ಆ್ಯಪ್ನಗರ

ಮತದಾರರ ದಿಕ್ಕು ತಪ್ಪಿಸುವ ಸಂದೇಶ ವೈರಲ್‌ : ಪರಿಶೀಲನೆಗೆ ಸೂಚನೆ

ಮತದಾರರ ದಿಕ್ಕು ತಪ್ಪಿಸುವ ಸಂದೇಶವೊಂದು ವಾಟ್ಸ್‌ ಆ್ಯಪ್‌ನಲ್ಲಿ ಹರಿದಾಡುತ್ತಿದ್ದು, ಪರಿಶೀಲಿಸಿ ಮೂಲ ಕಂಡುಹಿಡಿಯುವಂತೆ ಇಲ್ಲಿನ ಚುನಾವಣೆ ಅಧಿಕಾರಿ ಎಚ್‌.ವಿಶ್ವನಾಥ ಅವರು ಪೊಲೀಸ್‌ ಇಲಾಖೆಗೆ ಸೋಮವಾರ ಸೂಚನೆ ನೀಡಿದ್ದಾರೆ.

Vijaya Karnataka 1 May 2018, 10:05 am
ಕುಷ್ಟಗಿ: ಮತದಾರರ ದಿಕ್ಕು ತಪ್ಪಿಸುವ ಸಂದೇಶವೊಂದು ವಾಟ್ಸ್‌ ಆ್ಯಪ್‌ನಲ್ಲಿ ಹರಿದಾಡುತ್ತಿದ್ದು, ಪರಿಶೀಲಿಸಿ ಮೂಲ ಕಂಡುಹಿಡಿಯುವಂತೆ ಇಲ್ಲಿನ ಚುನಾವಣೆ ಅಧಿಕಾರಿ ಎಚ್‌.ವಿಶ್ವನಾಥ ಅವರು ಪೊಲೀಸ್‌ ಇಲಾಖೆಗೆ ಸೋಮವಾರ ಸೂಚನೆ ನೀಡಿದ್ದಾರೆ.
Vijaya Karnataka Web karnataka election viral massage
ಮತದಾರರ ದಿಕ್ಕು ತಪ್ಪಿಸುವ ಸಂದೇಶ ವೈರಲ್‌ : ಪರಿಶೀಲನೆಗೆ ಸೂಚನೆ


ವಾಟ್ಸ್‌ ಆ್ಯಪ್‌ನಲ್ಲಿ ಹರಿದಾಡುತ್ತಿರುವ ಸಂದೇಶ ಇಲ್ಲಿ ಚರ್ಚೆಗೊಳಗಾಗಿ ಚುನಾವಣೆ ಅಧಿಕಾರಿ ಗಮನಕ್ಕೆ ಸಾರ್ವಜನಿಕರು ತಂದಿದ್ದಾರೆ. ಸಂದೇಶದಲ್ಲಿ 'ಮೇ 12ರಂದು ಇವಿಎಂ ಮಷಿನ್‌ ಸರಿಯಾಗಿದೆಯಾ ಇಲ್ಲವಾ ಅಂತ ನೋಡಲು ಮೊದಲು ತೆನೆ ಹೊತ್ತ ಮಹಿಳೆಯ ಬಟನ್‌ ಒತ್ತಿರಿ' ಎಂದಿದೆ. 9844274270 ಮೊಬೈಲ್‌ ನಂಬರ್‌ ಸುಂದ್ರೇಗೌಡ ಎನ್ನುವವರು ಈ ಸಂದೇಶವನ್ನು ವಾಟ್ಸ್‌ ಆ್ಯಪ್‌ಗೆ ಹಾಕಿದ್ದಾರೆ. ಮತದಾರರ ದಿಕ್ಕು ತಪ್ಪಿಸುವುದಕ್ಕಾಗಿ ಜೆಡಿಎಸ್‌ಗೆ ಮತ ಪಡೆಯುವ ಉದ್ದೇಶದಿಂದಲೇ ಈ ಸಂದೇಶವನ್ನು ರವಾನಿಸಿರುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ.

ಗೊಂದಲದ ಸಂದೇಶ:

ಇವಿಎಂ ಯಂತ್ರ ಸರಿಯಾಗಿ ಕೆಲಸ ನಿರ್ವಹಿಸುತ್ತಿದೆಯೇ ಎಂದು ಪರಿಶೀಲಿಸಲು ತೆನೆ ಹೊತ್ತ ಮಹಿಳೆ ಬಟನ್‌ ಒತ್ತಿದರೆ ಮತದಾರನ ಮತ ಜೆಡಿಎಸ್‌ಗೇ ಹೋಗಲಿದೆ. ಮತ ಚಲಾವಣೆಯಾದ ಮೇಲೆ ಯಂತ್ರ ಸರಿಯಾಗಿದೆಯೊ ಇಲ್ಲವೋ ಎಂದು ತಿಳಿಯುವುದೇನಿದೆ? ಮತದಾರರನ್ನು ಮೋಸಗೊಳಿಸಲೆಂದೇ ಇಂತಹ ಸಂದೇಶಗಳು ಹರಿದಾಡುತ್ತಿವೆ. ಇವಿಎಂ ಯಂತ್ರದ ಬಗ್ಗೆ ಸಾಕಷ್ಟು ಮಾಹಿತಿ ಇಲ್ಲದ ವ್ಯಕ್ತಿ ವಾಟ್ಸ್‌ ಆ್ಯಪ್‌ ಸಂದೇಶದಂತೆ ಮೊದಲು ತೆನೆ ಹೊತ್ತ ಮಹಿಳೆ ಬಟನ್‌ ಒತ್ತಿದರೆ ಹೇಗೆ ಎಂಬ ಆತಂಕ ಕಾಡುತ್ತಿದೆ. ಸಂದೇಶ ರವಾನಿಸಿರುವ ವ್ಯಕ್ತಿ, ಪರೋಕ್ಷ ವಾಗಿ ವಿದ್ಯುನ್ಮಾನ ಮತಯಂತ್ರದ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ಮತದಾರರಲ್ಲಿ ಇವಿಎಂ ಸರಿಯಾಗಿ ಕಾರ್ಯ ನಿರ್ವಹಿಸುವುದಿಲ್ಲ ಎಂಬ ಸಂಶಯ ಹುಟ್ಟಿಸುವ ಯತ್ನ ಮಾಡಿದ್ದಾರೆ.

ಪೊಲೀಸ್‌ ಇಲಾಖೆಗೆ ಸೂಚನೆ:

ಈ ಬಗ್ಗೆ ಪ್ರತಿಕ್ರಿಯಿಸಿದ ಇಲ್ಲಿನ ಚುನಾವಣೆ ಅಧಿಕಾರಿ ಎಚ್‌.ವಿಶ್ವನಾಥ, ವಾಟ್ಸ್‌ ಆ್ಯಪ್‌ನಲ್ಲಿ ಹರಿದಾಡುತ್ತಿರುವ ಈ ಸಂದೇಶವನ್ನು ಗಂಭೀರವಾಗಿ ಪರಿಗಣಿಸಲಾಗುತ್ತಿದೆ. ಇವಿಎಂ ಯಂತ್ರಗಳ ಕಾರ್ಯಕ್ಷ ಮತೆ ಬಗ್ಗೆ ಎಲ್ಲರಿಗೂ ಗೊತ್ತಿದೆ. ಪ್ರಸಕ್ತ ಚುನಾವಣೆಯಲ್ಲಿ ಇವಿಎಂನೊಂದಿಗೆ ವಿವಿಪ್ಯಾಟ್‌ ಯಂತ್ರವನ್ನೂ ಬಳಸಲಾಗುತ್ತಿದೆ. ವಾಟ್ಸ್‌ ಆ್ಯಪ್‌ನಲ್ಲಿ ಬಂದಿರುವುದು ಶುದ್ಧ ಸುಳ್ಳು ಸಂದೇಶವಾಗಿದೆ. ಸಾರ್ವಜನಿಕರು ಇಂತಹ ದಾರಿತಪ್ಪಿಸುವ ಸಂದೇಶಗಳಿಗೆ ಮಹತ್ವ ನೀಡದೇ ನೇರವಾಗಿ ತಮಗೆ ಇಷ್ಟವಾದ ಅಭ್ಯರ್ಥಿಗೆ ನಿರ್ಭೀತಿಯಿಂದ ಮತ ಹಾಕಬೇಕು. ಜನರನ್ನು ತಪ್ಪುದಾರಿಗೆ ಎಳೆಯಲು ವಾಟ್ಸ್‌ ಆ್ಯಪ್‌ ಸಂದೇಶ ಮೂಲಕ ಪ್ರಯತ್ನಿಸಿರುವ ವ್ಯಕ್ತಿ ಯಾರು? ಎನ್ನುವುದನ್ನು ಪತ್ತೆ ಮಾಡಲು ಪೊಲೀಸ್‌ ಇಲಾಖೆಗೆ ಸೂಚನೆ ನೀಡಲಾಗುವುದು. ಇದು ಖಂಡಿತ ಅಪರಾಧವಾಗುತ್ತದೆ ಎಂದರು.

ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿರುವಾಗಲೇ ಕೆಲವರು ಅಭಿಯಾನ, ಸಮಾವೇಶ ನಡೆಸಲು ಮುಂದಾಗಿದ್ದಾರೆ. ಸಂಘಟನೆಯೊಂದು ಮೇ 2ರಂದು ಸಂವಿಧಾನ ಉಳಿಸಿ ಆಂದೋಲನ ಕಾರ್ಯಕ್ರಮವನ್ನು ಆಯೋಜಿಸುತ್ತಿದೆ. ಕಾರ್ಯಕ್ರಮದಲ್ಲಿ ಭಾಗವಹಿಸುವ ಭಾಷಣಕಾರರು ಯಾವುದೇ ರಾಜಕೀಯ ವಿಷಯಗಳ ಬಗ್ಗೆ ಮಾತನಾಡಬಾರದು. ಭಾಷಣದಲ್ಲಿ ಯಾವುದೇ ರಾಜಕೀಯ ಮುಖಂಡ, ಪಕ್ಷ ದ ಹೆಸರು ಪ್ರಸ್ತುತಪಡಿಸುವಂತಿಲ್ಲ. ಕಾರ್ಯಕ್ರಮ ರಾಜಕೀಯದ್ದಲ್ಲ ಎಂದು ಸಂಘಟಕರು ಹೇಳಿದ್ದಕ್ಕೆ ಚುನಾವಣೆ ವಿಭಾಗದಿಂದ ಪರವಾನಗಿ ನೀಡಲು ಬರುವುದಿಲ್ಲ. ಪೊಲೀಸ್‌ ಇಲಾಖೆಯವರು ಪರಿಶೀಲಿಸಿ ಪರವಾನಗಿ ನೀಡಬಹುದು. ಕಾರ್ಯಕ್ರಮ ನಡೆಯುವ ವೇಳೆ ಚುನಾವಣೆ ಸಿಬ್ಬಂದಿ ಸ್ಥಳದಲ್ಲಿ ಹಾಜರಿದ್ದು ಅಲ್ಲಿ ನಡೆಯುವ ಚಟುವಟಿಕೆಗಳು, ಭಾಷಣಗಳನ್ನು ಗಮನಿಸುತ್ತಾರೆ. ಚುನಾವಣೆ ನೀತಿಸಂಹಿತೆಗೆ ವಿರುದ್ಧವಾದ ಅಂಶಗಳು ಕಂಡುಬಂದರೆ ತಕ್ಷ ಣ ಪ್ರಕರಣ ದಾಖಲಿಸಿಕೊಳ್ಳಲಾಗುತ್ತದೆ ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ