ಆ್ಯಪ್ನಗರ

ಹಸಿರುಧ್ವಜ ಹಿಡಿದು ಓಡಾಟ: ಐವರ ಬಂಧನ

ತಾಲೂಕಿನ ಮುನಿರಾಬಾದ್‌ ಗ್ರಾಮದಲ್ಲಿ ಛತ್ರಪತಿ ಶಿವಾಜಿ ಜಯಂತಿ ಆಚರಣೆ ವೇಳೆ ಹಸಿರು ದ್ವಜ ಹಿಡಿದು ಓಡಾಡಿದ ಆರೋಪದಡಿ ಪೊಲೀಸರು ಐವರನ್ನು ಗುರುವಾರ ಬಂಧಿಸಿದ್ದಾರೆ.

Vijaya Karnataka 22 Feb 2019, 5:39 pm
ಕೊಪ್ಪಳ : ತಾಲೂಕಿನ ಮುನಿರಾಬಾದ್‌ ಗ್ರಾಮದಲ್ಲಿ ಛತ್ರಪತಿ ಶಿವಾಜಿ ಜಯಂತಿ ಆಚರಣೆ ವೇಳೆ ಹಸಿರು ದ್ವಜ ಹಿಡಿದು ಓಡಾಡಿದ ಆರೋಪದಡಿ ಪೊಲೀಸರು ಐವರನ್ನು ಗುರುವಾರ ಬಂಧಿಸಿದ್ದಾರೆ.
Vijaya Karnataka Web green flag walking five arrested
ಹಸಿರುಧ್ವಜ ಹಿಡಿದು ಓಡಾಟ: ಐವರ ಬಂಧನ


ನಿಜಾಮುದ್ದೀನ್‌, ರಶೀದ್‌, ನದೀಮ…, ಯೂನಿಸ್‌ಖಾನ್‌ ಹಾಗೂ ಹಸನ್‌ ಬಂಧಿತರು. ಶಿವಾಜಿ ಜಯಂತಿ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ಮರಾಠ ಸಮುದಾಯದಿಂದ ಬುಧವಾರ ಶಿವಾಜಿ ಜಯಂತಿ ಆಚರಣೆ ನಡೆದಿತ್ತು. ಜಯಂತಿ ಆಚರಣೆ ಸಮಿತಿ ಭಗವಾ ಧ್ವಜ ಹಿಡಿದು ಮೆರವಣಿಗೆ ನಡೆಸಲಾಗಿತ್ತು.ಈ ವೇಳೆ ಈ ಐವರು ಆರೋಪಿಗಳು ಹಸಿರು ಧ್ವಜ ಹಿಡಿದು ಓಡಾಡಿದ್ದರು. ಇಷ್ಟಕ್ಕೆ ಸುಮ್ಮನಾಗದ ಕಿಡಿಗೇಡಿಗಳು, ಈ ವಿಡಿಯೊವನ್ನು ಸಾಮಾಜಿಕ ಜಾಲತಾಣದಲ್ಲಿ ಒಂದು ಕೋಮಿನ ಭಾವನೆಗೆ ಧಕ್ಕೆ ತರುವ ರೀತಿಯಲ್ಲಿ ಪೋಸ್ಟ್‌ಮಾಡಿದ್ದರು. ಈ ಹಿನ್ನೆಲೆಯಲ್ಲಿ ಮುನಿರಾಬಾದ್‌ ಪೊಲೀಸ್‌ ಠಾಣೆಯಲ್ಲಿ ಪೋಲೀಸರು ಎರಡೂ ಸಮುದಾಯದ ಮುಖಂಡರ ಶಾಂತಿ ಸಭೆ ನಡೆಸಿದ್ದರು. ಸಭೆಯಲ್ಲಿ ಸಂಧಾನ ವಿಫಲವಾಗಿದ್ದರಿಂದ ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ