ಆ್ಯಪ್ನಗರ

ಮದುವೆಗೂ ವ್ಯಾಪಿಸಿದ ಪೌರತ್ವ ಕಿಚ್ಚು, ಕೊಪ್ಪಳದಲ್ಲಿ ಮದುಮಗನಿಂದ ಸಿಎಎ ವಿರುದ್ಧ ಪ್ರತಿಭಟನೆ

“ಸಂವಿಧಾನ ಹಾಗೂ ಮನುಷ್ಯ ವಿರೋಧಿ ಕಾಯಿದೆ ವಿರುದ್ಧ ಎಲ್ಲರೂ ಧ್ವನಿ ಎತ್ತಬೇಕು. ಮದುವೆ ಸಮಾರಂಭದ ವೇದಿಕೆಯಲ್ಲೂ ಈ ಕುರಿತು ಧ್ವನಿ ಎತ್ತಿದ್ದೇವೆ,” ಎಂದು ರಿಜ್ವಾನ್‌ ಸಾಬ್‌ ಹಾಗೂ ಮಹ್ಮದ್‌ ಇಸ್ಮಾಯಿಲ್‌ ಹೇಳಿದ್ದಾರೆ.

Vijaya Karnataka 27 Dec 2019, 7:13 pm

ಕೊಪ್ಪಳ: ದೇಶ - ವಿದೇಶಗಳಲ್ಲಿ ನಡೆಯುತ್ತಿರುವ ಎನ್‌ಆರ್‌ಸಿ ಮತ್ತು ಸಿಎಎ ವಿರೋಧಿ ಪ್ರತಿಭಟನೆ ಇದೀಗ ಮದುವೆಗೂ ಕಾಲಿಟ್ಟಿದೆ. ಇಲ್ಲಿನ ಶಾದಿ ಮಹಲ್‌ನಲ್ಲಿ ನಡೆದ ಮದುವೆ ಈ ಮೂಲಕ ಗಮನ ಸೆಳೆದಿದೆ.
Vijaya Karnataka Web NRC CAA


ನಗರದ ಶಾದಿ ಮಹಲ್‌ನಲ್ಲಿ ಶುಕ್ರವಾರ ಜರುಗಿದ ಮದುವೆ ಸಮಾರಂಭದ ವೇದಿಕೆಯಲ್ಲಿ ಮದುವೆ ವರ ಸಹಿತ ಇತರರು ಸಿಎಎ ಹಾಗೂ ಎನ್‌ಆರ್‌ಸಿ ವಿರುದ್ಧ ಪ್ರತಿಭಟಿಸುವ ಮೂಲಕ ಪೌರತ್ವ ವಿರೋಧಿ ಹೋರಾಟವನ್ನು ಮತ್ತೊಂದು ಹೆಜ್ಜೆ ಮುಂದಕ್ಕೆ ಕೊಂಡೊಯ್ದಿದ್ದಾರೆ.

ವರ ಮಹ್ಮದ್‌ ಇಸ್ಮಾಯಿಲ್‌ ತಮ್ಮ ಮದುವೆ ಸಮಾರಂಭದಲ್ಲಿ ಪೌರತ್ವ ಕಾಯಿದೆ ತಿದ್ದುಪಡಿ ವಿರೋಧಿಸಿದ ಭಿತ್ತಿ ಪತ್ರಗಳನ್ನು ಹಿಡಿದರು. ಇದಕ್ಕೆ ಅವರ ತಂದೆ ರಿಜ್ವಾನ್‌ ಸಾಬ್‌ ಹಾಗೂ ಇತರರು ಸಾಥ್‌ ನೀಡಿದರು.

ಸಿಎಎ, ಎನ್‌ಆರ್‌ಸಿಗೆ ವಿರೋಧ; ಕಾಂಗ್ರೆಸ್‌ನಿಂದ ಡಿ. 28 ಕ್ಕೆ ದೇಶಾದ್ಯಂತ ಪ್ರತಿಭಟನೆ

“ಸಂವಿಧಾನ ಹಾಗೂ ಮನುಷ್ಯ ವಿರೋಧಿ ಕಾಯಿದೆ ವಿರುದ್ಧ ಎಲ್ಲರೂ ಧ್ವನಿ ಎತ್ತಬೇಕು. ಮದುವೆ ಸಮಾರಂಭದ ವೇದಿಕೆಯಲ್ಲೂ ಈ ಕುರಿತು ಧ್ವನಿ ಎತ್ತಿದ್ದೇವೆ,” ಎಂದು ರಿಜ್ವಾನ್‌ ಸಾಬ್‌ ಹಾಗೂ ಮಹ್ಮದ್‌ ಇಸ್ಮಾಯಿಲ್‌ ಹೇಳಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ