ಆ್ಯಪ್ನಗರ

11 ದಿನ ಪೂರೈಸಿದ ದೊಡ್ಲ ಡೈರಿ ನೌಕರರ ಪ್ರತಿಭಟನೆ

ತಾಲೂಕಿನ ಇಂದರಗಿ ಬಳಿಯ ದೊಡ್ಲ ಹಾಲಿನ ಡೈರಿಯ ನೌಕರರು ನಡೆಸುತ್ತಿರುವ ಅನಿರ್ದಿಷ್ಟಾವಧಿ ಧರಣಿಯು ಮಂಗಳವಾರದಂದು 11 ದಿನಗಳನ್ನು ಪೂರೈಸಿತು.

Vijaya Karnataka 18 Jul 2018, 5:00 am
ಗಂಗಾವತಿ ; ತಾಲೂಕಿನ ಇಂದರಗಿ ಬಳಿಯ ದೊಡ್ಲ ಹಾಲಿನ ಡೈರಿಯ ನೌಕರರು ನಡೆಸುತ್ತಿರುವ ಅನಿರ್ದಿಷ್ಟಾವಧಿ ಧರಣಿಯು ಮಂಗಳವಾರದಂದು 11 ದಿನಗಳನ್ನು ಪೂರೈಸಿತು.
Vijaya Karnataka Web KPL-KPL17CM05


ದೊಡ್ಲ ಹಾಲಿನ ಡೈರಿಯಲ್ಲಿ ಕೆಲಸ ಮಾಡುತ್ತಿದ್ದ ಸ್ಥಳೀಯ ನೌಕರರನ್ನು ಏಕಾಏಕಿ ಕೆಲಸದಿಂದ ತೆಗೆದು ಹಾಕಲಾಗಿದೆ. ಕಂಪನಿಯು ಆರಂಭವಾದಗಿನಿಂದ 150ಕ್ಕೂ ಹೆಚ್ಚು ಸ್ಥಳೀಯ ನೌಕರರೇ ಇಲ್ಲಿ ಕೆಲಸ ಮಾಡುತ್ತ ಬಂದಿದ್ದಾರೆ. ಆದರೆ ಸದ್ಯ ಸ್ಥಳೀಯರನ್ನು ಕೆಲಸದಿಂದ ತೆಗೆದು ಹಾಕಿದ್ದರಿಂದ ನೌಕರರ ಕುಟುಂಬಗಳು ಬೀದಿಗೆ ಬೀಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಸ್ಥಳೀಯರನ್ನು ಕಣೆಗಣಿಸಿ ಆಂಧ್ರ ಮೂಲದವರನ್ನು ನೇಮಿಸಿಕೊಳ್ಳಲು ಮುಂದಾಗಿದ್ದಾರೆ. ಇದನ್ನು ಖಂಡಿಸಿ ಸ್ಥಳೀಯ ನೌಕರರು ಕಳೆದ 11 ದಿನಗಳಿಂದ ಅನಿರ್ಧಿಷ್ಟಾವಧಿ ಧರಣಿ ನಡೆಸುತ್ತಿದ್ದಾರೆ. ಪ್ರತಿಭಟನಾ ಸ್ಥಳಕ್ಕೆ ಶಾಸಕ ಪರಣ್ಣ ಮುನವಳ್ಳಿ ಭೇಟಿ ನೀಡಿ, ಕಂಪನಿಯವರೊಂದಿಗೆ ಮಾತುಕತೆ ನಡೆಸಿದರು. ಬಿಜೆಪಿ ಮುಖಂಡರಾದ ತಿಪ್ಪೇರುದ್ರಸ್ವಾಮಿ, ಯಮನಪ್ಪ ವಿಠಲಾಪುರ, ವೆಂಕಟೇಶ, ಹನುಮೇಶ ಮಡಿವಾಳ, ಫಕೀರಪ್ಪ, ಮಂಜುನಾಥ ಕಟ್ಟಿಮನಿ, ನೌಕರರಾದ ಹನುಮಂತಪ್ಪ, ಯಮನೂರಪ್ಪ, ಲಕ್ಷ ್ಮಣ ನಾಯಕ ಹಾಗೂ ಇತರರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ