ಆ್ಯಪ್ನಗರ

ಕೊಪ್ಪಳದ ಲೇಬಗೇರಿ ಗ್ರಾಮದಲ್ಲಿ ಮುಳ್ಳಿನ ಮೇಲೆ ಜಿಗಿದು ಭಕ್ತಿ ಸಮರ್ಪಿಸಿದ ಭಕ್ತರು

ಭಾರತದಲ್ಲಿ ಒಂದೊಂದು ಕಡೆ ಒಂದೊಂದು ರೀತಿ ಆಚರಣೆ ನಡೆಯುತ್ತದೆ. ಇದೇ ರೀತಿ ಕೊಪ್ಪಳ ತಾಲೂಕಿನ ಜಾತ್ರೆಯಲ್ಲಿ ಭಕ್ತರು ಮುಳ್ಳಿನ ಬೇಲಿ ಮೇಲೆ ಜಿಗಿಯುತ್ತಾರೆ. ಪ್ರತಿ ವರ್ಷ ಇಲ್ಲಿ ನಡೆಯುವ ಜಾತ್ರೆಯಲ್ಲಿ ಈ ರೀತಿ ಆಚರಣೆ ನಡೆಯುತ್ತದೆ.

Vijaya Karnataka Web 30 Nov 2019, 5:44 pm
ಕೊಪ್ಪಳ: ತಾಲೂಕಿನ ಲೇಬಗೇರಿ ಗ್ರಾಮದ ಶ್ರೀ ಮಾರುತೇಶ್ವರ ಕಾರ್ತಿಕೋತ್ಸವದ ನಿಮಿತ್ತ ಭಕ್ತರು ಮುಳ್ಳಿನ ಮೇಲೆ ಜಿಗಿದು ಭಕ್ತಿ ಸಮರ್ಪಿಸಿದರು.
Vijaya Karnataka Web koppal


ನವೆಂಬರ್ 30, 2019 ರಂದು ಶನಿವಾರ ಕಾರ್ತಿಕೋತ್ಸವದ ನಿಮಿತ್ತ ಕೊಪ್ಪಳ ತಾಲೂಕಿನ ಲೇಬಗೇರಿ ಗ್ರಾಮದಲ್ಲಿ ನಡೆದ ಜಾತ್ರೆಯಲ್ಲಿ ಮುಳ್ಳಿನ ರಾಶಿಯಲ್ಲಿ ಭಕ್ತರು ಜಿಗಿದು ದೇಹ ದಂಡನೆ ಮಾಡಿಕೊಳ್ಳುವುದರ ಮೂಲಕ ಭಕ್ತಿ ಪರಾಕಾಷ್ಠೆ ಮೆರೆದರು.

ಇಷ್ಟಾರ್ಥಗಳನ್ನು ನೆರವೇರಿಸಿದರೆ ಮುಳ್ಳಿನ ಬೇಲಿಯಲ್ಲಿ ಜಿಗಿಯುವುದಾಗಿ ಸ್ಥಳೀಯ ಭಕ್ತರು ಹರಕೆ ಹೊತ್ತಿರುತ್ತಾರೆ. ನಂತರ ಹರಕೆ ಈಡೇರಿದ ಬಳಿಕ ಭಕ್ತರು ಮುಳ್ಳಿನ ಬೇಲಿಯಲ್ಲಿ ಜಿಗಿದು ಭಕ್ತಿ ಸಮರ್ಪಿಸುತ್ತಾರೆ. ಕೊಪ್ಪಳ ತಾಲೂಕಿನ ಲೇಬಗೇರಿ ಗ್ರಾಮದಲ್ಲಿ ಪ್ರತಿ ವರ್ಷ ಈ ರೀತಿ ವಿಶಿಷ್ಟವಾಗಿ ಜಾತ್ರೆ ನಡೆಯುತ್ತದೆ.

ಈ ಸುದ್ದಿಯನ್ನು ಓದಿ: ನಿರುಪಾದೇಶ್ವರ ರಥೋತ್ಸವ ಅದ್ಧೂರಿ

ಇದನ್ನೂ ಓದಿ: ಭಂಡಾರದೊಡೆಯನ ಜಾತ್ರೆ ‘ಅಮೋಘ’

ಬಸವನಗುಡಿ ಕಡಲೆಕಾಯಿ ಪರಿಷೆಯಲ್ಲಿ ಸ್ಯಾಂಡಲ್‍ವುಡ್ ಸೆಲೆಬ್ರಿಟಿಗಳ ಸಂಭ್ರಮ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ