ಆ್ಯಪ್ನಗರ

ರಾಜ್ಯಮಟ್ಟದ ಕ್ರಿಕೆಟ್‌ ಪಂದ್ಯಕ್ಕೆ ಗವಿಶ್ರೀಗಳ ಚಾಲನೆ

ಸದೃಢ ಆರೋಗ್ಯಕ್ಕೆ ಕ್ರೀಡೆ ಸಹಕಾರಿಯಾಗಿದ್ದು, ಯುವಜನಾಂಗ ಕ್ರೀಡೆಗೆ ಮೊದಲ ಆದ್ಯತೆ ನೀಡಬೇಕು ಎಂದು ಕೊಪ್ಪಳ ಗವಿಸಿದ್ಧೇಶ್ವರ ಸ್ವಾಮೀಜಿ ಹೇಳಿದರು.

Vijaya Karnataka 20 Feb 2018, 5:00 am

ಗಂಗಾವತಿ: ಸದೃಢ ಆರೋಗ್ಯಕ್ಕೆ ಕ್ರೀಡೆ ಸಹಕಾರಿಯಾಗಿದ್ದು, ಯುವಜನಾಂಗ ಕ್ರೀಡೆಗೆ ಮೊದಲ ಆದ್ಯತೆ ನೀಡಬೇಕು ಎಂದು ಕೊಪ್ಪಳ ಗವಿಸಿದ್ಧೇಶ್ವರ ಸ್ವಾಮೀಜಿ ಹೇಳಿದರು.

ನಗರದ ತಾಲೂಕು ಕ್ರೀಡಾಂಗಣದಲ್ಲಿ 'ಗಂಗಾವತಿ ಕ್ರಿಕೆಟ್‌ ಕಪ್‌-2018' ವತಿಯಿಂದ ನಡೆದ ರಾಜ್ಯ ಮಟ್ಟದ ಕ್ರಿಕೆಟ್‌ ಪಂದ್ಯಕ್ಕೆ ಕೊಪ್ಪಳ ಗವಿಸಿದ್ಧೇಶ್ವರ ಸ್ವಾಮೀಜಿ ಭಾನುವಾರ ಚಾಲನೆ ನೀಡಿ ಮಾತನಾಡಿದರು. ಕ್ರೀಡಾಭಿಮಾನ ಬೆಳೆಸಿಕೊಂಡು ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಲು ಸಾಧ್ಯವಾಗಲಿದೆ. ಜಗತ್ತಿನ ಬಹುತೇಕ ರಾಷ್ಟ್ರಗಳಲ್ಲಿ ಕ್ರಿಕೆಟ್‌ ಹೆಚ್ಚಿನ ಮನ್ನಣೆ ಪಡೆಯುತ್ತಿದೆ. ಗ್ರಾಮೀಣ ಪ್ರತಿಭೆಗಳು ರಾಜ್ಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳಬೇಕು ಎಂದು ಹೇಳಿದರು.

ಕ್ರಿಕೆಟ್‌ ಪಂದ್ಯಾವಳಿ ಸಂಘಟನೆ ಅಧ್ಯಕ್ಷ ಯಂಕಪ್ಪ ಕಟ್ಟಿಮನಿ ಮಾತನಾಡಿ, ಪುಣೆ, ಹೈದರಾಬಾದ್‌, ಉತ್ತರ ಪ್ರದೇಶ, ಆದೋನಿ, ಬೆಂಗಳೂರು, ಮೈಸೂರು ಸೇರಿದಂತೆ ಒಟ್ಟು 64 ತಂಡಗಳು ಆಗಮಿಸಿವೆ. ಕ್ರೀಡಾ ಪಟುಗಳಿಗೆ ಊಟ, ವಸತಿ ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು.

ಜೆಸ್ಕಾಂ ಇಲಾಖೆ ಎಇ ಆರ್‌.ನಾಗರಾಜ, ನಗರ ಠಾಣೆ ಪಿಐ ರಾಜಕುಮಾರ ವಾಜಂತ್ರಿ, ವಾಣಿಜ್ಯೋದ್ಯಮಿ ಕೆ.ಕಾಳಪ್ಪ, ನಗರಸಭೆ ಸದಸ್ಯೆ ಸಂತೋಷಿ ಬಾಂಠಿಯಾ ಹಾಗೂ ಪ್ರಮುಖರಾದ ಅಜಿತ್‌ರಾಜ್‌ ಸುರಾನಾ, ರವಿಕುಮಾರ, ವೆಂಕಟೇಶ, ಮಂಜುನಾಥ ಹೊಸ್ಕೇರಾ, ಮುರ್ತುಜಾ ಬಾವಿಕಟ್ಟಿ, ರಮೇಶ, ಸಂಗಮೇಶ, ಡಾ.ಬಸವರಾಜ, ಕ್ರಿಕೆಟ್‌ ಪಂದ್ಯಾವಳಿ ಆಯೋಜಕರಾದ ಶೇಖ್‌ ಇಕ್ಬಾಲ್‌, ರಾಘವೇಂದ್ರ ಸಹರಾ, ಗುರುಪ್ರಸಾದ, ಲಿಂಗರಾಜ ದರೋಜಿ, ಮರಿಯಪ್ಪ ಇಂದರಗಿ, ರವಿ ಓಲಿ, ಸೂರಜ್‌ಸಿಂಗ್‌, ಹನುಮೇಶ ಗಾಂಧಿನಗರ, ಬಾಷಾ, ರಾಜಮಹ್ಮದ್‌ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ