ಆ್ಯಪ್ನಗರ

ಜೆಸ್ಕಾ ಅಧಿಕಾರಿಗಳ ಅಮಾನತ್ತಿಗೆ ಆಗ್ರಹ

ಕಾರಟಗಿಯ 'ವಿಜಯ ಕರ್ನಾಟಕ' ಪತ್ರಿಕೆ ವರದಿಗಾರರ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಲು ಷಡ್ಯಂತ್ರ ಹೂಡಿದ ಎಇಇ ರಾಮಚಂದ್ರ ಸುತಾರ, ಎಇ ಜ್ಯೋತಿ ಅವರನ್ನು ಅಮಾನತುಗೊಳಿಸುವಂತೆ ಆಗ್ರಹಿಸಿ ಕೊಪ್ಪಳ ಮೀಡಿಯಾ ಕ್ಲಬ್‌ನ ಸದಸ್ಯರು ನಗರದ ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿ ಎಂ.ಕನಗವಲ್ಲಿ ಅವರಿಗೆ ಗುರುವಾರ ಮನವಿ ಸಲ್ಲಿಸಿದರು.

Vijaya Karnataka 27 Oct 2017, 5:00 am

ಕೊಪ್ಪಳ: ಕಾರಟಗಿಯ 'ವಿಜಯ ಕರ್ನಾಟಕ' ಪತ್ರಿಕೆ ವರದಿಗಾರರ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಲು ಷಡ್ಯಂತ್ರ ಹೂಡಿದ ಎಇಇ ರಾಮಚಂದ್ರ ಸುತಾರ, ಎಇ ಜ್ಯೋತಿ ಅವರನ್ನು ಅಮಾನತುಗೊಳಿಸುವಂತೆ ಆಗ್ರಹಿಸಿ ಕೊಪ್ಪಳ ಮೀಡಿಯಾ ಕ್ಲಬ್‌ನ ಸದಸ್ಯರು ನಗರದ ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿ ಎಂ.ಕನಗವಲ್ಲಿ ಅವರಿಗೆ ಗುರುವಾರ ಮನವಿ ಸಲ್ಲಿಸಿದರು.

ಅ.22 ರಂದು 'ವಿಜಯ ಕರ್ನಾಟಕ' ಪತ್ರಿಕೆಯ ವರದಿಗಾರ ಜೆಸ್ಕಾಂ ನಡೆಸುವ ಗ್ರಾಹಕರ ಸಭೆ ಕುರಿತು ವರದಿ ಬರೆದ ಹಿನ್ನೆಲೆಯಲ್ಲಿ ಅಧಿಕಾರಿಗಳು ಅವರ ವಿರುದ್ಧ ದೂರು ದಾಖಲಿಸಲು ಷಡ್ಯಂತ್ರ ನಡೆಸಿರುವುದು ಖಂಡನೀಯ. ಆದರೆ, ಗ್ರಾಹಕರ ಸಭೆಯಲ್ಲಿ ಸಾರ್ವಜನಿಕರ ಸಂಖ್ಯೆ ಕಡಿಮೆ ಭಾಗವಹಿಸಿದ ಬಗ್ಗೆ ಹಾಗೂ ವರದಿಗೆ ಸಂಬಂಧಿಸಿದಂತೆ ಅಧಿಕಾರಿಗಳ ಅಭಿಪ್ರಾಯದೊಂದಿಗೆ ಪ್ರಕಟಗೊಂಡಿತ್ತು. ಇದನ್ನು ಜೆಸ್ಕಾಂ ಇಲಾಖೆಯ ಎಇಇ ರಾಮಚಂದ್ರ ಸುತಾರ, ಎಇ ಜ್ಯೋತಿ ವೈಯಕ್ತಿಕವಾಗಿ ಪಡೆದು ವರದಿಗಾರನ ಮನೆಯ ವಿದ್ಯುತ್‌ ಮೀಟರ್‌ ನೇರ ಸಂಪರ್ಕಗೊಳಿಸಲು ಸಂಚು ರೂಪಿಸಿದ್ದರು. ಇಂತಹ ಪಿತೂರಿ ನಡೆಸಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಕೂಡಲೇ ತನಿಖೆ ನಡೆಸಿ, ಅಧಿಕಾರಿಗಳನ್ನು ಅಮಾನತುಗೊಳಿಸಬೇಕು ಎಂದು ಆಗ್ರಹಿಸಿದರು.

ಕ್ಲಬ್‌ ಅಧ್ಯಕ್ಷ ದೊಡ್ಡೇಶ್‌ ಯಲಿಗಾರ, ಪತ್ರಕರ್ತರಾದ ಸೋಮರಡ್ಡಿ ಅಳವಂಡಿ, ಬಸವರಾಜ ಬಿನ್ನಾಳ, ಶಿವಕುಮಾರ ಪತ್ತಾರ, ತಿಪ್ಪನಗೌಡ ಮಾಲಿಪಾಟೀಲ್‌, ಶಿವಕುಮಾರ ಪತ್ತಾರ, ಶ್ರೀಪಾದ ಆಯಾಚಿತ್ತ, ದತ್ತು ಕಮ್ಮಾರ, ಬಸವರಾಜ ಕರ್ಕಿಹಳ್ಳಿ, ಶರಣಬಸವ ಹುಲಿಹೈದರ್‌, ರವೀಂದ್ರ.ವಿ.ಕೆ., ನಾಭಿರಾಜ ದಸ್ತೇನವರ, ವಿನಾಯಕ, ಸಮೀರ್‌ ಪಾಟೀಲ್‌,ಶ್ರೀಕಾಂತ ಅಕ್ಕಿ ಸೇರಿದಂತೆ ಇತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ