ಆ್ಯಪ್ನಗರ

ಶೆಟ್ಟರ್‌ ವಿರುದ್ಧದ ಅಕ್ರಮ ದಾಖಲೆ ಬಿಡುಗಡೆ: ಹಿರೇಮಠ್‌

ಮಾಜಿ ಸಿಎಂ ಜಗದೀಶ್ ಶೆಟ್ಟರ್ ವಿರುದ್ಧದ ಅಕ್ರಮ ಕುರಿತು ಶೀಘ್ರದಲ್ಲಿಯೇ ದಾಖಲೆ ಬಿಡುಗಡೆಗೊಳಿಸಲಾಗುವುದು ಎಂದು ಜನಾಂದೋಲನ ಮಹಾ ಮೈತ್ರಿ ಮುಖಂಡ ಎಸ್ .ಆರ್ ಹಿರೇಮಠ ಹೇಳಿದರು.

Vijaya Karnataka Web 13 Apr 2018, 12:47 pm
ಕೊಪ್ಪಳ: ಮಾಜಿ ಸಿಎಂ ಜಗದೀಶ್ ಶೆಟ್ಟರ್ ವಿರುದ್ಧದ ಅಕ್ರಮ ಕುರಿತು ಶೀಘ್ರದಲ್ಲಿಯೇ ದಾಖಲೆ ಬಿಡುಗಡೆಗೊಳಿಸಲಾಗುವುದು ಎಂದು ಜನಾಂದೋಲನ ಮಹಾ ಮೈತ್ರಿ ಮುಖಂಡ ಎಸ್ .ಆರ್ ಹಿರೇಮಠ ಹೇಳಿದರು.
Vijaya Karnataka Web hiremath


ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶೆಟ್ಟರ್ ಅವರನ್ನು ಸರಳ, ಸಜ್ಜನ, ನಿಷ್ಕಳಂಕ ರಾಜಕಾರಣಿ ಎಂದು ಹೇಳುತ್ತಾರೆ. ಆದರೆ ಲೋಕಾಯುಕ್ತರನ್ನಾಗಿ ಕಳಂಕಿತ ಭಾಸ್ಕರ್ ರಾವ್ ಅವರನ್ನು ನೇಮಿಸಿದರು. ಇದಕ್ಕೆ ವಕೀಲರ ಸಂಘ ತೀವ್ರ ವಿರೋಧ ವ್ಯಕ್ತಪಡಿಸಿತ್ತು.

ಕ್ರೀಡಾಂಗಣದ ಜಾಗ ಅತಿಕ್ರಮಣ, ವಿಮಾನ ನಿಲ್ದಾಣ ಭೂಸ್ವಾಧೀನ ಅಕ್ರಮದ ಅರ್ಧ ದಾಖಲೆಗಳು ಸಿಕ್ಕಿವೆ. ಇನ್ನೂ ಅರ್ಧ ದಾಖಲೆ ಬರಬೇಕಾಗಿದೆ. ದಾಖಲೆಗಳು ಬಂದ ಮೇಲೆ ಅಧ್ಯಯನ ಮಾಡಿ ಮಾಧ್ಯಮಗಳಿಗೆ ಬಿಡುಗಡೆಗೊಳಿಸಲಾಗುವುದು ಎಂದರು.

ಜನ ಸಂಗ್ರಾಮ ಪರಿಷತ್ ಮುಖಂಡ ರಾಘವೇಂದ್ರ ಕುಷ್ಟಗಿ ಮಾತನಾಡಿ, ಹೈದರಾಬಾದ್ ಕರ್ನಾಟಕ ವ್ಯಾಪ್ತಿಯ ಸುಮಾರು 60 ಸಾವಿರ ಉದ್ಯೋಗ ನೇಮಕಾತಿಯಲ್ಲಿ ಅನ್ಯಾಯ ಆಗಿದೆ. ಹೈ- ಕ ಅನುದಾನವನ್ನು ಅಭಿವೃದ್ಧಿಗಾಗಿ ಬಳಸದೇ ಡ್ರೋನ್‌ ಕ್ಯಾಮೆರಾ, ಕುರ್ಚಿ, ಟೇಬಲ್ ಖರೀದಿಸಿ ಪೋಲು ಮಾಡಲಾಗುತ್ತಿದೆ. ರಾಜ್ಯಪಾಲ ವಜುಭಾಯಿ ವಾಲಾ ರಾಜಕೀಯ ಫಲಾನುಭವಿ. ಇಂಥ ಅವಿವೇಕಿ ರಾಜ್ಯಪಾಲರು ನಮಗೆ ಬೇಡ. ಬೇಕಾದರೆ ನಾವು ಜೈಲಿಗೆ ಹೋಗಲು ಸಿದ್ಧ ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ