ಆ್ಯಪ್ನಗರ

‘ಸುಸಂಸ್ಕೃತ ಸಮಾಜ ನಿರ್ಮಾಣವಾಗಲಿ’

ಮಕ್ಕಳನ್ನು ಸುಸಂಸ್ಕೃರನ್ನಾಗಿ ಬೆಳೆಸುವ ಕೆಲಸ ಮೊದಲು ಮನೆಯಿಂದ ಪ್ರಾರಂಭವಾಗಬೇಕು ಎಂದು ಕುಷ್ಟಗಿ ಸಿಪಿಐ ಸುರೇಶ ತಳವಾರ ಹೇಳಿದರು.

Vijaya Karnataka 13 Jul 2018, 5:00 am
ತಾವರಗೇರಾ : ಮಕ್ಕಳನ್ನು ಸುಸಂಸ್ಕೃರನ್ನಾಗಿ ಬೆಳೆಸುವ ಕೆಲಸ ಮೊದಲು ಮನೆಯಿಂದ ಪ್ರಾರಂಭವಾಗಬೇಕು ಎಂದು ಕುಷ್ಟಗಿ ಸಿಪಿಐ ಸುರೇಶ ತಳವಾರ ಹೇಳಿದರು.
Vijaya Karnataka Web KPL-KPL 12 TVG P01


ಪಟ್ಟಣದ ಬಾಲಕಿಯರ ಸಂಯುಕ್ತ ಪದವೀ ಪೂರ್ವ ಕಾಲೇಜು ಆವರಣದಲ್ಲಿ ಗುರುವಾರ ಜಿಲ್ಲಾ ಪೊಲೀಸ್‌ ಇಲಾಖೆ ಮತ್ತು ತಾವರಗೇರಾ ಪೊಲೀಸ್‌ ಠಾಣೆಯ ಸಹಯೋಗದಲ್ಲಿ ಏರ್ಪಡಿಸಿದ್ದ ಪೋಕ್ಸೊ ಕಾಯಿದೆ ಕುರಿತ ಜನ ಜಾಗೃತಿ ಮೂಡಿಸುವ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿ ಮಾತನಾಡಿದರು.

ನಮ್ಮ ದೇಶದಲ್ಲಿ 3 ಸಾವಿರ ಕಾನೂನುಗಳಿದ್ದು, ಅಪರಾಧಿಗಳು ಎಲ್ಲೇ ಅಡಗಿದ್ದರೂ ಅವರನ್ನು ಸುಲಭವಾಗಿ ಪತ್ತೆ ಹಚ್ಚುವ ಕಲೆ ಪೊಲೀಸ್‌ ಇಲಾಖೆಗೆ ಇದೆ. ಕಾನೂನಿನ ಕುಣಿಕೆಯಿಂದ ತಪ್ಪಿಸಿಕೊಳ್ಳಲು ಯಾರಿಂದಲೂ ಸಾಧ್ಯವಿಲ್ಲ ಎಂದರು. ಸರಕಾರದ ಆದೇಶದಂತೆ ಪ್ರತಿ ಶಾಲಾ ಕಾಲೇಜುಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸಬೇಕು ಹಾಗೂ ಹೆಣ್ಣು ಮಕ್ಕಳಿಗೆ ಪ್ರತ್ಯೇಕ ಶೌಚಾಲಯ ಕಟ್ಟಿರಬೇಕು ಎಂದು ಹೇಳಿದರು.

ಪ್ರಭಾರಿ ಪಿಎಸ್‌ಐ ವಿರೂಪಾಕ್ಷ ಪ್ಪ, ಎಎಸ್‌ಐ ದೊಡ್ಡಪ್ಪ, ಸರಕಾರಿ ಬಾಲಕಿಯರ ಪ್ರೌಢ ಶಾಲೆಯ ಮುಖ್ಯಶಿಕ್ಷ ಕ ಎಚ್‌ ಬಿ ದುರುಗಣ್ಣವರ್‌, ಉಪನ್ಯಾಸಕ ಲೋಹಿತ್‌ ನಾಯಕ, ಆರಿಫ್‌ ಅಹ್ಮದ್‌, ಅರುಣಾ ಕುಮಾರಿ, ಪೇದೆಗಳಾದ ಮಲ್ಲಿಕಾರ್ಜುನ ಪಾಟೀಲ, ಬಸವರಾಜ, ವೀರೇಶ, ಸಾವಿತ್ರಿ, ಪ್ರೇಮಾ ಗೌಡರ ಹಾಗೂ ಶಾಲಾ -ಕಾಲೇಜುಗಳ ಉಪನ್ಯಾಸಕರು ಸೇರಿ ವಿದ್ಯಾರ್ಥಿಗಳು ಇದ್ದರು.

ಬಾಲಕಿಯರ ಸರಕಾರಿ ಸಂಯುಕ್ತ ಪದವೀ ಪೂರ್ವ ಕಾಲೇಜಿನ ಪ್ರಾಚಾರ್ಯ

ಡಾ.ಎಸ್‌.ಎಸ್‌.ಪೋರೆ ಅಧ್ಯಕ್ಷ ತೆ ವಹಿಸಿದ್ದರು.

ಸಹ ಶಿಕ್ಷ ಕ ನಾಗರಾಜ ಎಲಿಗಾರ, ಶಿಕ್ಷ ಕಿ ಜ್ಯೋತಿ ಹಳ್ಳೂರು ನಿರ್ವಹಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ