ಆ್ಯಪ್ನಗರ

‘ಪರಿಸರ ಉಳಿದರೆ ಜೀವಸಂಕುಲ ಉಳಿದಂತೆ’

ದಿನದಿಂದ ದಿನಕ್ಕೆ ಕಾಡಿನ ಪ್ರಮಾಣ ಕಡಿಮೆಯಾಗುತ್ತಿದೆ. ಇದರಿಂದ ಜಾಗತಿಕ ತಾಪಮಾನದಲ್ಲಿ ಏರಿಕೆ ಕಂಡುಬರುತ್ತಿದೆ. ಪರಿಸರ ಉಳಿದರೆ ಜೀವಸಂಕುಲದ ರಕ್ಷಣೆ ಸಾಧ್ಯ. ಇಲ್ಲದೇ ಹೋದರೆ ಮುಂಬರುವ ದಿನಗಳಲ್ಲಿ ಎಲ್ಲರೂ ಸಮಸ್ಯೆ ಎದುರಿಸಬೇಕಾಗುತ್ತದೆ ಎಂದು ಪಿಎಸ್‌ಐ ಶಿವರಾಜ ಇಂಗಳೆ ಹೇಳಿದರು.

Vijaya Karnataka 16 Jun 2018, 5:00 am
ತಾವರಗೇರಾ : ದಿನದಿಂದ ದಿನಕ್ಕೆ ಕಾಡಿನ ಪ್ರಮಾಣ ಕಡಿಮೆಯಾಗುತ್ತಿದೆ. ಇದರಿಂದ ಜಾಗತಿಕ ತಾಪಮಾನದಲ್ಲಿ ಏರಿಕೆ ಕಂಡುಬರುತ್ತಿದೆ. ಪರಿಸರ ಉಳಿದರೆ ಜೀವಸಂಕುಲದ ರಕ್ಷಣೆ ಸಾಧ್ಯ. ಇಲ್ಲದೇ ಹೋದರೆ ಮುಂಬರುವ ದಿನಗಳಲ್ಲಿ ಎಲ್ಲರೂ ಸಮಸ್ಯೆ ಎದುರಿಸಬೇಕಾಗುತ್ತದೆ ಎಂದು ಪಿಎಸ್‌ಐ ಶಿವರಾಜ ಇಂಗಳೆ ಹೇಳಿದರು.
Vijaya Karnataka Web KPL-KPL 15 TVG P01


ಸಮೀಪದ ಕಿಲಾರಹಟ್ಟಿ ಸರಕಾರಿ ಪ್ರೌಢ ಶಾಲೆಯ ಆವರಣದಲ್ಲಿ ಯುವಾ ಬ್ರಿ ಗೇಡ್‌ನಿಂದ ಶುಕ್ರವಾರ ಹಮ್ಮಿಕೊಂಡಿದ್ದ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಪ್ರತಿಯೊಬ್ಬರು ಒಂದೊಂದು ಗಿಡಗಳನ್ನು ಬೆಳೆಸಬೇಕು. ಜಮೀನು ಹಾಗೂ ಮನೆ ಮುಂದಿನ ಆವರಣದಲ್ಲಿ ಸಸಿಗಳ ಪೋಷಣೆ ಮಾಡುವ ಮೂಲಕ ಇತರರಿಗೆ ಮಾದರಿಯಾಗಬೇಕು. ಪೋಕ್ಸೊ ಕಾಯಿದೆಯ ಬಗ್ಗೆ ತಿಳಿವಳಿಕೆ ಮೂಡಿಸಿದ ಅವರು, ಬಾಲಕಿಯರಿಗೆ ಯಾರಾದರೂ ಕಿರುಕುಳ ನೀಡುತ್ತಿದ್ದರೆ, ದೌರ್ಜನ್ಯಕ್ಕೆ ಮುಂದಾದೆ, ಚುಡಾಯಿಸಿದರೆ ಠಾಣೆಗೆ ಮಾಹಿತಿ ನೀಡಬೇಕು. ಮಾಹಿತಿ ನೀಡಿದವರ ಹೆಸರನ್ನು ಬಹಿರಂಗಪಡಿಸುವುದಿಲ್ಲ ಎಂದು ಹೇಳಿದರು.

ಯುವಾ ಬ್ರಿ ಗೇಡ್‌ನ ಲಕ್ಷ ್ಮಣಸಿಂಗ್‌ ಹೊಗರನಾಳ, ಪತಂಜಲಿ ಯೋಗ ಸಮೀತಿ ತಾಲೂಕು ಪ್ರಭಾರಿ ಶಕೀಲಾ ಶೆಟ್ಟಿ, ಸೈನಿಕ ದೇವೇಂದ್ರಪ್ಪ ದಾಸರ ಮಾತನಾಡಿದರು. ಶ್ಯಾಮ ಭಂಗಿ, ಇಂದ್ರೇಶ ಮಡಿವಾಳರ, ಅಶೋಕ ಶೆಟ್ಟಿ, ಗ್ರಾಮದ ಮುಖಂಡ ಶರಣೇಗೌಡ ಪೊಲೀಸ್‌ ಪಾಟೀಲ, ಗ್ರಾ.ಪಂ ಸದಸ್ಯ ನರಸಪ್ಪ ಬಿಂಗಿ, ಬಾಲಚಂದ್ರಪ್ಪ, ಸಣ್ಣ ಗಂಗಪ್ಪ, ಮಾನನಗೌಡ, ಮುದಿಯಪ್ಪ ಇನ್ನಿತರರಿದ್ದರು. ಪ್ರೌಢ ಶಾಲೆ ಮುಖ್ಯ ಶಿಕ್ಷ ಕ ಯಲ್ಲಪ್ಪ ನಾಯಕ, ಶಿಕ್ಷ ಕಿ ಸೀತಾ, ಶಿಕ್ಷ ಕ ಮಲ್ಲಪ್ಪ ಓಲಿ ನಿರ್ವಹಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ