ಆ್ಯಪ್ನಗರ

ದೇಶೀ ಕ್ರೀಡೆಗಳಿಗೆ ಪ್ರೋತ್ಸಾಹ ನೀಡಿ

ದೇಶೀ ಕ್ರೀಡೆಗಳಿಗೆ ಪ್ರೋತ್ಸಾಹದ ಅಗತ್ಯತೆ ಇದೆ ಎಂದು ಸಂಸದ ಸಂಗಣ್ಣ ಕರಡಿ ಹೇಳಿದರು.

Vijaya Karnataka 3 Sep 2018, 5:42 pm
ಕುಷ್ಟಗಿ : ದೇಶೀ ಕ್ರೀಡೆಗಳಿಗೆ ಪ್ರೋತ್ಸಾಹದ ಅಗತ್ಯತೆ ಇದೆ ಎಂದು ಸಂಸದ ಸಂಗಣ್ಣ ಕರಡಿ ಹೇಳಿದರು.
Vijaya Karnataka Web encourage indigenous sports
ದೇಶೀ ಕ್ರೀಡೆಗಳಿಗೆ ಪ್ರೋತ್ಸಾಹ ನೀಡಿ


ತಾಲೂಕಿನ ಕಂದಕೂರು ಗ್ರಾಮಸ್ಥರು ಏರ್ಪಡಿಸಿದ್ದ ಎತ್ತುಗಳಿಂದ ಭಾರ ಎಳೆಯುವ ಸ್ಪರ್ಧೆಗೆ ಚಾಲನೆ ನೀಡಿ ಭಾನುವಾರ ಮಾತನಾಡಿದರು. ಕಬಡ್ಡಿ, ಮುಂಗೈ ಆಟ, ಕುಸ್ತಿ, ಚಿಣಿಪಣಿ ಸೇರಿದಂತೆ ಅನೇಕ ಗ್ರಾಮೀಣ ಆಟಗಳು ಪ್ರಾಶಸ್ತ್ಯ ಕಳೆದುಕೊಳ್ಳುತ್ತಿವೆ. ಕ್ರಿಕೆಟ್‌ ಸೇರಿದಂತೆ ಆಧುನಿಕ ಆಟಗಳ ವೀಕ್ಷ ಣೆ ಹೆಚ್ಚಿದೆ. ಕ್ರೀಡೆಗಳು ಮನುಷ್ಯನ ಕ್ರಿಯಾಶೀಲತೆ ಹೆಚ್ಚಿಸುತ್ತವೆ ಎಂದರು.

ಜಿ.ಪಂ.ಸದಸ್ಯ ಕೆ.ಮಹೇಶ, ಕಾಂಗ್ರೆಸ್‌ ಮುಖಂಡ ಕಂದಕೂರಪ್ಪ ವಾಲ್ಮೀಕಿ, ಗ್ರಾಮದ ಮುಖಂಡರಾದ ಶರಣಪ್ಪ ಬಿಜಕಲ್‌, ಶೇಖರಯ್ಯ ಸಂಕೀನ್‌ ಮಾತನಾಡಿದರು.

14 ಜೋಡಿ ಎತ್ತುಗಳು ಭಾರ ಎಳೆಯುವ ಸ್ಪರ್ಧೆಯಲ್ಲಿ ಭಾಗವಹಿಸಿದ್ದವು.

ಮಾಜಿ ಶಾಸಕ ದೊಡ್ಡನಗೌಡ ಪಾಟೀಲ್‌, ಸಂಗನಗೌಡ ಟೆಂಗುಂಟಿ, ಯಮನಪ್ಪ ಗುಮಗೇರಿ, ವೀರಭದ್ರಯ್ಯ ಸೂಡಿ, ಶರಣಪ್ಪ ಗೋಪಾಳಿ, ಎಸ್‌.ಕೆ.ಪಾಟೀಲ್‌, ಮಲ್ಲಪ್ಪ ಕುಂಬಾರ, ಎಸ್‌.ವೈ.ಚೆನ್ನಿ, ಕಲ್ಲಯ್ಯ ಸಂಕೀನ್‌, ಮರಿಯಪ್ಪ ಚಲುವಾದಿ, ವೀರೇಶಯ್ಯ ಸಂಕೀನ್‌, ಮಾರುತಿ ಹಲಗಿ, ಎಪಿಎಂಸಿ ಸದಸ್ಯ ಶರಣಗೌಡ, ಹನುಮಂತಪ್ಪ ಕುರ್ನಾಳ, ಅಮರೇಶಪ್ಪ ಕುಷ್ಟಗಿ, ಬಸವರಾಜ ಹಾಳಕೇರಿ ಇದ್ದರು. ಚಂದ್ರಹಾಸ ಬಾವಿಕಟ್ಟಿ ಮತ್ತು ಹನುಮಂತಪ್ಪ ಬಿಜಕಲ್‌ ನಿರ್ವಹಿಸಿದರು.

ಫಲಿತಾಂಶ: ವಿಠಲಾಪುರ ಗ್ರಾಮದ ಮುತ್ತಣ್ಣ ಮುದ್ದಲಗುಂದಿ ಇವರ ಎತ್ತುಗಳು 24ಸೆಕೆಂಡುಗಳಲ್ಲಿ ಗುರಿ ಮುಟ್ಟಿ ಮೊದಲ ಬಹುಮಾನಕ್ಕೆ ಆಯ್ಕೆಯಾದವು. 28ಸೆಕೆಂಡುಗಳಲ್ಲಿ ಗುರಿ ತಲುಪಿದ ಹಂಚಿನಾಳ ಗ್ರಾಮದ ಶರಣಪ್ಪ ಗುಡಿಹಿಂದಲಮನಿ ಅವರ ಎತ್ತುಗಳು ಎರಡನೇ ಬಹುಮಾನ, ಕಂದಕೂರು ಗ್ರಾಮದ ಕಂದಕೂರಪ್ಪ ಮ್ಯಾಗಡೆಮನಿ ಇವರ ಎತ್ತುಗಳು 38 ಸೆಕೆಂಡುಗಳಲ್ಲಿ ನಿಗದಿತ ಗುರಿ ತಲುಪಿ ಮೂರನೇ ಬಹುಮಾನಕ್ಕೆ ಆಯ್ಕೆಯಾದವು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ