪ್ಪಳದ ಜನತೆಯ ಆತಂಕಕ್ಕೆ ಕಾರಣವಾಗಿದೆ. ಇದರೊಂದಿಗೆ ಜಿಲ್ಲೆಯಲ್ಲಿ ಕೊರೊನಾಗೆ ಬಲಿಯಾದವರ ಸಂಖ್ಯೆ 4ಕ್ಕೆ ಏರಿಕೆಯಾಗಿದೆ.
Vijaya Karnataka Web coronavirus outbreak 2 more deaths and 2 positive cases reported in koppal
ಕೊಪ್ಪಳ: ಕೊರೊನಾಗೆ ಮತ್ತೆ ಇಬ್ಬರು ಸಾವು; ಮತ್ತೆರಡು ಪಾಸಿಟಿವ್‌ ಪ್ರಕರಣ ಪತ್ತೆ


ಗಂಗಾವತಿ ತಾಲೂಕಿನ ಚಿಕ್ಕಜಂತಕಲ್‌ ಗ್ರಾಮದ 51 ವರ್ಷದ ರೋಗಿ ಸಂಖ್ಯೆ- 24,910 ಹಾಗೂ ಕೊಪ್ಪಳ‌ ತಾಲೂಕಿನ ಮುನಿರಾಬಾದಿನ 65 ವರ್ಷದ ರೋಗಿ ಸಂಖ್ಯೆ - 28,568 ಸಾವನ್ನಪ್ಪಿರುವವರು. ಇಬ್ಬರು ಜುಲೈ 7ರಂದು ಜಿಲ್ಲಾ ನಿಗದಿತ ಕೋವಿಡ್‌ ಆಸ್ಪತ್ರೆಗೆ ದಾಖಲಾಗಿದ್ದರು.

ಇಬ್ಬರು ಕೂಡ ತೀವ್ರ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದರು ಎಂದು ಜಿಲ್ಲಾಧಿಕಾರಿ ಸುರಳ್ಕರ್ ವಿಕಾಸ ಕಿಶೋರ್ ತಿಳಿಸಿದ್ದಾರೆ. ಇನ್ನು, ಗುರುವಾರ ಮತ್ತೆ 2 ಪಾಸಿಟಿವ್‌ ಪ್ರಕರಣಗಳು ಜಿಲ್ಲೆಯಲ್ಲಿ ಕಂಡುಬಂದಿವೆ.

ಕೊಪ್ಪಳದಲ್ಲಿ ಕೊರೊನಾ 'ಟೆಸ್ಟ್‌' ನಿಧಾನ: ತಲೆನೋವಾಗ್ತಿದೆ 'ಪೂಲ್ಡ್‌' ಪರೀಕ್ಷಾ ವಿಧಾನ..!

ಇದುವರೆಗೂ ಕೊಪ್ಪಳದಲ್ಲಿ 157 ಪಾಸಿಟಿವ್‌ ಪ್ರಕರಣಗಳು ಕಂಡುಬಂದಿವೆ. ಇದರಲ್ಲಿ 86 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದರೆ, 69 ಪ್ರಕರಣಗಳು ಸಕ್ರಿಯವಾಗಿದ್ದು, ನಾಲ್ಕು ಜನ ಕೊರೊನಾ ಕಾರಣದಿಂದ ಮೃತಪಟ್ಟಿದ್ದಾರೆ.

ಕೊಪ್ಪಳ: ಪೊಲೀಸ್ ಪೇದೆಗೆ ಕೊರೊನಾ, ಠಾಣೆ ಸೀಲ್ ಡೌನ್

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ