ಆ್ಯಪ್ನಗರ

ಧಾರಾಕಾರ ಮಳೆ: 400ಕ್ಕೂ ಹೆಚ್ಚು ಕುರಿ ಸಾವು

ರಾಯಚೂರು, ಬಳ್ಳಾರಿ ಹಾಗೂ ಕೊಪ್ಪಳ ಜಿಲ್ಲೆಗಳಲ್ಲಿ ಮಂಗಳವಾರ ರಾತ್ರಿ ಧಾರಾಕಾರ ಮಳೆ ಸುರಿದಿದೆ. ಮಳೆಗೆ 400ಕ್ಕೂ ಹೆಚ್ಚು ಕುರಿಗಳು ಮೃತಪಟ್ಟಿವೆ.

ವಿಕ ಸುದ್ದಿಲೋಕ 8 Jun 2017, 8:13 am
ಗಂಗಾವತಿ: ರಾಯಚೂರು, ಬಳ್ಳಾರಿ ಹಾಗೂ ಕೊಪ್ಪಳ ಜಿಲ್ಲೆಗಳಲ್ಲಿ ಮಂಗಳವಾರ ರಾತ್ರಿ ಧಾರಾಕಾರ ಮಳೆ ಸುರಿದಿದೆ. ಮಳೆಗೆ 400ಕ್ಕೂ ಹೆಚ್ಚು ಕುರಿಗಳು ಮೃತಪಟ್ಟಿವೆ.
Vijaya Karnataka Web heavy rain more then 400 sheep death
ಧಾರಾಕಾರ ಮಳೆ: 400ಕ್ಕೂ ಹೆಚ್ಚು ಕುರಿ ಸಾವು


ಬಳ್ಳಾರಿ ನಗರದ ಬತ್ರಿ ಪ್ರದೇಶ ವ್ಯಾಪ್ತಿಯಲ್ಲಿ 230 ಹಾಗೂ ತಾಲೂಕಿನ ಬಾಣಾಪುರ, ಕೊಳಗಲ್ಲು, ಹೊನ್ನಳ್ಳಿ ಹಾಗೂ ಗುಡದೂರು ಗ್ರಾಮಗಳಲ್ಲಿ 145 ಕುರಿಗಳು ಮೃತಪಟ್ಟಿವೆ. ರಾಯಚೂರು ಜಿಲ್ಲೆ ಮುದಗಲ್ ಬಳಿಯ ಸೋಂಪುರ ಗೊಲ್ಲರಹಟ್ಟಿಯಲ್ಲಿ 42, ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲೂಕಿನ ಹಡಗಲಿ ಹೊರವಲಯದಲ್ಲಿ 15 ಹಾಗೂ ಯಲಬುರ್ಗಾ ತಾಲೂಕಿನ ನರಸಾಪುರ ಗ್ರಾಮದಲ್ಲಿ 6 ಕುರಿಗಳು ಮಳೆಯ ಹೊಡೆತಕ್ಕೆ ಬಲಿಯಾಗಿವೆ. ಸಿಂಧನೂರು ತಾಲೂಕಿನ ಗುಂಜಳ್ಳಿಯಲ್ಲಿ 71ಮಿ.ಮೀ. ಮಳೆಯಾಗಿದೆ. ಬಳ್ಳಾರಿ ಬಾಪೂಜಿ ನಗರದಲ್ಲಿ ವಿದ್ಯುತ್ ಸ್ಪರ್ಶದಿಂದ ಜಾನುವಾರು ಮೃತಪಟ್ಟಿದೆ. ಸತ್ಯನಾರಾಯಣ ಪೇಟೆ ಅಡ್ಡೆರಸ್ತೆಯಲ್ಲಿ ಮರವೊಂದು ಉರುಳಿ, ಕಾಂಪೌಂಡ್ ಗೋಡೆ ಬಿದ್ದಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ